ದರ್ಶನ್ 'ಕಲಾಸಿಪಾಳ್ಯ' ಡೈರೆಕ್ಟರ್ ಓಂ ಪ್ರಕಾಶ್ ರಾವ್ ಈಗೇನ್ ಮಾಡ್ತಿದಾರೆ, ಏನ್ ಕಥೆ?

Published : Oct 20, 2024, 05:38 PM ISTUpdated : Oct 20, 2024, 07:03 PM IST
ದರ್ಶನ್ 'ಕಲಾಸಿಪಾಳ್ಯ' ಡೈರೆಕ್ಟರ್ ಓಂ ಪ್ರಕಾಶ್ ರಾವ್ ಈಗೇನ್ ಮಾಡ್ತಿದಾರೆ, ಏನ್ ಕಥೆ?

ಸಾರಾಂಶ

ಹೊಸಬನ ಸಿನಿಮಾದಲ್ಲಿ ಎಲ್ಲವನ್ನೂ ಮಿತಿಮೀರಿ ಕೊಟ್ಟರೆ ಜನರು ಕ್ಯಾಕರಿಸಿ ಉಗಿಯಲ್ವಾ? ಯಾವನೋ ಇವ್ನು? ಕಿತ್ತಾಗಿರೋ ನನ್ ಮಗ ಹಿಂಗ್ ಸಿನಿಮಾ ಮಾಡವ್ನೆ ಹೊಸಬ್ನ ಇಟ್ಕೊಂಡು ಅಂತ.. ಅದನ್ನೂ ನಾನು ಈಗ್ಲೇ ಅರ್ಥ ಮಾಡ್ಕೊಂಡು, ಅವ್ನು ಹೇಗೆ ಏನು.. 

ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash Rao) ಅವರು ಈಗೇನು ಮಾಡ್ತಿದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಈ ಮೊದಲು ಕನ್ನಡಕ್ಕೆ ಕಲಾಸಿಪಾಳ್ಯ, ಅಯ್ಯ, ಎಕೆ 47, ಸಿಂಹದ ಮರಿ, ಲಾಕಪ್ ಡೆತ್ ಹೀಗೆ ಬಹಳಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು ನಿರ್ದೇಶಕ ಓಂ ಪ್ರಕಾಶ್ ರಾವ್. ಆದರೆ, ಇತ್ತೀಚೆಗೆ ಅವರ ಚಿತ್ರಗಳು ತೆರೆಗೆ ಅಷ್ಟಾಗಿ ಬರುತ್ತಿಲ್ಲವಲ್ಲ ಎಮದು ಹಲವರು ಯೋಚಿಸುತ್ತಾ ಇರಬಹುದು. ಆದರೆ, ಅದು ಸುಳ್ಳು, ಅದಕ್ಕೆ ಉತ್ತರ ಇಲ್ಲಿದೆ ನೋಡಿ.. 

ಈ ಬಗ್ಗೆ ಸ್ವತಃ ಓಂ ಪ್ರಕಾಶ್ ರಾವ್ ಅವರು ಯೂಟ್ಯೂಬ್ ಚಾನೆಲ್‌ ಒಂದಕ್ಕೆ ಉತ್ತರಿಸಿದ್ದಾರೆ. 'ತ್ರಿಶೂಲಂ ಸಿನಿಮಾ ಸಿದ್ಧವಾಗ್ತಿದೆ. ಆದ್ರೆ ಸಾಂಗ್ ಮಾತ್ರ ಮಾಡ್ಬೇಕು. ಇಲಾಖೆಗೆ ಇನ್ನೂ ಸ್ವಲ್ಪ ದಿನಗಳು ಶೂಟಿಂಗ್ ಮಾಡ್ಬೇಕು.. ಸ್ವಲ್ಪ ಕರೆಕ್ಷನ್ ಕೆಲಸ ನಡಿತಾ ಇದೆ. ಫಿನಿಕ್ಸ್‌ ಸಿನಿಮಾದ ಎಡಿಟಿಂಗ್ ಕೆಲಸ ನಡಿತಿದೆ. ಈ ಸಿನಿಮಾ ತುಂಬಾ ಒಳ್ಳೆಯ ಸಿನಿಮಾ, ತುಂಬಾ ದೊಡ್ಡ ಪ್ರೊಡಕ್ಷನ್, ನಾನು ತುಂಬಾ ಖುಷಿಯಿಂದ ಮಾಡ್ತಾ ಇದೀನಿ..ನಾವೇ ಅದಕ್ಕೆ ಪ್ರೊಡ್ಯೂಸರ್ಸ್. 

ಏಷ್ಯಾನೆಟ್‌ ಸುವರ್ಣಗೆ ರಂಜಿತ್ ಎಕ್ಸ್‌ಕ್ಲೂಸಿವ್ ಮಾತು: ನನಗಾದ ನಷ್ಟ ಯಾರು ಕೊಡ್ತಾರೆ?

ಫಿನಿಕ್ಸ್ ಚಿತ್ರಕ್ಕೆ ಯಾವುದೂ ಕಡಿಮೆ ಆಗದಂತೆ ಎಲ್ಲಾನೂ ಕೊಟ್ಟು ಮಾಡ್ತಾ ಇದೀವಿ.. ಈ ಸಿನಿಮಾ ಮೇಲೆ ನಾನು ತುಂಬಾ ನಿರೀಕ್ಷೆ ಇಟ್ಕೊಂಡಿದೀನಿ.. ಮುಂದೆ ಕಾಡ್ಗಿಚ್ಚು ಅಂತ ಹೊಸ ಸಿನಿಮಾ ಮಾಡ್ಬೇಕು. ಅದಕ್ಕೆ ನನ್ನ ಮಗನನ್ನೇ ಹೀರೋ ಆಗಿ ಮಾಡ್ಕೋಬೇಕು ಅಂತ ಪ್ಲಾನ್ ಮಾಡಿದೀನಿ.. ಕಮರ್ಷಿಯಲ್ ಅಂಶಗಳೂ ಸಾಕಷ್ಟಿವೆ. ಆದ್ರೆ, ನನ್ನ ಮಗನಿಗೆ ಕಥೆ ಸರಿ ಹೊಂದಬೇಕು. ಏಕೆಂದರೆ, ಯಾವುದೂ ಮಿತಿಮೀರಿ ಹೋಗಬಾರದು. ಏಕೆಂದರೆ, ನನ್ನ ಮಗ ಹೊಸಬ!

ಹೊಸಬನ ಸಿನಿಮಾದಲ್ಲಿ ಎಲ್ಲವನ್ನೂ ಮಿತಿಮೀರಿ ಕೊಟ್ಟರೆ ಜನರು ಕ್ಯಾಕರಿಸಿ ಉಗಿಯಲ್ವಾ? ಯಾವನೋ ಇವ್ನು? ಕಿತ್ತಾಗಿರೋ ನನ್ ಮಗ ಹಿಂಗ್ ಸಿನಿಮಾ ಮಾಡವ್ನೆ ಹೊಸಬ್ನ ಇಟ್ಕೊಂಡು ಅಂತ.. ಅದನ್ನೂ ನಾನು ಈಗ್ಲೇ ಅರ್ಥ ಮಾಡ್ಕೊಂಡು, ಅವ್ನು ಹೇಗೆ ಏನು ಅಂತ ತಿಳ್ಕೊಂಡು ಎಲ್ಲಾನೂ ಮಾಡ್ತಾ ಇದೀನಿ.. ಅದಕ್ಕೇ, ಫಿನಿಕ್ಸ್ ಚಿತ್ರದಲ್ಲಿ ಅವ್ನಿಗೆ ಒಂದು ಸಣ್ಣ ಪಾತ್ರ ಮಾಡಿಸ್ತಾ ಇದೀವಿ.. ಅವ್ನಿಗೆ ನಾನು 'ನೀನು ಯಾರು ಏನು ಅಂತ ಮೊದ್ಲು ಜನ್ರಿಗೆ ಗೊತ್ತಾಗ್ಲಿ, ಆಮೇಲೆನೇ ಹೀರೋ ಆಗ್ಬೇಕು ಅಂದಿದೀನಿ..' ಎಂದಿದ್ದಾರೆ ಓಂ ಪ್ರಕಾಶ್ ರಾವ್. 

ಸುದೀಪ್ ಹಳೆಯ ಪೋಸ್ಟ್ ಈಗ ಭಾರೀ ವೈರಲ್, ಅಮ್ಮನ ಬಗ್ಗೆ ಏನ್ ಹೇಳಿದ್ರು ಕಿಚ್ಚ?!

ಅಂದಹಾಗೆ, ಬಹಳಷ್ಟು ಆಕ್ಷನ್ ಸಿನಿಮಾಗಳು ಸೇರಿದಂತೆ ಕನ್ನಡದಲ್ಲಿ ಹಲವು ಸ್ಟಾರ್ ನಟರಿಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ ಓಂ ಪ್ರಕಾಶ್ ರಾವ್. 90ರ ದಶಕದ ಬಳಿಕ ಬರೋಬ್ಬರಿ 10-15 ವರುಷಗಳ ಕಾಲ ಕನ್ನಡದಲ್ಲಿ ನಿರ್ದೇಶಕರಾದ ಓಂ ಪ್ರಕಾಶ್ ರಾವ್ ಅವರು ಸಾಕಷ್ಟು ಹವಾ ಕ್ರಿಯೇಟ್ ಮಾಡಿದ್ದರು. 'ಬಿಗ್ ಬಾಸ್ ಕನ್ನಡ'ದಲ್ಲಿ ಕಾಣಿಸಿಕೊಂಡು ಸಹ ಅವರು ಸಾಕಷ್ಟು ಸದ್ದು ಸುದ್ದಿ ಮಾಡಿದ್ದರು. ಈಗ ಅಷ್ಟಾಗಿ ಸುದ್ದಿಯಲ್ಲಿ ಇಲ್ಲ, ಆದರೆ, ಮುಂದೆ ಸಖತ್ ಸುದ್ದಿ ಮಾಡೋ ತರ ಇದೆ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