ನಟ ಸುದೀಪ್ ಅವರ ತಾಯಿ ಸರೋಜಮ್ಮ ಅವರು ನಿಧನರಾಗುವ ಮುನ್ನ ತಮ್ಮ ಸಾವಿನ ಬಗ್ಗೆ ಮೊದಲೇ ಅರಿವು ಹೊಂದಿದ್ದಂತೆ ಕಂಡುಬಂದಿದೆ. ಶೂಟಿಂಗ್‌ಗೆ ಹೋಗುವ ಮುನ್ನ ಸುದೀಪ್ ಅವರು ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವಾಗ, ಸರೋಜಮ್ಮ ಅವರು ಎರಡು ಬಾರಿ ಆಶೀರ್ವಾದ ಮಾಡಿದ್ದರು, ಇದು ಅವರ ಸಾವಿನ ಮುನ್ಸೂಚನೆಯಾಗಿತ್ತೇ ಎಂಬ ಪ್ರಶ್ನೆ ಈಗ ಚರ್ಚೆಯಲ್ಲಿದೆ.
ಬೆಂಗಳೂರು (ಅ.20): ಕಿಚ್ಚ ಸುದೀಪ ಕರುನಾಡಿಗೆ ಎಷ್ಟೇ ದೊಡ್ಡ ಅಭಿನಯ ಚಕ್ರವರ್ತಿ ಎನಿಸಿಕೊಂಡಿದ್ದರೂ, ಅವರ ತಾಯಿಗೆ ಇನ್ನೂ ಪುಟ್ಟ ಕಂದಮ್ಮ. ಪ್ರತಿಬಾರಿ ಸದೀಪ್ ಮನೆಯಿಂದ ಶೂಟಿಂಗ್‌ಗೆ ಹೊರಗೆ ಹೋಗುವಾದ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು. ಆದರೆ, ಮೊನ್ನೆ ಸುದೀಪ್ ಶೂಟಿಂಗ್‌ಗೆ ಹೊರಗೆ ಹೋಗುವಾ ಸ್ವತಃ ಸರೋಜಮ್ಮ ಅವರೇ 'ಮಗನೇ ನೀನು ಇನ್ನೊಮ್ಮೆ ಕಾಲಿಗೆ ಬೀಳು' ಎಂದು ಹೇಳಿ ಎರಡು ಬಾರಿ ಆಶೀರ್ವಾದ ಮಾಡಿದ್ದರು. ಅಂದರೆ ಸರೋಜಮ್ಮ ಅವರಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ಗೊತ್ತಿತ್ತು ಎನಿಸುತ್ತದೆ.
ಕನ್ನಡದ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ತಾಯಿ ಸರೋಜಮ್ಮ ಅವರು ನಿಧನರಾಗಿ ಕನ್ನಡ ಚಿತ್ರರಂಗವೇ ಶೋಕದ ಮಡುವಿನಲ್ಲಿದೆ. ಆದರೆ, ಕಿಚ್ಚನ ತಾಯಿಗೆ ತನ್ನ ಸಾವಿನ ಬಗ್ಗೆ ಮೊದಲೇ ಅರುವಿತ್ತು ಎನಿಸುತ್ತದೆ. ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗುತ್ತಿದ್ದ ದೀಪು (ಸುದೀಪ) ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು. ಆದರೆ, ಮೊನ್ನೆ ಕೂಡ ಸುದೀಪ್ ಹೊರಗೆ ಶೂಟಿಂಗ್‌ಗೆ ಹೋಗುವ ಮುನ್ನ ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನ ಕಾಲಿಗೆ ಬಿದ್ದಾಗ, ಮತ್ತೊಮ್ಮೆ ಕಾಲಿಗೆ ಬೀಳು ಎಂದು ಹೇಳಿ ಅಮ್ಮ ಆಶಿರ್ವಾದ ಮಾಡಿದ್ದರಂತೆ. ಸುಮಾರು 50 ವರ್ಷಗಳಲ್ಲಿ ಎಂದಿಗೂ ಮಗನಿಗೆ 2 ಬಾರಿ ಆಶೀರ್ವಾದ ಮಾಡದ ಅಮ್ಮ ಹೀಗೇಕೆ ಮಾಡಿದರು ಎಂಬ ನೋವಿನಿಂದಲೇ ಹೊರಗೆ ಹೋದ ಸುದೀಪನಿಗೆ ಸಿಕ್ಕಿದ್ದು ಅಮ್ಮನ ಸಾವಿನ ಸುದ್ದಿ. ಅಂದರೆ, ನಟ ಸುದೀಪ್ ಅವರ ಅಮ್ಮನಿಗೆ ಸ್ವತಃ ತಮ್ಮ ಸಾವಿನ ಬಗ್ಗೆ ಮೊದಲೇ ಅರಿವು ಇತ್ತಾ ಎಂಬ ಮಾಹಿತಿ ಇದೀಗ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಅಮ್ಮನ ಸಾವಿನ ಸೂಚನೆ ಸುದೀಪ್‌ಗೆ ಮೊದಲೇ ಸಿಕ್ಕಿತ್ತಾ? ಬದುಕಿಸಲು ಹರಕೆ ಹೊತ್ತಿದ್ರಾ?
ಕಿಚ್ಚ ಸುದೀಪ್ ಅವರ ತಾಯಿ ಸರೋಜಮ್ಮ ಅವರ ಅಂತ್ಯಕ್ರಿಯೆಗೆ ಬಂದಿದ್ದ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ತಾಯಿ ಅಗಲಿಕೆಯಿಂದ ಸುದೀಪ್ ತುಂಬಾ ಮನನೊಂದಿದ್ದಾರೆ. ಸುದೀಪ್ ಕೈಲಿ ಈ ನೋವು ತಡೆದುಕೊಳ್ಳೋಕೆ ಆಗ್ತಿಲ್ಲ. ಗೊತ್ತಿಲ್ಲ ಅವರು ಈ ನೋವಿಂದ ಹೊರ ಬರೋಕೆ ಎಷ್ಟು ದಿನ ಆಗುತ್ತೆ ಅಂತಾ. ಸುದೀಪ್ ಅವರು ತಮ್ಮ ತಾಯಿಯನ್ನು ಅತೀವವಾಗಿ ಹಚ್ಚಿಕೊಂಡಿದ್ದರು ಎಂದು ಹೇಳಿದರು.
ಮುಂದುವರೆದು, ನಟ ಸುದೀಪ್ ಅವರು ಪ್ರತೀ ಬಾರಿ ಶೂಟಿಂಗ್ ಹೋಗೋವಾಗ ಅವರ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೀತಾರೆ. ಸುದೀಪ್ ಮೊನ್ನೆ ನಂಗೆ ಒಂದು ವಿಚಾರ ಹೇಳಿಕೊಂಡಿದ್ದರು. ಮೊನ್ನೆ ನಮ್ಮಮ್ಮ ಕಾಲಿಗೆ ಬಿದ್ದು ಆಶೀರ್ವಾದ ತಗೊಂಡಿದ್ದೆ. ಆದರೆ, ಅವತ್ತು ನನಗೆ ಮತ್ತೊಮ್ಮೆ ಕಾಲಿಗೆ ಬೀಳು ಮಗನೆ ಅಂತಾ ಹೇಳಿದ್ದರು. ಆಗ ನಾನು ಅಮ್ಮನನ್ನು ಏನೂ ಕೇಳದೇ ಮತ್ತೊಮ್ಮೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದೆ. ನನ್ನಮ್ಮ ಯಾವತ್ತೂ ನನ್ನ ಬಳಿ ಆ ತರಹ ಕೇಳಿರಲಿಲ್ಲ. ಯಾಕೆ ಎರಡು ಬಾರಿ ಆಶೀರ್ವಾದ ಪಡೆಯಲು ಹೇಳಿದರು ಗೊತ್ತಿಲ್ಲ ಅಂತಾ ಹೇಳಿದ್ದರು. ಇದಾಗಿ ಎರಡೇ ದಿನದಲ್ಲಿ ಹೀಗಾಗಿದೆ. ನಿಜವಾಗಿ ಹೇಳಬೇಕೆಂದರೆ ಸುದೀಪ್‌ಗೆ ಈ ನೋವು ತಡೆದುಕೊಳ್ಳೋಕೆ ಆಗುತ್ತಿಲ್ಲ. ಅವರನ್ನು ಸಂತೈಸಲು ಯಾರಿಂದಲೂ ಆಗುತ್ತಿಲ್ಲ ಎಂದು ಎನ್.ಎಂ. ಸುರೇಶ್ ಹೇಳಿದರು.
