ಆನ್‌ಲೈನ್ ಗೇಮಿಂಗ್‌ಗಾಗಿ ವಿಜಯ್ ರಾಘವೇಂದ್ರಗೆ ಜೋಡಿಯಾದ 'ಬಿಗ್ ಬಾಸ್' ಶ್ರುತಿ

By Shruthi KrishnaFirst Published Apr 1, 2023, 11:39 AM IST
Highlights

ಆನ್‌ಲೈನ್ ಗೇಮಿಂಗ್‌ಗಾಗಿ ನಟ ವಿಜಯ್ ರಾಘವೇಂದ್ರಗೆ ಜೋಡಿಯಾಗಿದ್ದಾರೆ 'ಬಿಗ್ ಬಾಸ್' ಶ್ರುತಿ ