
ಕನ್ನಡದ ನಟ, ಪ್ಯಾನ್ ಇಂಡಿಯಾ ಖ್ಯಾತಿಯ ಕಿಚ್ಚ ಸುದೀಪ್ (Kichcha Sudeep) ಅವರು ಸಂದರ್ಶನಗಳಲ್ಲಿ ಬಹಳಷ್ಟು ಬೇರೆರ ಬೇರೆ ವಿಷಯಗಳ ಬಗ್ಗೆ ಬೆಳಕು ಚೆಲ್ಲಿ ಮಾತನ್ನಾಡುತ್ತಾರೆ. ಅದರಲ್ಲಿ ಹಲವು ಸಣ್ಣಸಣ್ಣ ವಿಡಿಯೋ ತುಣುಕುಗಳಾಗಿ ಸೋಷಿಯಲ್ ಮೀಡಿಯಾಗಲಲ್ಲಿ ಹರಿದಾಡುತ್ತ ಇರುತ್ತವೆ. ಇಂಥ ಒಂದು ವಿಡಿಯೋದಲ್ಲಿ ನಟ ಸುದೀಪ್ ಅವರು ಅದೇನೆಂದು ಹೇಳಿದ್ದಾರೆ ನೋಡಿ..
ನಾವು ಲೈಫಲ್ಲಿ ಬೇಳಿಬೇಕು, ಮೇಲೆ ಹೋಗ್ಬೇಕು, ಏನೇನೋ ಸಾಧನೆ ಮಾಡ್ಬೇಕು ಅನ್ನೋದೆಲ್ಲಾ ಸರಿ. ಅದಕ್ಕೆ ಸಂಬಂಧಪಟ್ಟು ಒಂದು ಬ್ಯೂಟಿಫುಲ್ ಸೇಯಿಂಗ್ ಇದೆ.. ಎಲ್ಲಾನೂ ಒಂದು ಪ್ಯಾಕೇಜ್. ಇಟ್ಸ್ ಓಕೆ.. ಆದ್ರೆ ಎಲ್ಲಾರಿಗೂ ಫೇಮಸ್ ಆಗೋದಕ್ಕಾಗ್ಲೀ, ಸಾಧನೆ ಮಾಡೋದಕ್ಕಾಗ್ಲೀ ಸಾಧ್ಯ ಆಗೋದಿಲ್ಲ.. ಇತಿಹಾಸದ ಪುಟದಲ್ಲಿ ಹೆಸರು ಬರೆದುಕೊಳ್ಳೋಕೆ ಎಲ್ರಿಗೂ ಆಗಲ್ಲ.. ಭಗವಂತ, ಪ್ರಕೃತಿ ನಮಗೆ ಅದನ್ನ ಕೊಟ್ಟಿದೆ ಅಂದಾಗ, ಅದರೊಟ್ಟಿಗೆ ಹೋಗ್ಬಿಡಿ..
ದರ್ಶನ್-ರಚಿತಾ ರಾಮ್ ಕೂಡ ಇದೇ ಕೆಟಗರಿಗೆ ಸೇರಿದವ್ರು.. ಇವ್ರೆಲ್ಲಾ ಒಂದೇ ಥರದವ್ರು ನೋಡಿ..!
ಅದರರ್ಥ ನೀವು ಏನೋ ಮಾಡೋಕೆ ಅಂತಲೇ ಹುಟ್ಟಿದೀರ.. ಮಾಡಿ ಅದನ್ನ.. ಅದ್ರ ಬಗ್ಗೆ ಇದೂ ಬೇಕು, ಅದೂ ಬೇಕು, ಎಲ್ಲಾನೂ ಬೇಕು ಅಂದ್ರೆ ಅದೆಲ್ಲಾ ಸಾಧ್ಯ ಇಲ್ಲ.. ಎಲ್ಲಾನೂ ಬೇಕು ಅನ್ನೋದನ್ನ ಸಾಧನೆ ಅನ್ನಲ್ಲ, ಸ್ವಾರ್ಥ ಅಂತಾರೆ.. ' ಅದನ್ನ ಯಾಕೆ ಮಾಡ್ಬೇಕು?' ಎಂದಿದ್ದಾರೆ ನಟ ಕಿಚ್ಚ ಸುದೀಪ್. ಹಾಗಿದ್ರೆ ಈ ಮಾತುಗಳನ್ನು ನಟ ಸುದೀಪ್ ಯಾಕಾಗಿ ಹೇಳೋ ಸಂದರ್ಭ ಬಂತು? ಅಲ್ಲೇ ಇರೋದು ಸೀಕ್ರೆಟ್..
