ಸುದೀಪ್ ಈ ಮಾತು ಹೇಳಿದ್ದು ಯಾರಿಗೆ ? ನಿಮ್ಗೆ ಯಾರ ಹೆಸ್ರು ನೆನಪಾಗುತ್ತೆ?

'ಬಹಳ ಬೇಗ ಕೆಲವೊಂದನ್ನ ಬಿಟ್ಟುಬಿಡ್ತೀನಿ.. ಎಷ್ಟೋ ವರ್ಷಗಳಿಂದ ಅಂಟಿಕೊಂಡಿರ್ತೀನಿ, ತುಂಬಾ ಸ್ನೇಹಿತರು ಅಂದ್ಕೊಂಡು.. ತುಂಬಾನೇ ಅಂದ್ರೆ ತುಂಬಾನೇ.. ಆದ್ರೆ ಚಿಕ್ಕ ವಿಷ್ಯದಲ್ಲಿ ನಂಗೆ ನೋವಾಯ್ತು ಅಂತಿಟ್ಕೊಳ್ಳಿ, ನೆಕ್ಸ್ಟ್..

Kichcha Sudeep talk on his friendship and relationship

ಪ್ಯಾನ್ ಇಂಡಿಯಾ ಸ್ಟಾರ್, ಕನ್ನಡದ ನಟ ಕಿಚ್ಚ ಸುದೀಪ್ (Kichcha Sudeep) ಅವರು ಆಗಾಗ ಹಲವಾರು ವೇದಿಕೆಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ಮಾತನ್ನಾಡುತ್ತಾರೆ. ಅದನ್ನು ಮೋಟಿವೇಶನಲ್ ಸ್ಪೀಚ್ ಅಂತನೂ ಹೇಳಬಹುದು. ತಮ್ಮ ಜೀವನದ ಅನುಭವಗಳನ್ನು ಸಮಯಕ್ಕೆ ಸರಿಯಾಗಿ ಅಥವಾ ಕೇಳಿದ ಪ್ರಶ್ನೆಗೆ ಸಿಂಕ್ ಮಾಡಿಕೊಂಡು ನಟ ಸುದೀಪ್ ಅವರು ಮಾತನ್ನಾಡುತ್ತಾರೆ. ಅದನ್ನು ಬಹಳಷ್ಟು ಜನರು ಇಷ್ಟಪಡುತ್ತಾರೆ. ಅದೊಂದು ವಿಡಿಯೋ ಚೂರಲ್ಲಿ ನಟ ಸುದೀಪ್ ಹೇಳಿದ್ದು ವೈರಲ್ ಆಗ್ತಿದೆ.. ಇದು ಯಾರ ಬಗ್ಗೆ ಹೇಳಿದ್ದು? ನೀವೇ ನೋಡಿ ಹೇಳಿ..  

'ಬಹಳ ಬೇಗ ಕೆಲವೊಂದನ್ನ ಬಿಟ್ಟುಬಿಡ್ತೀನಿ.. ಎಷ್ಟೋ ವರ್ಷಗಳಿಂದ ಅಂಟಿಕೊಂಡಿರ್ತೀನಿ, ತುಂಬಾ ಸ್ನೇಹಿತರು ಅಂದ್ಕೊಂಡು.. ತುಂಬಾನೇ ಅಂದ್ರೆ ತುಂಬಾನೇ.. ಆದ್ರೆ ಚಿಕ್ಕ ವಿಷ್ಯದಲ್ಲಿ ನಂಗೆ ನೋವಾಯ್ತು ಅಂತಿಟ್ಕೊಳ್ಳಿ, ನೆಕ್ಸ್ಟ್ ನಿಮಿಷದಲ್ಲಿ ನೀವ್ಯಾರು ಅನ್ನೋದೇ ನಂಗೆ ಗೊತ್ತಿರಲ್ಲ..' ಎಂದಿದ್ದಾರೆ ನಟ ಸುದೀಪ್. ಈ ಮಾತನ್ನು ನಟ ಸುದೀಪ್ ಯಾರಿಗೆ ಅನ್ವಯಿಸಿ ಹೇಳೀರಬಹುದು? ಈ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಕೆಲವರು ಈ ಮಾತನ್ನು ನಟ ಸುದೀಪ್ ಕನ್ನಡದ ಮತ್ತೊಬ್ಬ ಸಮಕಾಲೀನ ನಟ ದರ್ಶನ್ ಬಗ್ಗೆ ಹೇಳಿರಬಹುದು ಅಂತಿದ್ದಾರೆ.  

Latest Videos

ರಶ್ಮಿಕಾ ಮಂದಣ್ಣ 'ನಿಜ ಹೆಸರು' ಬಯಲು, ಗುಟ್ಟೆಲ್ಲಾ ರಟ್ಟಾಯ್ತು!

