
ಕನ್ನಡಿಗ, ಪ್ಯಾನ್ ಇಂಡಿಯಾ ಖ್ಯಾತಿಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ, ತಮ್ಮ ಲವ್ ಸೀಕ್ರೆಟ್ ಒಂದನ್ನು ಬಹಿರಂಗ ಮಾಡಿದ್ದಾರೆ. ರಾಧಿಕಾ ಪಂಡಿತ್ (Radhika Pandit) ಹಾಗೂ ಯಶ್ ಅವರಿಬ್ಬರದೂ ಲವ್ ಮ್ಯಾರೇಜ್ ಎಂಬುದು ಬಹುತೇಕರಿಗೆ ಗೊತ್ತು. ಆದರೆ, ಯಶ್ ರಾಧಿಕಾ ಪಂಡಿತ್ ಪರಸ್ಪರ 5 ವರ್ಷಗಳಿಗಿಂತಲೂ ಹೆಚ್ಚು ಪ್ರೀತಿಸಿ, ಬಳಿಕ ಮದುವೆ ಆಗಿದ್ದಾರೆ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
ಅದೇನೇ ಅಗಿರಲಿ, ಗೊತ್ತಿಲ್ಲದ ಇನ್ನೂ ಒಂದು ಸಂಗತಿ ಇದೆ. ಅದೇನೆಂದ್ರೆ, ನಟ ಯಶ್ ಯಾವತ್ತು ತಮ್ಮ ಮನೆಗೆ ರಾಧಿಕಾ ಪಂಡಿತ್ ಅವರನ್ನು ಮೊದಲ ಬಾರಿಗೆ ಕರೆದುಕೊಂಡು ಹೋಗಿದ್ದು? ಅಲ್ಲಿ ಯಶ್ ಮನೆಯಲ್ಲಿ ಅವರ ಅಮ್ಮ ಹಾಗೂ ಅಪ್ಪ ಏನಂದ್ರು? ಈ ಎಲ್ಲ ಸಂಗತಿಯನ್ನು ನಟ ಯಶ್ ಹೇಳಿದ್ದಾರೆ. ಈ ವಿಷ್ಯ ಕೆಲವೇ ಕೆಲವು ಜನರಿಗೆ ಗೊತ್ತಿರಬಹುದಷ್ಟೇ..! ಓವರ್ ಟು ನಟ ಯಶ್..
ದರ್ಶನ್-ರಚಿತಾ ರಾಮ್ ಕೂಡ ಇದೇ ಕೆಟಗರಿಗೆ ಸೇರಿದವ್ರು.. ಇವ್ರೆಲ್ಲಾ ಒಂದೇ ಥರದವ್ರು ನೋಡಿ..!
ಹಬ್ಬಕ್ಕೆ ನಾನು ಮನೆಗೆ ಕರ್ಕೊಂಡು ಹೊಗಿದ್ದೆ.. ಅವ್ರಿಗೆ ಅಲ್ಲೇ ಅರ್ಥ ಆಯ್ತು.. ಅಂದ್ರೆ, ನನ್ನ ಮಗ ವರಮಹಾಲಕ್ಷ್ಮಿ ಹಬ್ಬಕ್ಕೆ ಕರ್ಕೊಂಡು ಬಂದಿದಾನೆ, ಅಂದ್ರೆ.. ನಮ್ಮ ಅಮ್ಮ ಮನೆ ಒಡವೆನಾ ರಾಧಿಕಾಗೆ ಹಾಕಿದ್ರು. ಮನೆಯವ್ರ ಬಿಟ್ಟು ಹೊರಗಡೆಯವ್ರಿಗೆ ಯಾರಿಗೂ ಯಾರೂ ಹಾಗೆ ಹಾಕ್ಕೊಳಮ್ಮ ಅಂತ ಕೊಡಲ್ಲ.. ಆದ್ರೆ ನಮ್ಮಮ್ಮ ಸರಿಯಾಗಿ ಅರ್ಥ ಮಾಡ್ಕೊಂಡು ಒಡವೆನಾ ಹಾಕ್ಕೊಳ್ಳೋಕೆ ಕೊಟ್ಟರು.