ನಟ ಸುದೀಪ್ ಅವರಿಗೆ ಆಧ್ಯಾತ್ಮದ ಬೀಜ ಅನ್ನೋದು ಇನ್‌ಬಿಲ್ಟ್ ಇದೆ. ಅದು ಈಗ ಮರವಾಗಿ ಇತ್ತೀಚೆಗೆ ಜಗತ್ತಿಗೆ ಕಾಣೋ ಹಾಗೆ ಬೆಳಿತಾ ಇರ್ಬಹುದು. ಆದ್ರೆ, ಅವರ ನಡೆನುಡಿ ಎಲ್ಲವೂ ಅವರಿಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಆಧ್ಯಾತ್ಮ ಜಗತ್ತಿನಲ್ಲೇ ಇದೆ. ಹಿರಿಯರು ಒಂದು ಮಾತು ಹೇಳ್ತಾರೆ, 'ನಾವೊಂದು ಬಗೆದರೆ ದೈವ ಇನ್ನೊಂದು ಬಗೆಯಿತು' ಅಂತ, ಅದನ್ನೇ ಕಿಚ್ಚ ಸುದೀಪ್ ಅವರು ಮತ್ತೊಂದು ರೀತಿಯಲ್ಲಿ ಹೇಳಿದ್ದಾರೆ ಅಷ್ಟೇ. ಅದೇ ಕರ್ಮ ಸಿದ್ಧಾಂತ!
ಫಸ್ಟ್ ಟೈಂ ಯಶ್ ಮನೆಗೆ ರಾಧಿಕಾ ಪಂಡಿತ್ ಹೋದಾಗ ಏನು ಕೊಟ್ರು..? ಆಗೋ ಸೊಸೆ ಬಗ್ಗೆ ಹೇಳಿದ್ದೇನು?
ನಾವು ನಮ್ಮ ಕರ್ಮವನ್ನು ಕಳೆಯಲೆಂದೇ ಈ ಭೂಮಿಗೆ ಬಂದಿರುತ್ತೇವೆ. ಆದ್ದರಿಂದಲೇ ನಾವು ಏನೋ ಮಾಡಿದಾಗ ಇನ್ನೇನೋ ಆಗುತ್ತದೆ. ಅದನ್ನೇ ಸುದೀಪ್ ಅವರು ವಿಭಿನ್ನವಾಗಿ ತಮ್ಮದೇ ಆದ ರೀತಿಯಲ್ಲಿ ಹೇಳಿದ್ದಾರೆ.. 'ನಮ್ಮ ಜೀವನದ ಉದ್ಧೇಶ (ಲೈಫ್ ಪರ್ಪಸ್) ಅಂತ ಇರುತ್ತೆ.. ನಾವು ಅದನ್ನೇ ಮಾಡೋದು, ಮಾಡ್ಬೇಕಾಗುತ್ತೆ..
ಅದೇ ಮಾಡ್ತಾ ಇದ್ದಾಗಲೂ ಕೂಡ ಕೆಲವರು ಅದೂ ಬೇಕು ಇದೂ ಬೇಕು ಅಂತ ಎಲ್ಲಾನೂ ಬಯಸ್ತಾರೆ. ಹಾಗೆಲ್ಲಾ ಆಗಲ್ಲ, ನಮಗೇನು ಸಿಗಬೇಕೋ ಅದೇ ಸಿಗುತ್ತದೆ' ಎಂದಿದ್ದಾರೆ ನಟ ಕಿಚ್ಚ ಸುದೀಪ್. ನಟ ರಜನಿಕಾಂತ್ (Rajinikanth) ಕೂಡ ಇದೇ ತರಹ 'ಜೀವನದ ಉದ್ದೇಶ' ಅಂತ (Life Purpose) ಒಂದು ಇರುತ್ತೆ ಅಂತ ಮಾತನ್ನಾಡಿದ್ದಾರೆ. ಇಬ್ಬರ ಮಾತುಕತೆ, ನಡತೆಯಲ್ಲಿ ಸಾಮ್ಯತೆ ಇದೆ. ನಟ ರಜನಿಕಾಂತ್ ಅವರು ಲೈಫ್ ಪರ್ಪಸ್ ಅನ್ನೋ ಶಬ್ಧ ಬಳಸಿದ್ರೆ ನಟ ಕಿಚ್ಚ ಸುದೀಪ್ ಅವರು ಜೀವನದ ಉದ್ದೇಶ ಅಂದಿದ್ದಾರೆ.
ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.