Sudeep: ಮೂರು ಸಿನಿಮಾ, ಹಗಲು ರಾತ್ರಿ ಕೆಲಸ; ಮುಂದಿನ ಚಿತ್ರದ ಬಗ್ಗೆ ಬಿಗ್‌ ಅಪ್‌‌ಡೇಟ್ ನೀಡಿದ ಕಿಚ್ಚ

Published : Apr 02, 2023, 11:55 AM ISTUpdated : Apr 02, 2023, 12:37 PM IST
Sudeep: ಮೂರು ಸಿನಿಮಾ, ಹಗಲು ರಾತ್ರಿ ಕೆಲಸ; ಮುಂದಿನ ಚಿತ್ರದ ಬಗ್ಗೆ ಬಿಗ್‌ ಅಪ್‌‌ಡೇಟ್ ನೀಡಿದ ಕಿಚ್ಚ

ಸಾರಾಂಶ

ಮುಂದಿನ ಸಿನಿಮಾದ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಬಿಗ್ ಅಪ್‌ಡೇಟ್ ನೀಡಿದ್ದಾರೆ. 3 ಸಿನಿಮಾಗಳನ್ನು ಫೈನಲ್ ಮಾಡಿರುವುದಾಗಿ ಸುದೀಪ್ ಹೇಳಿದ್ದಾರೆ. 

ಅಭಿನಯಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬ್ರೇಕ್‌ನಲ್ಲಿದ್ದಾರೆ. ಬಿಗ್ ಬಾಸ್, ಕ್ರಿಕೆಟ್ ಅಂತ ಬ್ಯುಸಿಯಾಗಿದ್ದ ಸುದೀಪ್ ಮುಂದಿನ ಸಿನಿಮಾ ಅನೌನ್ಸ್ ಮಾಡಿರಲಿಲ್ಲ. ಕಿಚ್ಚನ 46ನೇ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಇತ್ತು. ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ವಿದೆ. ಅಭಿಮಾನಿಗಳು ಮುಂದಿನ ಸಿನಿಮಾಗಾಗಿ   ಸುದೀಪ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಅಭಿಮಾನಿಗಳ ಎಲ್ಲಾ ಪ್ರಶ್ನೆ ಮತ್ತು ಕುತೂಹಲಗಳಿಗೆ ಸುದೀಪ್ ಉತ್ತರ  ನೀಡಿದ್ದಾರೆ. 

ಮುಂದಿನ ಸಿನಿಮಾದ ಬಗ್ಗೆ ಕಿಚ್ಚ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಇಷ್ಟು ದೊಡ್ಡ ಬ್ರೇಕ್ ಯಾವುತ್ತು ಪಡೆದಿರಲಿಲ್ಲ. ಇದು ತನ್ನ ಮೊದಲ ಬ್ರೇಕ್ ಎಂದಿರುವ ಸುದೀಪ್ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.  ಈ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬೆರೆದಿದ್ದಾರೆ. ಮೂರು ಸಿನಿಮಾಗಳನ್ನು ಫೈನಲ್ ಮಾಡಿರುವುದಾಗಿ ಸುದೀಪ್ ಹೇಳಿದ್ದಾರೆ. ಮೂರು ಸಿನಿಮಾಗಳ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ತಯಾರಾಗುತ್ತಿದೆ. ಹಗಲು ರಾತ್ರಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಮೂರು ಸಿನಿಮಾಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ಧನಂಜಯ್- ಅಮೃತಾ ಲವ್‌ ಸ್ಟೋರಿಗೆ ಗ್ರೀನ್‌ ಸಿಗ್ನಲ್‌ ಕೊಟ್ರಾ ಕಿಚ್ಚ ಸುದೀಪ್?; ಕೊನೆಗೂ ಸಿಗ್ತು ಮ್ಯಾಟ್ರು ಎಂದ ನೆಟ್ಟಿಗರು

