
ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಅವರು ಇಂದು ಬೆಳಗ್ಗೆ 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಯಿಂದ ಬಳಲುತ್ತಿದ್ದ ಅವರಿಗೆ ರಾಜಾಜಿ ನಗರದಲ್ಲಿರುವ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಅವರಿಗೆ ಆಲ್ಜಿಮರ್ ಕಾಯಿಲೆ ಕೂಡ ಇತ್ತು ಎನ್ನಲಾಗಿದೆ.
ಪಟ್ಟಮ್ಮಾಳ್ ವೀರಸ್ವಾಮಿ ಅವರು ಕೆಲವು ವರ್ಷಗಳಿಂದ ಆಲ್ಜಿಮರ್ ಇತ್ತು. ಯಾರನ್ನು ಮರೆತಿದ್ದರೂ ರವಿಚಂದ್ರನ್ ಮತ್ತು ಅವರ ಹೆಂಡತಿಯನ್ನು ಮಾತ್ರ ಮರೆತಿರಲಿಲ್ಲ. ನಟ ಪುನೀತ್ ರಾಜ್‌ಕುಮಾರ್ ಅವರು ನಿಧನರಾದ ದಿನದಂದೇ ರವಿಚಂದ್ರನ್ ತಾಯಿ ಆರೋಗ್ಯ ಕೂಡ ಗಂಭೀರವಾಗಿತ್ತು. ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹತ್ತು ವರ್ಷಗಳ ಹಿಂದೆಯೇ ರವಿಚಂದ್ರನ್ ತಾಯಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಅವರ ಮೆದುಳು ನಿಷ್ಕ್ರಿಯ ಗೊಂಡಿದ್ದು ಒಂದು ವರ್ಷ ಮಾತ್ರ ಬದುಕುಳಿಯುತ್ತಾರೆ ಎಂದು ಹೇಳಿದ್ದರು. ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದು ರವಿಚಂದ್ರನ್ ಅವರ ಪತ್ನಿ ಸುಮತಿ ಮತ್ತು ಮಕ್ಕಳು ಆರೋಗ್ಯ ಸೇವೆ ಮಾಡುತ್ತಿದ್ದರು. ಒಂದು ವರ್ಷ ಉಳಿಯುತ್ತಾರೆ ಎಂದಿದ್ದರೂ ಹತ್ತು ವರ್ಷ ಪೂರ್ಣಗೊಂಡಿದ್ದು ಇದಕ್ಕೆ ರವಿಚಂದ್ರನ್ ಅವರ ಪತ್ನಿಯೇ ಕಾರಣ ಎನ್ನಬಹುದು. ಅತ್ತೆಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಂಡಿದ್ದರು.
ರವಿಚಂದ್ರನ್ ನಿವಾಸದ ಬಳಿ ಬೆಳಗ್ಗೆ 10.30ಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸಂಜೆ ಅಂತಿಮ ಕಾರ್ಯಗಳು ಮಾಡುವ ಸಾಧ್ಯತೆಗಳಿದೆ. ಪಟ್ಟಮ್ಮಾಳ್ ಅವರಿಗೆ ಒಟ್ಟು 5 ಜನ ಮಕ್ಕಳು, ಮೂವರು ಹೆಣ್ಣು ಇಬ್ಬರು ಗಂಡುಮಕ್ಕಳು,
ಕ್ರೇಜಿ ಸ್ಟಾರ್ ತಾಯಿಯನ್ನು ಎಷ್ಟು ಪ್ರೀತಿ ಮಾಡುತ್ತಿದ್ದರು ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಅವರ ಯುಟ್ಯೂಬ್ ಖಾತೆಯಲ್ಲಿ ತಾಯಿ ಜೊತೆಗಿರುವ ಎಲ್ಲಾ ಅದ್ಭುತ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದರು. ಬಹುತೇಕ ಸನ್ನಿವೇಶಗಳಲ್ಲಿ ತಾಯಿಯಿಂದ ಮುತ್ತು ಪಡೆಯುತ್ತಿದ್ದಾರೆ. ಪಟ್ಟಮ್ಮಾಳ್ ಅವರ ಕೊನೆಯ ದಿನಗಳಲ್ಲಿ ಸ್ವತಃ ರವಿಚಂದ್ರನ್ ಒಂದು ಫೋಟೋ ಕ್ಲಿಕ್ ಮಾಡಿದ್ದರು ಅದರಲ್ಲಿ ತಾಯಿ ಪುತ್ರ ಕೈ ಹಿಡಿದಿದ್ದಾರೆ. ಈ ಫೋಟೋ ಮನ ಮುಟ್ಟುತ್ತದೆ.
ಪಟ್ಟಮ್ಮಾಳ್ ವೀರಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.