ಇದನ್ನೂ ಓದಿ: ಸುದೀಪ್ ಹಳೆಯ ಪೋಸ್ಟ್ ಈಗ ಭಾರೀ ವೈರಲ್, ಅಮ್ಮನ ಬಗ್ಗೆ ಏನ್ ಹೇಳಿದ್ರು ಕಿಚ್ಚ?!
ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಸರೋಜಮ್ಮ ಸಾವು ತುಂಬಾ ನೋವು ತಂದಿದೆ. ನನ್ನ ಸ್ನೇಹಿತನ ಭೇಟಿ ಮಾಡೋವಾಗೆಲ್ಲಾ ಅವರೇ ಊಟ ಕೊಡುತ್ತಿದ್ದರು. ನಮೆಲ್ಲಾ ತಾಯಿ ತರ ಪ್ರೀತಿ ಕೊಡುತ್ತಿದ್ದರು. ಅವರ ನಿಧನದಿಂದ ತುಂಬಾ ನೋವಾಗಿದೆ. ಒಂದು ತಾಯಿಯನ್ನ ಕಳೆದುಕೊಂಡಿದೀನಿ. ಸುದೀಪ್ ತುಂಬಾ ನೋವಲ್ಲಿದಾರೆ, ಅವ್ರನ್ನ ನೋಡೋಕೆ ಆಗ್ತಿಲ್ಲ. ಅವ್ರ ನೋವು ನೋಡಿ ನಂಗೆ ಮತ್ತಷ್ಟು ನೋವಾಗ್ತಿದೆ. ನಾನೂ ನನ್ನ ತಾಯಿಯನ್ನ ಕಳೆದುಕೊಂಡಷ್ಟೇ ದುಃಖ ಆಗ್ತಿದೆ. ನಾನು ಸುದೀಪ್ ಅವರನ್ನು ಭೇಟಿಯಾದಾಗೆಲ್ಲಾ ಕಾಲ್ ಮಾಡಿ ವಿಚಾರಿಸುತ್ತಿದ್ದರು. ಬಿಗ್ ಬಾಸ್ ಗೆ ಹೋದಾಗೆಲ್ಲಾ ಸುದೀಪ್ ಗೆ ತಿಲಕ ಇಟ್ಟು ಕಳಿಸುತ್ತಿದ್ದರು. ಮೊನ್ನೆ ಬಿಗ್ ಬಾಸ್ ಗೆ ಹೋಗೋ ಮುಂಚೆ ತಿಲಕ ಇಟ್ಟು ಕಳಿಸಿದ್ದರು. ಅವತ್ತೇ ಅವರಿಗೆ ಜ್ವರ ಬಂದಿತ್ತು, ನೋಡಿ ಸಮಯ ಹೇಗಿದೆ. ಸುದೀಪ್ ಅವರಿಗೆ ನೋವು ತಡೆದುಕೊಳ್ಳುವ ಶಕ್ತಿ ಕೊಡಲಿ ಅಂತಾ ಕೇಳಿಕೊಳ್ತೀನಿ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.