
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರ ಆಡಿರುವ ಟಾಕ್ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಸುದೀಪ್ ಅವರು ಒಂದು ವಿಷಯದ ಬಗ್ಗೆ ಮಾತನ್ನಾಡಿದ್ದಾರೆ. ಯಾವತ್ತೂ ನಟ ಸುದೀಪ್ ಸಂದರ್ಶನಗಳಲ್ಲಿ ಹಾಗೂ ವೇದಿಕೆಗಳಲ್ಲಿ ತಮಗೆ ಅನ್ನಿಸಿದ್ದನ್ನು ಹೇಳುತ್ತ ಇರುತ್ತಾರೆ. ಅದು ಯೂಟ್ಯೂಬ್ ಹಾಗು ಸೋಷಿಯಲ್ ಮೀಡಿಯಾ ಮೂಲಕ ಸಾಕಷ್ಟು ವೈರಲ್ ಆಗುತ್ತಲೇ ಇರುತ್ತದೆ. ಹಾಗಿದ್ರೆ ಇಲ್ಲಿ ಸುದೀಪ್ ಹೇಳಿರುವ ಮಾತು ಯಾವುದು? ನೋಡಿ..
'ಸೆಲೆಬ್ರಿಟಿಗಳು ಅಂದ ತಕ್ಷಣ ನಾವೇನೂ ದೇವ್ರಲ್ಲ.. ಆ ಥರ ಟ್ರೀಟ್ ಮಾಡ್ಬೇಡಿ, ಆ ತರ ಅಂದ್ಕೋಬೇಡಿ.. ನಾವು ಮಾಡೋದೆಲ್ಲಾ ಸರಿನೇ ಮಾಡ್ಬೇಕು ಅನ್ನೋ ಪ್ರೆಶರ್ ಕೂಡ ನಮ್ಮ ಮೇಲೆ ಹಾಕ್ಬೇಡಿ.. ಯಾಕಂದ್ರೆ, ತಪ್ಪುಗಳನ್ನು ಮಾಡೋನೇ ಮನುಷ್ಯ..' ಎಂದಿದ್ದಾರೆ ನಟ ಕಿಚ್ಚ ಸುದೀಪ್. ಅವರ ಈ ಮಾತು ಕೇಳಿ ಹಲವರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಕೆಲವರು 'ಇವೆಲ್ಲಾ ನಿಮ್ಮ ತಲೆಗೇ ಹೇಗೆ ಹೊಳೆಯುತ್ತದೆ' ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಹಲವರು 'ಇಂತಹ ಮಾತನ್ನು ಅಗಾಗ ಹೇಳುತ್ತಿರಿ, ಯೂಸ್ಫುಲ್ ಆಗುತ್ತೆ' ಎಂದಿದ್ದಾರೆ.
Sudeep Viral Video: ಚಿಕ್ಕ ವಯಸ್ಸಲ್ಲಿ ಸ್ನೇಹಿತರಾಗಿದ್ವಿ, ಬರ್ತಾ ಬರ್ತಾ ಒಂದು ಗ್ಯಾಪ್ ಇತ್ತು..!
ಹೌದು, ನಟ ಸುದೀಪ್ ಅವರು ಆಡುವ ಪ್ರತಿಯೊಂದು ಮಾತೂ ಕೂಡ ಅವರ ಫ್ಯಾನ್ಸ್ ಹಾಗೂ ಫಾಲೋವರ್ಸ್‌ಗೆ ವೇದವಾಕ್ಯ, ಅದನ್ನು ಅವರ ಅಭಿಮಾನಿ ವರ್ಗ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತದೆ. ಜೊತೆಗೆ, ಅವರ ಮಾತಿಗೆ ಕಾಮೆಂಟ್ ಮಾಡುತ್ತದೆ. ಜೊತೆಗೆ, ಅದನ್ನು ಆದಷ್ಟೂ ಅನುಸರಿಸಲು ಪ್ರಯತ್ನಿಸುತ್ತದೆ ಅವರ ಅಭಿಮಾನಿ ಬಳಗ. ಅದೇನೇ ಹೇಳಿದರೂ ಕಿಚ್ಚ ಸುದೀಪ್ ಮಾತಿಗೊಂದು ತೂಕ ಇರೋದಂತೂ ಸತ್ಯ ಎಂಬುದು ಬಹುತೇಕರ ಅನಿಸಿಕೆ. ಹೌದು ಅಂತೀರಾ ಇಲ್ಲ ಅಂತೀರಾ? ಕಾಮೆಂಟ್ ಮಾಡಿ ಹೇಳಬಹುದುಲ್ವಾ..?!
ಸದ್ಯ ನಟ ಕಿಚ್ಚ ಸುದೀಪ್ ಅವರು ಕ್ರಿಕೆಟ್ ಹಾಗೂ ಸಿನಿಮಾ ಶೂಟಿಂಗ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ತಮಗಿದ್ದ ಕ್ರಿಕೆಟ್ ಕ್ರೇಜ್ ಅನ್ನು ಈಗಲೂ ಉಳಿಸಿಕೊಂಡು ಬಂದಿದ್ದಾರೆ ನಟ ಕಿಚ್ಚ ಸುದೀಪ್. ಜೊತೆಗೆ, ಸಿನಿಮಾ ನಟನೆ ಎಂಬುದು ಅವರ ವೃತ್ತಿ ಹಾಗೂ ಉಸಿರು. ಕಳೆದ ವರ್ಷದ ಕೊನೆಗೆ ತೆರೆಗೆ ಬಂದಿದ್ದ ಮ್ಯಾಕ್ಸ್ ಚಿತ್ರವು ಅವರಿಗೆ ಗ್ರೇಟ್ ಸಕ್ಸಸ್ ಕೊಡುವುದರ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಕೂಡ ಹೊಸ ಹುರುಪು ನೀಡುವಲ್ಲಿ ಸಫಲವಾಗಿದೆ.
ಆಮೀರ್-ಸಲ್ಮಾನ್-ಶಾರುಖ್ ಒಂದೇ ಸಿನಿಮಾದಲ್ಲಿ ನಟಿಸೋದು ಪಕ್ಕಾ; ತೆರೆಗೆ ಬರೋದು ಯಾವಾಗ..!?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.