
ಬೆಂಗಳೂರು (ಫೆ.14): ಸ್ಯಾಂಡಲ್‌ವುಡ್ ಕಳೆದುಕೊಂಡ ಚಿರಂಜೀವಿಯನ್ನು ಮಗನ ರೂಪದಲ್ಲಿ ಹುಟ್ಟಿ ಬಂದಿದ್ದಾನೆಂದೇ ಅಭಿಮಾನಿಗಳು ಹಾಗೂ ಕುಟುಂಬ ನಂಬಿಕೊಂಡಿದೆ. ಹುಟ್ಟಿದಾಗ ಫೋಟೋ ರಿವೀಲ್ ಮಾಡಿದ್ದ ಚಿರಂಜೀವಿ ಕುಟುಂಬ, ಮತ್ಯಾವತ್ತೂ ಮಗನ ಫೋಟೋವನ್ನಾಗಲಿ, ವೀಡಿಯೋವನ್ನಾಗಲಿ ಜನರಿಗೆ ತೋರಿಸಲಿಲ್ಲ. ಇದೀಗ ಚಿರಂಜೀವಿ ಪತ್ನಿ ಮೇಘನಾ ತಮ್ಮ ಮಗನನ್ನು ಜಗತ್ತಿಗೆ ಸಿಂಬಾ ಎಂದು ಪರಿಚಯಿಸಿದ್ದಾರೆ. ಮಗನ ವೀಡಿಯೋವನ್ನು ಸೋಷಿಯಲ್ ಮೀಡಿಯದಲ್ಲಿ ಪೋಸ್ಟ್ ಮಾಡಿ, ಇಷ್ಟು ದಿನ ಜೂನಿಯರ್ ಚಿರಂಜೀವಿ ಎಂದು ಕರೆಯುತ್ತಿದ್ದ ಮಗನನ್ನು ಸಿಂಬಾನೆಂದು ವೀಡಿಯೋ ತೋರಿಸಿ, ವಿಶ್ವಕ್ಕೆ ಪರಿಚಯಿಸಿದ್ದಾರೆ.
"
ಫೆ.12ರಂದೇ ಸರ್ಪೈಸ್ ನೀಡುವುದಾಗಿ ಮುನ್ಸೂಚನೆ ನೀಡಿದ್ದ ಮೇಘನಾ, ಮಗನ ಧ್ವನಿ ಕೇಳಿಸಿದ್ದರು. ಫೆ.14ರ ಮಧ್ಯ ರಾತ್ರಿ ಮಗನನ್ನು ಜಗತ್ತಿಗೆ ಪರಿಚಯಿಸುವ ಸುಳಿವನ್ನೂ ನೀಡಿದ್ದರು. ಕೊಟ್ಟ ಮಾತಿನಂತೆ ಜಗತ್ತಿಗೆ ಚಿರಂಜೀವಿ ಪುತ್ರನನ್ನು ಮೇಘನಾ ಪರಿಚಯಿಸಿದ್ದಾರೆ.
ಮೇಘನಾ ರಾಜ್‌ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕಳೆದ ವರ್ಷ ಜನರು ಕೊರೋನಾದಿಂದ ತತ್ತರಿಸಿ, ಲಾಕ್‌ಡೌನ್ ಕಾರಣದಿಂದ ಬಂಧಿಯಾಗಿದ್ದರು. ಆಗ ಸ್ಯಾಂಡಲ್‌ವುಡ್‌ಗೆ ಚಿರಂಜೀವಿಯ ಸಾವು ಬರ ಸಿಡಿಲಿನಂತೆ ಬಡಿದಿತ್ತು. ಹೃದಯಾಘಾತದಿಂದ ಚಿರಂಜೀವಿ ಅಕಾಲಿಕ ಮರಣಕ್ಕೆ ತುತ್ತಾದರು. ಪತಿ ಸಾವಿನ ವೇಳೆ ಮೇಘನಾ ತಾಯಿಯಾಗುವ ಸಂತಸದಲ್ಲಿದ್ದರು. ದುಃಖದಲ್ಲಿಯೇ ದಿನದೂಡಿದ ಮೇಘನಾ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಚಿರು ಕುಟುಂಬ ಹಾಗೂ ಅಭಿಮಾನಿಗಳು ಚಿರಂಜೀವಿಯೇ ಹುಟ್ಟಿದ್ದಾನೆಂಬ ಸಂತೋಷದಲ್ಲಿದ್ದರು. ಮಗನ ನಗುವಿನಲ್ಲಿ ಪತಿಯ ಸಾವಿನ ನೋವನ್ನು ಮರೆಯುವುದಾಗಿ ಹೇಳಿಕೊಂಡಿದ್ದರು.
ಆ ನಂತರ ಮೇಘನಾ ಸುಖ ದುಃಖದಲ್ಲಿ ಕನ್ನಡಿಗರು ಭಾಗಿಯಾಗಿದ್ದಾರೆ. ತೊಟ್ಟಿಲು ಶಾಸ್ತ್ರ ಮುಗಿಸಿದ ಮೇಘನಾ ಮಾಧ್ಯಮದೊಂದಿಗೆ ಮಾತನಾಡಿ, ಸಿನಿಮಾಗೆ ಕಮ್‌ಬ್ಯಾಕ್ ಮಾಡುವುದಾಗಿಯೂ ಅನೌನ್ಸ್ ಮಾಡಿದ್ದರು. ಆ ನಂತರ ಹಲವು ರೀತಿಯಲ್ಲಿ ಮಗನ ಫೋಟೋವನ್ನು ಪರೋಕ್ಷವಾಗಿ ತೋರಿಸಿದ್ದರೂ, ನೇರವಾಗಿ ತೋರಿಸಿದ್ದು ಇದೇ ಮೊದಲು.
"
ಎಂದಿನಂತೆ ಮೇಘನಾ ಹಾಗೂ ಮಗುವಿಗೆ ಒಳ್ಳೇಯದಾಗಲೆಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ನಮ್ಮೆಲ್ಲರದ್ದೂ ಅದೇ ಹಾರೈಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.