ಸುದೀಪ್ ಹಳೆಯ ಪೋಸ್ಟ್ ಈಗ ಭಾರೀ ವೈರಲ್, ಅಮ್ಮನ ಬಗ್ಗೆ ಏನ್ ಹೇಳಿದ್ರು ಕಿಚ್ಚ?!

By Shriram Bhat  |  First Published Oct 20, 2024, 2:28 PM IST

ಬಿಗ್​ಬಾಸ್ ವೇದಿಕೆ ಮೇಲೆ ಸುದೀಪ್ ಅವರು ಅವರ ತಾಯಿಯನ್ನು ನೆನಪಿಸಿಕೊಂಡಿದ್ದರು. ಈ ಸೀಸನ್​ನ ಮೊದಲ ವೀಕೆಂಡ್ ಪಂಚಾಯಿತಿಗೆ ಬಂದಿದ್ದ ಸುದೀಪ್ ಶೇರವಾನಿ ಹಾಕಿಕೊಂಡು ಬರಿಗಾಲಲ್ಲಿ ವೇದಿಕೆಗೆ ಹತ್ತಿದ್ದರು...


ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಮಾತೃ ವಿಯೋಗ ಕಾಡಿದ್ದು ಗೊತ್ತೇ ಇದೆ. ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಸಂಜೀವ್ (Saroja Sanjeev) ಅವರು ನಿಧನರಾಗಿದ್ದಾರೆ. ಇದೆ.ನಿನ್ನೆ ರಾತ್ರಿಯಿಂದಲೇ ಅವರ ಆರೋಗ್ಯ ತೀವ್ರ ಬಿಗಡಾಯಿಸಿದ್ದು, ಬಳಿಕ ಅವರನ್ನು ಉಳಿಸಲು ಅಸಾಧ್ಯವಾಯಿತು. ಇಂದು 12 ಗಂಟೆಯಿಂದ ಸುದೀಪ್ ನಿವಾಸದಲ್ಲಿ ಸರೋಜಾ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾಯಂಕಾಲ 5 ರಿಂದ 7 ಗಂಟೆಯವರೆಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿ ಇರುವ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.

 

Tap to resize

Latest Videos

ಪೋಷಕರು ಎಂದರೆ ನಟ ಕಿಚ್ಚ ಸುದೀಪ್ ಅವರಿಗೆ ಪಂಚಪ್ರಾಣ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿ. ಕಾರಣ, ಸುದೀಪ್ ಅವರು ಹಲವಾರು ವೇದಿಕೆಗಳಲ್ಲಿ ತಮ್ಮ ಅಪ್ಪ-ಅಮ್ಮನ ಬಗ್ಗೆ ಒಳ್ಳೆಯ ಮಾತು ಹೇಳಿದ್ದಾರೆ. ಜೊತೆಗೆ, ಹಲವು ಬಾರಿ ಸಂದರ್ಶನಗಳಲ್ಲಿ, 'ಪ್ರತಿಯೊಬ್ಬರೂ ಅವರ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದ್ದಾರೆ. ಇದೀಗ ನಟ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿತ್ತು ಎನ್ನಲಾಗಿದೆ. 

ಮುಗಿಲು ಮುಟ್ಟಿದ ಕಿಚ್ಚನ ಆಕ್ರಂದನ, ಅಮ್ಮನ ಪಾದ ಹಿಡಿದು ಕಣ್ಣೀರಾದ ನಟ ಸುದೀಪ್

undefined

ಇದೀಗ, ನಟ ಸುದೀಪ್ ಅವರು ತಮ್ಮ ತಾಯಿ ಬಗ್ಗೆ ಎಮೋಶನಲ್ ಆಗಿ ಬರೆದಿ ಪೋಸ್ಟ್ ಮಾಡಿದ್ದ ಹಳೆಯ ಫೋಟೋವೊಂದು ಭಾರಈ ವೈರಲ್ ಆಗುತ್ತಿದೆ. ಅದರಲ್ಲಿ ನಟ ಸುದೀಪ್ ಅವರು ಅದೇನು ಬರೆದುಕೊಂಡಿದ್ದಾರೆ ಗೊತ್ತೇ..? ಲವ್ ಯೂ ಅಮ್ಮಾ.. ನಿನ್ನ ಮಗನಾಗಿ ಹುಟ್ಟಿರುವುದು ಜೀವನ ನನಗೆ ಕೊಟ್ಟಿರುವ ಅತ್ಯುತ್ತಮ ಕೊಡುಗೆ (Love you Amma.. Being your son is the best gift life has offered me) ಅಂತ ಬರೆದು ಹಲವು ಕಾಲದ ಹಿಂದೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದೀಗ ಸಖತ್ ವೈರಲ್ ಆಗುತ್ತಿದೆ. 

ಇತ್ತೀಚೆಗಷ್ಟೆ ಬಿಗ್​ಬಾಸ್ ವೇದಿಕೆ ಮೇಲೆ ಸುದೀಪ್ ಅವರು ಅವರ ತಾಯಿಯನ್ನು ನೆನಪಿಸಿಕೊಂಡಿದ್ದರು. ಈ ಸೀಸನ್​ನ ಮೊದಲ ವೀಕೆಂಡ್ ಪಂಚಾಯಿತಿಗೆ ಬಂದಿದ್ದ ಸುದೀಪ್ ಶೇರವಾನಿ ಹಾಕಿಕೊಂಡು ಬರಿಗಾಲಲ್ಲಿ ವೇದಿಕೆಗೆ ಹತ್ತಿದ್ದರು. ನವರಾತ್ರಿ ಇದ್ದ ಕಾರಣ ತಾವು ಹೀಗೆ ಡ್ರೆಸ್ ಮಾಡಿಕೊಂಡು ಬಂದಿದ್ದಾಗಿ ಹೇಳಿದ ಸುದೀಪ್, ಕ್ಯಾಮೆರಾ ನೋಡಿಕೊಂಡು 'ಅಮ್ಮ ನೋಡಿ, ಬರಿಗಾಲಲ್ಲಿ ಬಂದಿದ್ದೀನಿ, ಹಬ್ಬಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಂಡಿದ್ದೀನಿ' ಎಂದಿದ್ದರು.

ಅಮ್ಮನ ಸಾವಿನ ಸೂಚನೆ ಸುದೀಪ್‌ಗೆ ಮೊದಲೇ ಸಿಕ್ಕಿತ್ತಾ? ಬದುಕಿಸಲು ಹರಕೆ ಹೊತ್ತಿದ್ರಾ?

ಸದ್ಯ ನಟ ಕಿಚ್ಚ ಸುದೀಪ್ ಅವರು 'ಬಿಗ್ ಬಾಸ್ ಕನ್ನಡ ಸೀಸನ್-11' ಶೋ ನಡೆಸಿಕೊಡುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಗ್ ಬಾಸ್ ಕನ್ನಡದ ಹೋಸ್ಟ್ ಆಗಿ ನಟ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಳೆದ ಹತ್ತೂ ಸೀಸನ್‌ಗಳನ್ನು ಸಹ ನಟ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ಗಮನಾರ್ಹ ಅಂಶ. ಇದೀಗ ಸುದೀಪ್ ಹನ್ನೊಂದನೇ ಸೀಸನ್ ನಡೆಸಿಕೊಡುತ್ತಿದ್ದು, ಇದೇ ತಮ್ಮ ಕೊನೆಯ ಬಿಗ್ ಬಾಸ್ ಶೋ ಎಂದು ಅದೇ ವೇದಿಕೆಯಲ್ಲಿ ಘೋಷಿಸಿದ್ದಾರೆ. 
 

click me!