
ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಬ್ಲಾಕ್ & ವೈಟ್ ಫ್ಯಾಮಿಲಿ ಫೋಟೋ ಒಂದನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಳೆಯ ದಿನಗಳನ್ನು ಈ ಮೂಲಕ ನೆನಪಿಸಿಕೊಂಡಿದ್ದಾರೆ.
ಇಂದಿನ ಸೆಲ್ಫೀ ದಿನಗಳಲ್ಲಿ ಇಂತಹ ಫ್ಯಾಮಿಲಿ ಫೋಟೋ ತೆಗೆಯುವುದನ್ನು ಬಹಳ ಅಪರೂಪಕ್ಕೆ ಕಾಣುತ್ತೇವೆ. ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಸರ್ಕಾರು ಸಿನಿಮಾದಲ್ಲಿ ಮಹೇಶ್ ಬಾಬುಗೆ ವಿಲನ್ ಆಗ್ತಾರಾ ಕಿಚ್ಚ..?
ಸ್ಪರ್ಶ, ಹುಚ್ಚ, ನಂದಿ, ಕಿಚ್ಚ, ಸ್ವಾತಿ ಮುತ್ತು, ಮೈ ಅಟೋಗ್ಋಆಫ್, ನಂ.73, ಶಂತಿ ನಿವಾಸ, ಮುಸ್ಸಂಜೆ ಮಾತು, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇ ಗೌಡ ಸುದೀಫ್ ಅವರ ಪ್ರಮುಖ ಸಿನಿಮಾಗಳು. ಈಗ ಸಿನಿಮಾದಲ್ಲಿ ನಟಿಸುವ ಮೂಲಕ ಹೀರೋ ಆಗಿನೂ ಸೈ, ವಿಲನ್ ಆಗಿಯೂ ಸೈ ಎನ್ನುವನ್ನು ಪ್ರೂವ್ ಮಾಡಿದ್ದರು.
ಬಾಲಿವುಡ್ ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೂ ತೆರೆ ಹಂಚಿಕೊಂಡಿದ್ದರು. ಮುಂದೆ ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಪರಶುರಾಮ್ ಮಹೇಶ್ ಬಾಬು ನಾಯಕ ನಟನಾಗಿ ನಟಿಸುತ್ತಿರುವ ಸರ್ಕಾರು ವಾರಿ ಪಾಠದಲ್ಲಿ ಮೈನ್ ವಿಲನ್ ಆಗಿ ನಟಿಸುವುದಕ್ಕೆ ಸುದೀಪ್‌ಗೆ ಆಫರ್ ಕೊಟ್ಟಿದ್ದರು.
ಸ್ಟಾರ್ ಹಾಡಲ್ಲಿ ಸುದೀಪ್ ಇಲ್ಲ, ಸಚಿವರೇ ಸಂಪರ್ಕಿಸಿದರೂ ಸಿಗಲ್ಲಿಲ್ಲ; ಇದಕ್ಕೆ ಕಾರಣವೇನು?
ಮಾಸ್ ಹೀರೋ ಆಗಿರೋ ಒಬ್ಬರನ್ನೇ ಸಿನಿಮಾದಲ್ಲಿ ವಿಲನ್ ಮಾಡಬೇಕೆಂದು ನಿರ್ದೇಶಕ ಬಯಸಿದ್ದಾರೆ. ಕನ್ನಡ ಸಿನಿಮಾ ಲೋಕದಲ್ಲಿ ಅಂತಹದೊಂದು ಹವಾ ಇರೋರು ಸುದೀಪ್. ಕಳೆದ ವರ್ಷ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3ಯಲ್ಲಿ ಕಿಚ್ಚ ಮೈನ್ ವಿಲನ್ ರೋಲ್ ಪ್ಲೇ ಮಾಡಿದ್ದರು.
ಆರಂಭದಲ್ಲಿ ಉಪೇಂದ್ರ ಅವರನ್ನು ಚೂಸ್ ಮಾಡುವುದೆಂದು ನಿರ್ದೇಶಕ ಆಲೋಚಿಸಿದ್ರು. ಆದರೆ ಉಪೇಂದ್ರ ಈ ಆಫರ್ ಬೇಡ ಎಂದಿದ್ರು. ಇದೀಗ ಸುದೀಪ್ ಅವರನ್ನು ಹೇಗಾದ್ರು ಕನ್ವಿನ್ಸ್ ಮಾಡಿ ಸಿನಿಮಾ ಮಾಡೋ ಚಿಂತೆಗೆ ಬಿದ್ದಿದ್ದಾರೆ ನಿರ್ದೇಶಕ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.