
ಮೇರು ನಿರ್ದೇಶಕ ಪುಟ್ಟಣ್ಣ ಕಣಗಲ್ (Puttanna Kanagal) ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ ಅಗಿರುತ್ತದೆ. ಕಾರಣ, ಅವರ ಜೀವನವೇ ಒಂದು ರೋಚಕ ಹೋರಾಟ. ಪುಟ್ಟಣ್ಣ ಲೈಫ್ ಒಂದು ನೋವು-ನಲಿವಿನ ಸಂಗಮ. ತಮ್ಮ ಸಿನಿಮಾ ಜರ್ನಿಯಲ್ಲಿ ನಿರ್ದೇಶಕ ಪುಟ್ಟಣ್ಣ ಅವರು ಬಹಳಷ್ಟು ಏಳುಬೀಳುಗಳನ್ನು ಅನುಭವಿಸಿದ್ದಾರೆ. ನೋವಿನಲ್ಲೇ ಕೊರಗುತ್ತಾ ಪ್ರಾಣ ಬಿಟ್ಟಿದ್ದಾರೆ. ಅವರ ಬಗ್ಗೆ ಹೇಳಹೊರಟರೆ ಅದೇ ಒಂದು ಸಿನಿಮಾ ಆಗಿಬಿಡುತ್ತೆ..!
ಸದ್ಯ ಇಲ್ಲಿ ಹೇಳಲಿರುವ ವಿಷಯ ಏನಂದ್ರೆ, ಪುಟ್ಟಣ್ಣ ಕಣಗಾಲ್ ಅವರಿಗೆ ಸಿನಿಮಾ ಮಾಡುವಾಗಲೂ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಗಿತ್ತು. ಕನ್ನಡ, ತಮಿಳು, ತೆಲುಗು ಹಾಗೂ ಮಾಲಯಾಳಂ ಈ ನಾಲ್ಕೂ ಭಾಷೆಗಳಲ್ಲೂ ಪುಟ್ಟಣ್ಣ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾ ಮಾಡಿದ್ದಾರೆ, ಕರ್ನಾಟಕದ ಕಣಗಾಲ್ ಊರಿನವರಾದ ಪುಟ್ಟಣ್ಣ ಅವರಿಗೆ ಮಾತೃಭಾಷೆಯ ಪ್ರೀತಿ ಕೂಡ ಬಹಳಷ್ಟಿತ್ತು.
ಆರತಿಗೂ ಪುಟ್ಟಣ್ಣಗೂ ಮಧ್ಯೆ ಬಂದ ಮಂತ್ರಿ..! ಆದ್ರೆ ಆ ಮಂತ್ರಿಯೂ ಕೈ ತಪ್ಪಿ ಹೋಗಿ ಆಮೇಲೇನಾಯ್ತು!
ಅದೊಂದು ದಿನ ಪುಟ್ಟಣ್ಣ ಕಣಗಾಲ್ ಅವರು ತಮ್ಮ ಆತ್ಮೀಯರಾದ ಬಸವೇಗೌಡ ಅವರಿಗೆ ಕಾಲ್ ಮಾಡಿ 'ನನ್ನದೊಂದು ಸಿನಿಮಾ ತಮಿಳುನಾಡಿನಲ್ಲಿ ಜಯಭೇರಿ ಭಾರಿಸುತ್ತಿದೆ. ನೀವು ಆದಷ್ಟು ಬೇಗ ಇಲ್ಲಿಗೆ ಬಂದುಬಿಡಿ' ಎಂದು ಕರೆ ಮಾಡಿ ಹೇಳಿದ್ದರು. ಅದರಂತೆ ಹೋದ ಬಸವೇಗೌಡರ ಬಳಿ ಕಣ್ಣೀರು ತುಂಬಿಕೊಂಡು ಪುಟ್ಟಣ್ಣ ಅವರು 'ನನ್ನ ಸಿನಿಮಾವನ್ನು ತೋರಿಸಲೂ ಕೂಡ ನನ್ನ ಬಳಿ ಹಣವಿಲ್ಲ' ಎಂದಿದ್ದರು. ಅದಕ್ಕೆ ಬಸವೇಗೌಡರು 'ಇರ್ಲಿ ಬಿಡಿ, ನಾನೇ ನಿಮ್ಮನ್ನು ಕರೆದುಕೊಂಡು ಹೋಗ್ತೀನಿ' ಅಂದಿದ್ದರು.