ಇದ್ದರ ಇರಬಹುದು.. ಯಾಕಂದ್ರೆ, ಕನ್ನಡದ ಸಮಕಾಲೀನ ನಟರುಗಳಾದ ಕಿಚ್ಚ ಸುದೀಪ್ ಹಾಗು ದರ್ಶನ್ ತೂಗುದೀಪ ಇಬ್ಬರೂ ಹಿಂದೊಮ್ಮೆ ಕುಚಿಕೂ ಆಗಿದ್ದವರು. ಕಿಚ್ಚ-ದಚ್ಚು ಮಧ್ಯೆ ತುಂಬಾ ಆತ್ಮೀಯತೆ ಇತ್ತು. ಈ ಇಬ್ಬರೂ ಒಟ್ಟೊಟ್ಟಿಗೇ ಓಡಾಡಿದ್ದು, ನಕ್ಕಿದ್ದು, ಊಟ ಮಾಡಿದ್ದು, ವೇದಿಕೆ ಹಂಚಿಕೊಂಡಿದ್ದು ಎಲ್ಲವನ್ನೂ ಕನ್ನಡನಾಡು ನೋಡಿದೆ. ಆದರೆ, ಕೆಲವು ವರ್ಷಗಳ ಹಿಂದೆಯೇ ಬೇರ್ಪಟ್ಟ ಈ ಜೋಡಿ, ಈಗ ನಾನ್ಯಾರೋ ನೀನ್ಯಾರೋ ಎಂಬಂತೆ ಆಡುತ್ತಿದ್ದಾರೆ. ಆದ್ದರಿಂದ, ಈ ಮಾತನ್ನು ಸುದೀಪ್ ಅವರು ದರ್ಶನ್‌ ಉದ್ಧೇಶಿಸಿಯೇ ಹೇಳಿರಬಹುದು. ಅಥವಾ, ಅದಕ್ಕೂ ಇದಕ್ಕೂ ಸಂಬಂಧ ಇಲ್ಲದಿರಬಹುದು.

ನಾವ್ಯಾರೂ ಇಲ್ಲಿ ಶಾಶ್ವತ ಅಲ್ಲ.. ನಿಮ್ಮ ದೃಷ್ಟಿಯಲ್ಲಿ ನಾನು ದೊಡ್ದ ತಪ್ಪಿತಸ್ಥ ಆಗಿರಬಹುದು, ನಿಮ್ಮ ದೃಷ್ಟಿಯಲ್ಲಿ ನಾನು ಆಗಿರಬಹುದು. ಮುಖ್ಯವಾಗಿ ಯೋಚಿಸಬೇಕಾಗಿದ್ದು ಅಂದ್ರೆ, ಈ ವ್ಯಕ್ತಿ ನಮಗೆ ಈಗ ಬೇಕಾ? ಅನ್ನೋದು. ಬೇಕು ಅಂತಂದ್ರೆ, ಆ ಸಂಬಂಧನಾ ಉಳಿಸ್ಕೊಳ್ಳೋಕೆ ಎಲ್ಲಾ ಪ್ರಯತ್ನ ಮಾಡೋಣ.. ಬೇಡ ಅಂದ್ರೆ, ಅವ್ರನ್ನ ಬಿಟ್ಟು ಮುಂದಕ್ಕೆ ಹೋಗೋಣ.. ಅದು ಅವ್ರಿಗೂ ಒಳ್ಳೇದು, ನಮಗೂ ಒಳ್ಳೇದು.. ಅದು ಬಿಟ್ಟು ಅನಾವಶ್ಯಕ ಸಮಸ್ಯೆನಾ ಇಬ್ರೂ ಮಾಡ್ಕೊಳ್ಳೋದು ಯಾಕೆ?' ಎಂದಿದ್ದಾರೆ ಕಿಚ್ಚ ಸುದೀಪ್.

ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಯ್ತಾ? 'ಬ್ಯಾಡ್ ಬಾಯ್' ಸಲ್ಲೂ ಜೊತೆ ನಟಿಸಿದ್ದೇ ಮುಳುವಾಯ್ತಾ?

