ಆಸ್ಪತ್ರೆಯಿಂದ ನಟ ದಿಗಂತ್‌ ಡಿಸ್ಚಾರ್ಜ್‌: 3 ತಿಂಗಳು ರೆಸ್ಟ್‌

Published : Jun 23, 2022, 05:00 AM IST
ಆಸ್ಪತ್ರೆಯಿಂದ ನಟ ದಿಗಂತ್‌ ಡಿಸ್ಚಾರ್ಜ್‌: 3 ತಿಂಗಳು ರೆಸ್ಟ್‌

ಸಾರಾಂಶ

ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ನಟ ದಿಗಂತ್‌ ಅವರನ್ನು ಬುಧವಾರ ರಾತ್ರಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು ಮೂರು ತಿಂಗಳು ಶೂಟಿಂಗ್‌ನಲ್ಲಿ ಪಾಲ್ಗೊಳ್ಳದೆ ಮನೆಯಲ್ಲೇ ರೆಸ್ಟ್‌ ಮಾಡುವಂತೆ ಅವರಿಗೆ ವೈದ್ಯರು ಸೂಚಿಸಿದ್ದಾರೆ.

ಬೆಂಗಳೂರು (ಜೂ.23): ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ನಟ ದಿಗಂತ್‌ ಅವರನ್ನು ಬುಧವಾರ ರಾತ್ರಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು ಮೂರು ತಿಂಗಳು ಶೂಟಿಂಗ್‌ನಲ್ಲಿ ಪಾಲ್ಗೊಳ್ಳದೆ ಮನೆಯಲ್ಲೇ ರೆಸ್ಟ್‌ ಮಾಡುವಂತೆ ಅವರಿಗೆ ವೈದ್ಯರು ಸೂಚಿಸಿದ್ದಾರೆ. ಗೋವಾದಲ್ಲಿ ‘ಸಮ್ಮರ್‌ ಸಾಲ್ಟ್‌’ ಮಾಡುವ ವೇಳೆ ಅವರ ಕುತ್ತಿಗೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೇ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ಇಲ್ಲಿ 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿತ್ತು. ಬಳಿಕ ಚೇತರಿಸಿಕೊಂಡ ದಿಗಂತ್‌ ಅವರನ್ನು ಬುಧವಾರ ಡಿಸ್ಚಾರ್ಜ್‌ ಮಾಡಲಾಯಿತು.

ಈ ಅವಘಡದ ಬಗ್ಗೆ ವಿವರ ನೀಡಿದ ದಿಗಂತ್‌ ಪತ್ನಿ, ನಟಿ ಐಂದ್ರಿತಾ ರೇ, ‘ರಜೆ ಆನಂದಿಸಲು ಗೋವಾಗೆ ತೆರಳಿದ್ದೆವು. ಅಲ್ಲಿ ಸಮ್ಮರ್‌ ಸಾಲ್ಟ್‌ ಮಾಡುವಾಗ ಲ್ಯಾಂಡಿಂಗ್‌ ತಪ್ಪಾಗಿ ಈ ಅಚಾತುರ್ಯವಾಗಿದೆ. ಗೋವಾದಲ್ಲಿದ್ದಾಗ ಬಹಳ ಟೆನ್ಶನ್‌ ಆಗಿತ್ತು. ಬೆಂಗಳೂರಿಗೆ ಬಂದಾಗ ಸಮಾಧಾನ ಆಯ್ತು. ಇಲ್ಲಿ ನಮ್ಮ ಕುಟುಂಬದವರು, ಸ್ನೇಹಿತರೆಲ್ಲ ಇದ್ದಾರೆ. ಗೋವಾ ಸರ್ಕಾರದವರು ನಮಗೆ ನೀಡಿದ ಬೆಂಬಲ ದೊಡ್ಡದು. ಆದ್ದರಿಂದ ಏರ್‌ಲಿಫ್ಟ್‌ ಮಾಡೋದು ಸಾಧ್ಯವಾಯ್ತು. ಇನ್ನು ಮುಂದೆ ದಿಗಂತ್‌ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವೆ. ಸರ್ಜರಿ ಯಶಸ್ವಿಯಾಗಿದೆ. ನಾನು ಮತ್ತೆ ಸಮ್ಮರ್‌ ಸಾಲ್ಟ್‌ ಮಾಡಲು ರೆಡಿ ಆಗಿದ್ದೇನೆ ಅಂತ ದಿಗಂತ್‌ ವೈದ್ಯರಲ್ಲಿ ತಮಾಷೆ ಮಾಡುವಷ್ಟು ಚೇತರಿಸಿಕೊಂಡಿದ್ದಾರೆ’ ಎಂದು ಹೇಳಿದರು.

