'ಇಂಗ್ಲಿಷ್‌ ಮಂಜ' ಫಸ್ಟ್‌ಲುಕ್‌ ಬಿಡುಗಡೆ

By Kannadaprabha NewsFirst Published Jun 26, 2020, 6:17 PM IST
Highlights

ಪ್ರೀಮಿಯರ್‌ ಪದ್ಮಿನಿ ಖ್ಯಾತಿಯ ಪ್ರಮೋದ್‌ ನಟನೆಯ ‘ಇಂಗ್ಲಿಷ್‌ ಮಂಜ’ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಆರ್ಯ ಮಹೇಶ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್‌ ರೌಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು (ಜೂ. 26): ಪ್ರೀಮಿಯರ್‌ ಪದ್ಮಿನಿ ಖ್ಯಾತಿಯ ಪ್ರಮೋದ್‌ ನಟನೆಯ ‘ಇಂಗ್ಲಿಷ್‌ ಮಂಜ’ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಆರ್ಯ ಮಹೇಶ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್‌ ರೌಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

"ಇಂಗ್ಲಿಷ್ ಮಂಜ"ನ ಮೇಲೆ ನಿಮ್ಮ ಪ್ರೀತಿ, ಆಶೀರ್ವಾದ ಇರಲಿ 😍🙏🎬 pic.twitter.com/OuPYWQLZxT

— Pramod (@pramodactor1)

ಕತ್ತಿಗೊಂದು ದಪ್ಪ ಚೈನು, ಕಣ್ಣಿಗೆ ಕೂಲಿಂಗ್‌ ಗ್ಲಾಸು ಧರಿಸಿಕೊಂಡು ನಿಂತಿರುವ ಪ್ರಮೋದ್‌ ಲುಕ್‌ ಗಮನ ಸೆಳೆಯುವಂತಿದೆ. ಗಿರೀಶ್‌ ಕೋಲಾರ ನಿರ್ಮಾಣದ ಈ ಸಿನಿಮಾ ತಂಡ ಶೀಘ್ರವೇ ಶೂಟಿಂಗ್‌ ಆರಂಭಿಸುವ ಆಲೋಚನೆಯಲ್ಲಿದೆ.

click me!