ಹೌದು, ಕಿಚ್ಚ ಸುದೀಪ್ ಅವರು ತಮ್ಮ ಜೀವನದ ಅನುಭವದ ಮೂಲಕ ಹಲವಾರು ಸಂಗತಿಗಳನ್ನು ಹೊರಜಗತ್ತಿಗೆ ಹೇಳುತ್ತಾ ಇರುತ್ತಾರೆ. ಅದನ್ನು ಕೇಳಿ, ನೋಡಿ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಹಾಕುತ್ತಾ ಇರುತ್ತಾರೆ. ಅದನ್ನು ಅವರ ಅಭಿಮಾನಿಗಳಲ್ಲಿ ಹಲವರು ಫಾಲೋ ಕೂಡ ಮಾಡಬಹುದು. ಆದರೆ, ನಟ ಸುದೀಪ್ ಅವರು ಹೇಳುವ ಮಾತುಗಳಿಗೆ ನೆಗೆಟಿವ್ ಕಾಮೆಂಟ್ಸ್ ಬರೋದು ತೀರಾ ಕಡಿಮೆ ಎನ್ನಬಹುದು.

ಅಂದಹಾಗೆ, ನಟ ಸುದೀಪ್ ಅವರು ಸದ್ಯ 'ಬಿಲ್ಲ ರಂಗ ಭಾಷ' ಸಿನಿಮಾ ಶೂಟಿಂಗ್‌ಗೆ ರೆಡಿಯಾಗುತ್ತಿದ್ದಾರೆ. ಅದಕ್ಕಾಗಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ, ಸೂಕ್ತ ಡಯಟ್ ಮಾಡುತ್ತಿದ್ದಾರೆ.  ಈ ತಿಂಗಳ 16 ರಿಂದ (16 April 2025) ಸುದೀಪ್ ನಟನೆಯ ಬಿಲ್ಲ ರಂಗ ಭಾಷ ಚಿತ್ರದ ಶೂಟಿಂಗ್ ಶುರುವಾಗುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ ಅವರು ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

19ನೇ ಪುಣ್ಯ ತಿಥಿ: ಅಣ್ಣಾವ್ರ ಈ ಸೀಕ್ರೆಟ್‌ ಇನ್ನೂ ಗೊತ್ತಿಲ್ವಾ?

ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರವು ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆ ಕಂಡು ಅಭೂತಪೂರ್ವ ಯಶಸ್ಸು ಸಾಧಿಸಿದೆ. ಈ ಚಿತ್ರವು ಕಡಿಮೆ ಬಜೆಟ್‌ನಲ್ಲಿ ರೆಡಿಯಾಗಿ ಉತ್ತಮ ಕಲೆಕ್ಷನ್ ಮಾಡಿದೆ. ನಟ ಸುದೀಪ್ ವೃತ್ತಿಜೀವನದಲ್ಲಿ ಅತ್ಯುತ್ತಮ ಗಳಿಕೆ ಕಂಡ ಸಿನಿಮಾಗಳಲ್ಲಿ ಇದೂ ಕೂಡ ಒಂದು ಎನ್ನಬಹುದು. ಈ ಚಿತ್ರವು ಸ್ವತಃ ನಟ ಸುದೀಪ್ ಅವರಿಗೆ ಗೆಲುವು ಮಾತ್ರ ತಂದುಕೊಟ್ಟಿಲ್ಲ, ಬದಲಿಗೆ ಸೋತು ಕಂಗಾಲಾಗಿದ್ದ ಕನ್ನಡ ಸಿನಿಮಾ ಉದ್ಯಮಕ್ಕೆ ಕೂಡ ಟಾನಿಕ್ ಕೊಟ್ಟಿದೆ ಎಂದು ಧಾರಾಳವಾಗಿ ಹೇಳಬಹುದು.

ಒಟ್ಟಿನಲ್ಲಿ, ನಟ ಸುದೀಪ್ ಸದ್ಯ ಕ್ರಿಕೆಟ್ ಹಾಗೂ ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋದಿಂದ ಸದ್ಯ ಹೊರಕ್ಕೆ ಬಂದಿದ್ದಾಗಿ ನಟ ಸುದೀಪ್ ಹೇಳಿಕೊಂಡಿದ್ದಾರೆ. ಬಿಗ್‌ಬಾಸ್‌ನ ಹನ್ನೊಂದು ಆವೃತ್ತಿಯನ್ನುನಿರೂಪಣೆ ಮಾಡಿರುವ ನಟ ಸುದೀಪ್ ಅವರು ಸದ್ಯಕ್ಕೆ ಅದರಿಂದ ನಿವೃತ್ತಿ ಪಡೆದಿದ್ದಾರೆ ಎನ್ನಬಹುದು. ಈ ವರ್ಷದ ಕೊನೆಯೊಳಗೆ ಬಿಲ್ಲ ರಂಗ ಭಾಷ ಚಿತ್ರವು ತೆರೆಗೆ ಬರಲಿದೆ.

ಅನಿರುದ್ಧ್ ಮ್ಯೂಸಿಕ್ ಹಬ್ಬ, 60 ನಿಮಿಷದಲ್ಲೇ ಟಿಕೆಟ್ ಸೋಲ್ಡ್ ಔಟ್!

vuukle one pixel image
click me!