ಸುದೀಪ್ ಪೋಸ್ಟ್ 

'ಕಿಚ್ಚ 46 (ಎಲ್ಲರೂ ಕರೆಯುತ್ತಿರುವ ಹೆಸರು) ಸಿನಿಮಾದ ಬಗ್ಗೆ ಯಾರು ಟ್ವೀಟ್, ಮೀಮ್‌ಗಳನ್ನು ಮಾಡುತ್ತಿದ್ದೀರಿ. ಇದು ನನಗೆ ತುಂಬಾ ವಿಶೇಷವಾಗಿದೆ. ತುಂಬಾ ಧನ್ಯವಾದಗಳು. ನಾನು ಈಗ ಈ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ನಾನು ಬ್ರೇಕ್ ತೆಗೆದುಕೊಂಡೆ. ತುಂಬ ಶ್ರಮವಹಿಸಿ, ಬಹಳ ಸಮಯ ತೆಗೆದುಕೊಂಡು ವಿಕ್ರಾಂತ್​ ರೋಣ ಶೂಟಿಂಗ್​ ಮಾಡಿದ್ದರಿಂದ ಹಾಗೂ ಸತತವಾಗಿ ಬಿಗ್​ಬಾಸ್​ ಒಟಿಟಿ ಮತ್ತು ಟಿವಿ ಸೀಸನ್​ನಲ್ಲಿ ಪಾಲ್ಗೊಂಡಿದ್ದರಿಂದ ಈ ಬ್ರೇಕ್​ನ ಅವಶ್ಯಕತೆ ಇತ್ತು. ನನ್ನನ್ನು ಹೆಚ್ಚು ಖುಷಿಯಾಗಿಸುವ ರೀತಿಯಲ್ಲಿ ಈ ದಿನಗಳನ್ನು ಕಳೆಯಬೇಕು ಎನಿಸಿತು. ಕ್ರಿಕೆಟ್​ನಿಂದ ನನಗೆ ರಿಲ್ಯಾಕ್ಸ್​ ಸಿಗುತ್ತದೆ. ಕೆಸಿಸಿಯಲ್ಲಿ ತೊಡಗಿಕೊಂಡು ಸಮಯ ಕಳೆದಿದ್ದು ತುಂಬ ಖುಷಿ ನೀಡಿತು’ ಎಂದು ಸುದೀಪ್​ ಬರೆದುಕೊಂಡಿದ್ದಾರೆ.

ನಾನು 'ಪಠಾಣ್' ನೋಡಿಲ್ಲ, ನನಗೆ ನಾನೇ ಸ್ಟಾರ್; ಕಿಚ್ಚ ಸುದೀಪ್ ರಿಯಾಕ್ಷನ್ ವೈರಲ್

‘ಈ ಬ್ರೇಕ್​ನಲ್ಲಿ ಹೊಸ ಸ್ಕ್ರಿಪ್ಟ್​ ಬಗ್ಗೆ ಚರ್ಚೆ ಮತ್ತು ಮೀಟಿಂಗ್​ಗಳು ಪ್ರತಿದಿನದ ಆಗುತ್ತಿತ್ತು. ಮೂರು ಸ್ಕ್ರಿಪ್ಟ್​ಗಳನ್ನು ಫೈನಲ್​ ಮಾಡಿದ್ದೇನೆ. ಅಂದರೆ, 3 ಸಿನಿಮಾಗಳನ್ನು ಆಯ್ಕೆ ಮಾಡಿದ್ದೇನೆ. ಇವುಗಳಿಗೆ ದೊಡ್ಡ ಮಟ್ಟದ ತಯಾರಿ ಬೇಕು. ಮೂರೂ ಚಿತ್ರಗಳಿಗೆ ಹೋಮ್​ವರ್ಕ್​ ನಡೆಯುತ್ತಿದೆ. ಆ ತಂಡದವರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅನೌನ್ಸ್​ ಮಾಡುತ್ತೇನೆ’ ಎಂದು ಸುದೀಪ್​ ಅವರು ದೀರ್ಘವಾದ ಪತ್ರ ಬರೆದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