ಅಮ್ಮ ಆಗ ಒಂದು ಮಾತು ಹೇಳಿದ್ರು.. ನೀನು ಒಂದ್ಸಲ ಯಾರನ್ನು ಸೊಸೆ ಅಂತ ಕರ್ಕೊಂಡು ಬರ್ತೀಯೋ ಅವ್ಳೊಬ್ಳೇ ನಮ್ಮನೆ ಸೊಸೆ. ನೀನು ಸೀರಿಯಸ್ಸಾಗಿ ಇದ್ರೆ ಮಾತ್ರ ಅದನ್ನು ಮಾಡ್ಬೇಕು.. ಇಲ್ಲ ಅಂದ್ರೆ, ನಮ್ಮನೆಗೆ ಇನ್ಯಾರನ್ನೂ ಸೇರ್ಸಲ್ಲ.. ಸೊಸೆ ಅಂದ್ರೆ ನಮ್ಗೆ ಒಬ್ಳೇ.. ನಿಮ್ಮ ಹುಡುಗು ಬುದ್ಧೀಲಿ ಏನೂ ಅದೂ ಇದೂ ಅಂತ ತೊಂದ್ರೆ ಆಗ್ಬಾರ್ದು.. ನಾನೂ ಕೂಡ ತುಂಬಾ ಸೀರಿಯಸ್ಸಾಗಿದ್ದೆ.. ಲವ್ ಅಂತ ನಂಗೆ ಆಗಿದ್ದೇ ಫಸ್ಟ್ ಟೈಮ್..
ತಮ್ಮದೇ 'ಟೀಚರಮ್ಮ' ಸಿನಿಮಾ ನೋಡಲೂ ಪುಟ್ಟಣ್ಣ ಕಣಗಾಲ್ ಬಳಿ ಅಂದು ಹಣವಿರಲಿಲ್ಲ..!
ಸೋ, ನಂಗೆ ಅಮ್ಮನ ಮಾತು ಏನೂ ಹರ್ಟ್ ಆಗ್ಲಿಲ್ಲ.. ನಾನು ತುಂಬಾ ದೃಢವಾಗಿದ್ದೆ, ಆದ್ದರಿಂದ ಆವತ್ತೇ ಅರ್ಥ ಆಯ್ತು ಮನೆಯವ್ರಿಗೆ..' ಎಂದಿದ್ದಾರೆ ನಟ ರಾಕಿಂಗ್ ಸ್ಟಾರ್ ಯಶ್. ಈ ರೀತಿಯಲ್ಲಿ ನಟ ಯಶ್ ಮನೆಯಲ್ಲಿ ನಟಿ ರಾಧಿಕಾರನ್ನು ಮೊದಲು ಬಂದಾಗಲೇ ಸೊಸೆ ಅಂತ ಸ್ವೀಕರಿಸಿದ್ದಾರೆ. ಅದನ್ನ ಮನೆಮಗ ಯಶ್‌ಗೆ ಕೂಡ ಸರಿಯಾಗಿ ಅರ್ಥವಾಗುವಂತೆ ಹೇಳಿದ್ದಾರೆ. ಅದನ್ನು ಯಶ್, ರಾಧಿಕಾ ಪಂಡಿತ್ ಸೇರಿದಂತೆ ಎರಡೂ ಮನೆಯ ಎಲ್ಲರೂ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ.
ಈ ರೀತಿಯಾಗಿದೆ ನಟ ಯಶ್ ಲವ್ ಸ್ಟೋರಿ. ಮೊದಲ ಬಾರಿಗೇ ರಾಧಿಕಾ ಪಂಡಿತ್ ಅವರನ್ನು ಹಬ್ಬಕ್ಕೇ ಮನೆಗೆ ಕರದುಕೊಂಡು ಹೋಗಿದ್ದರು ಯಶ್. ರಾಧಿಕಾಗೆ ಮದುವೆಗೆ ಮೊದಲೇ ಯಶ್ ಮನೆಯವರು ಸೊಸೆ ಅಂತ ಸ್ವೀಕರಿಸಿ ಮನೆಯ ಒಡವೆ ಕೊಟ್ಟಿದ್ದರು. ಬಳಿಕ, ಎರಡೂ ಮನೆಯವರ ಒಪ್ಪಿಗೆ ಇರುವ ಕಾರಣಕ್ಕೆ ವಿಷಯ ಹೊರಗೆ ಬಂದು ಮದುವೆ ಆಗಿದೆ. ಈಗ ಯಶ್-ರಾಧಿಕಾ ಜೋಡಿಗೆ ಒಂದು ಮಗಳು, ಒಂದು ಮಗ ಆಗಿದ್ದಾರೆ.
ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.