ಹಾಗೇ ಪುಟ್ಟಣ್ಣನವರನ್ನು ಬಸವೇಗೌಡರು ಅವರದೇ ನಿರ್ದೇಶನದ 'ಟೀಚರಮ್ಮ' ಸಿನಿಮಾ ನೋಡಲು ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಿ ಒಂದೇ ಒಂದು ಸೀಟ್ ಕೂಡ ಇಲ್ಲದೇ ಇಡೀ ಥಿಯೇಟರ್ ಫುಲ್ ಆಗಿಉಬಿಟ್ಟಿತ್ತು. ಆಗ ಬಸವೇಗೌಡರು 'ನೀವು ಮ್ಯಾನೇಜರ್ ಬಳಿ ಹೋಗಿ 'ನಾನು ಈ ಚಿತ್ರದ ನಿರ್ದೇಶಕ' ಎಂದು ಹೇಳಿ.. ನಿಮ್ಗೆ ಚೇರ್ ಹಾಕಿಯಾದ್ರೂ ಸೀಟ್ ವ್ಯವಸ್ಥೆ ಮಾಡಿಕೊಡ್ತಾರೆ' ಅಂದಿದ್ದಾರೆ.
ರಾತ್ರಿ ಫ್ರಿಡ್ಜ್ ಒಳಗಡೆ ಹೋಗಿ ಮಲಗ್ತಾರೆ ನಟಿ ಮಧುಬಾಲಾ.. ಸೀಕ್ರೆಟ್ ರಿವೀಲ್ ಮಾಡಿದ ಅಕ್ಷಯ್ ಕುಮಾರ್!
ಅದಕ್ಕೆ ಪುಟ್ಟಣ್ಣ ಅವರು 'ಸಿನಿಮಾ ನನ್ನದೇ ಹೌದು, ಆದರೆ ಅದಕ್ಕೆ ಹಣ ಹಾಕಿರೋದು ನಿರ್ಮಾಪಕರು. ನಾನು ಹಣ ಕೊಡದೇ ಫ್ರೀ ಆಗಿ ನೋಡಲಾರೆ' ಅಂತ ಹೇಳಿದ್ದಾರೆ. ಬಳಿಕ, ಬಸವೇಗೌಡರು ಹಾಗೂ ಸ್ವತಃ ಅದೇ ಚಿತ್ರದ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರು ಮುಂದಿನ ಶೋ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ. ದುರಂತ ಎಂದರೆ, ಪುಟ್ಟಣ್ಣ ನಿರ್ದೇಶನದ ಕನ್ನಡದ ಮೊದಲ ಸಿನಿಮಾ 'ಬೆಳ್ಳಿಮೋಡ'ದ ಬಳಿಕ ಅವರು 'ಸಾವಿರ ಮೆಟ್ಟಿಲು' ಸಿನಿಮಾ ನಿರ್ದೇಶನ ಮಾಡಬೇಕಿತ್ತು.
ಆದರೆ ಅದು ನಿರ್ಮಾಪಕರ ಸಮಸ್ಯೆಯಿಂದ 65 ನಿಮಿಷಗಳ ಫೂಟೇಜ್ ಅಷ್ಟೇ ಶೂಟ್ ಆಗಿತ್ತು. ಬಳಿಕ ಅದೇ ಸಿನಿಮಾವನ್ನು ಪುಟ್ಟಣ್ಣ ಅವರ ಸಾವಿನ ಬಳಿಕ 2006ರಲ್ಲಿ, ಅವರ ಅಪ್ಪಟ ಅಭಿಮಾನಿಗಳಾದ ಕೆಎಸ್‌ಎಲ್ ಸ್ವಾಮಿ ಹಾಗೂ ಡಿಬಿ ಬಸವೇಗೌಡ ಜಂಟಿಯಾಗಿ ನಿರ್ಮಾಣ ಹಾಗು ನಿರ್ದೇಶನ ಮಾಡಿ ತೆರೆಗೆ ತಂದಿದ್ದಾರೆ. ಆದರೆ, ಆ ಸಿನಿಮಾ ಓಡಲಿಲ್ಲ.
ಹುಚ್ಚ ವೆಂಕಟ್‌ಗೆ ಅಣ್ಣಾವ್ರ ಟಿಪ್ಸ್.. ಮತ್ತೆ ಬಂದ ವೆಂಕ; ವಿಡಿಯೋ ನೋಡಿದ್ರೆ ತಲೆ ಸುತ್ತಿ ಬೀಳಲ್ಲ ಬಿಡಿ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.