
ಮೋಹಕ ತಾರೆ ರಮ್ಯಾ ಮತ್ತು ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಇತ್ತೀಚಿಗೆ ಎಲ್ಲೋ ಬೆಂಚ್ ಚರ್ಚೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವೃತ್ತಿ ಬದುಕಿನಲ್ಲಿ ಮಹಿಳೆಯರು ಎದುರಿಸುವ ಚಾಲೆಂಜ್‌ಗಳ ಬಗ್ಗೆ ಚರ್ಚಿಸಿದರು. ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳುವುದು ಎಷ್ಟು ಕಷ್ಟ, ಲೇಡಿ ಸೂಪರ್ ಸ್ಟಾರ್ ಆಗಿರಲು ರಮ್ಯಾ ಏನೆಲ್ಲಾ ಮಾಡಿದರು ಅಂತ ಹಂಚಿಕೊಂಡಿದ್ದಾರೆ.
'ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳಲು ತುಂಬಾ ಕಷ್ಟ ಇದೆ ಆದರೆ ನಿಮಗೆ ಅದು ಕಾಣಿಸದೇ ಇರಬಹುದು. ಕೆಲವೊಂದು ಘಟನೆಗಳು ಕೂಡ ಗೊತ್ತಿರುತ್ತದೆ. ಈ ಜರ್ನಿ ಅಷ್ಟು ಸುಲಭವಾಗಿ ಇರಲಿಲ್ಲ. ಮಹಿಳೆಯರಾಗಿ ನಮ್ಮ ಭವಿಷ್ಯಕ್ಕೆ ಸಾಕಷ್ಟು ತ್ಯಾಗಗಳನ್ನು ಮಾಡಬೇಕು. ನನ್ನ ಮೊದಲ ಸಿನಿಮಾದಲ್ಲಿ ನನಗೆ ಸ್ಕ್ರಿಪ್ಟ್ ಇರಲಿಲ್ಲಅದಕ್ಕೆ ಅವಾರ್ಡ್ ಕೊಡಬೇಕು. ಸೆಟ್‌ಗೆ ಹೋದಾಗ ನಿರ್ದೇಶಕರು ಇಲ್ಲಿಂದ ಅಲ್ಲಿಗೆ ಓಡಬೇಕು ಅಂತ ಹೇಳಿದಾಗ ಯಾವ ಮೂಡ್‌ನಲ್ಲಿ ಓಡಬೇಕು ಏನ್ ಮಾಡ್ತಿದ್ದೀನಿ ಅಂತಾನೇ ಗೊತ್ತಿರಲಿಲ್ಲ.ಹೀರೋಗೆ ಕಥೆ ಹೇಳಿದ ಮೇಲೆ ಹೀಯೋಯಿನ್‌ಗೆ ಯಾಕೆ ಕಥೆ ಹೇಳಬೇಕು ಅಂತ. ನನಗೆ ಕ್ಯಾರವಾನ್ ಕೊಡುತ್ತಿರಲಿಲ್ಲ ಆದರೆ ಅಪ್ಪು ಅವರು ತುಂಬಾ ಒಳ್ಳೆಯವರು, ಅವರ ವ್ಯಾನ್‌ನ ನನಗೆ ಬಳಸಿಕೊಳ್ಳಲು ಕೊಡುತ್ತಿದ್ದರು. ನನ್ನ ಮೊದಲ ಸಿನಿಮಾದಿಂದ ತುಂಬಾ ಕಲಿತಿದ್ದೀನಿ ಕಾರಣ ಅಪ್ಪು ನನ್ನ ಕೋ-ಸ್ಟಾರ್ ಹಾಗೂ ಅದು ಡಾ.ರಾಜ್‌ಕುಮಾರ್ ನಿರ್ಮಾಣ ಸಂಸ್ಥೆ ಆಗಿತ್ತು'ಎಂದು ನಟಿ ರಮ್ಯಾ ಮಾತನಾಡಿದ್ದಾರೆ.
ಇನ್ನೂ 3 ಕೆಜಿ ತೂಕ ಕಡಿಮೆ ಆಗ್ಬೇಕು, ಫ್ಯಾಮಿಲಿ ಸಪೋರ್ಟ್ ಬೇಕು: ಸಿರಿ
'ಸರಿಯಾಗಿ ಕ್ಯಾರವಾನ್ ಕೊಡುತ್ತಿರಲಿಲ್ಲ, ಒಪ್ಪಿಕೊಂಡ ಪೇಮೆಂಟ್‌ನ ಕೊನೆಯಲ್ಲಿ ಕೊಡುತ್ತಲೇ ಇರಲಿಲ್ಲ. ತುಂಬಾ ಬುದ್ಧಿವಂತಿಕೆಯಿಂದ ನಾನು ಹಣ ತೆಗೆದುಕೊಳ್ಳುವುದಿಲ್ಲ ಬರೀ ಚೆಕ್ ಅಂತ ಹೇಳಿದೆ ಆದರೆ ಕೊನೆಯಲ್ಲಿ ಚೆಕ್ ಬೌನ್ಸ್ ಆಗುತ್ತಿತ್ತು. ಅದಾದ ಮೇಲೆ ಬರೀ ಆರ್‌ಟಿಜಿಎಸ್ ಮಾಡಿ ಎಂದು ಹೇಳಲು ಶುರು ಮಾಡಿದೆ. ಪ್ರತಿ ಹಂತದಲ್ಲೂ ನನ್ನನ್ನು ಕಾಪಾಡಿಕೊಳ್ಳಲು ದಾರಿ ಹುಡುಕುತ್ತಿದ್ದೆ, ಈ ರೀತಿ ಮಾಡುತ್ತಿದ್ದ ಕಾರಣ unprofessional Arrogant ಅಂತ ಹೇಳಲು ಶುರು ಮಾಡಿದರು. ನಾನು ಇಂಡಸ್ಟ್ರಿಯಲ್ಲಿ ಸಕ್ಸಸ್‌ಫುಲ್ ಆಗಿದ್ದ ಕಾರಣ ಅವರಿಗೆ ಆಯ್ಕೆನೇ ಇರಲಿಲ್ಲ ನನ್ನನ್ನು ಸಿನಿಮಾದಲ್ಲಿ ಹಾಕೊಂಡು ಮಾಡಬೇಕಿತ್ತು' ಎಂದು ರಮ್ಯಾ ಹೇಳಿದ್ದಾರೆ.
ದರ್ಶನ್ -ಸುಮಲತಾ ಮನಸ್ತಾಪ 2 ವರ್ಷ ಮುಂದುವರೆಯಲಿದೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.