ಇನ್ಮೇಲೆ ದಿಗಂತ್‌ನ ಕೇರ್ ಮಾಡ್ತೀನಿ; ಪತಿ ಆರೋಗ್ಯದ ಬಗ್ಗೆ ಐಂದ್ರಿತಾ ಮಾಹಿತಿ

ವೈದ್ಯರ ಹೇಳಿಕೆ: 'ದಿಗಂತ್ ಕುತ್ತಿಗೆಗೆ ಪ್ಯಾಕ್ಚರ್ ಆಗಿತ್ತು. ಅದನ್ನ ಆಪರೇಷನ್ ಮಾಡಿದ್ದೇವೆ. ನಿನ್ನೆಗಿಂತ ಇಂದು ಆಕ್ಟೀವ್ ಆಗಿದ್ದಾರೆ. ಅವ್ರೆ ಎದ್ದು ಟಾಯ್ಲೆಟ್ ಹೋಗ್ತಿದ್ದಾರೆ, ಊಟ ಮಾಡ್ತಿದ್ದಾರೆ. ಯಾವುದೇ ಸ್ಪೋರ್ಟ್ ನಲ್ಲಿ ಭಾಗಿಯಾಗಬಹುದು. ಇಂದು ಅಥವಾ ನಾಳೆ ಡಿಸ್ಚಾರ್ಜ್ ಮಾಡಲಾಗುತ್ತೆ' ಎಂದು ದಿಗಂತ್‌ಗೆ  ಚಿಕಿತ್ಸೆ ನೀಡಿದ ವೈದ್ಯರು ಡಾ. ವಿದ್ಯಾಧರ್ ಹೇಳಿದ್ದರು. ಗೋವಾ ಸಮುದ್ರ ತೀರದಲ್ಲಿ ಸಮ್ಮರ್ ಸಾಲ್ಟ್ ಹೊಡೆಯಲು ಹೋಗಿ ದಿಗಂತ್ ಆಯತಪ್ಪಿ ಬಿದ್ದು ಕುತ್ತಿಗೆ ಮತ್ತು ಬೆನ್ನಿಗೆ ಬಲವಾಗಿ ಪೆಟ್ಟು ಮಾಡಿಕೊಂಡಿದ್ದರು. ದಿಗಂತ್ ದಂಪತಿ ಸದಾ ಟ್ರಿಪ್, ಸೈಕ್ಲಿಂಗ್ ಅಂತ ಓಡಾಡುತ್ತಿದ್ದರು. ಈ ಬಾರಿ ಗೋವಾ ವೀಕೆಂಡ್ ಟ್ರಿಪ್‌ನಲ್ಲಿ ದುರಂತ ಮಾಡಿಕೊಂಡಿದ್ದಾರೆ. 

ದಿಗಂತ್ ಸಿನಿಮಾ ವಿಚಾರಕ್ಕೆ ಬರುವುದಾರೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ದಿಗಂತ್ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ (kshamisi nimma katheyalli hanavilla) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇದೀಗ ದಿಗಂತ್ ಬಳಿ ಮಾರಿಗೋಲ್ಡ್ (Marigold), ಎಡಗೈ ಅಪಘಾತಕ್ಕೆ ಕಾರಣ, ಗಾಳಿಪಟ-2 (Galipata 2) ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.    

ಆಪರೇಷನ್ ಸಕ್ಸಸ್ ನಟ ದಿಗಂತ್ 'ಔಟ್ ಆಫ್ ಡೇಂಜರ್', ವಾರ್ಡ್​ಗೆ ಶಿಫ್ಟ್!

ಮಿಸ್ ಕ್ಯಾಲಿಪೋರ್ನಿಯಾ (Miss California) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನದಿಗಂತ್ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೀರಾ ಮಾದವ ರಾಘವ, ಮಸ್ತ್ ಮಜಾ ಮಾಡಿ, ಮನಸಾರೆ, ಮಳೆಬಿಲ್ಲೆ, ಬಿಸಿಲೆ, ಪಂಚರಂಗಿ, ಬರ್ಫಿ, ಚೌಕ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ತುಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಮಿಂಚಿದ್ದಾರೆ. ವೆಡ್ಡಿಂಗ್ ಪುಲಾವ್ ಸಿನಿಮಾ ಮೂಲಕ ದಿಗಂತ್ ಬಾಲಿವುಡ್‌ಗೆ ಹಾರಿದ್ದರು. ಆದರೆ ಅಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದರು. ಬಳಿಕ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಬ್ಯುಸಿಯಾದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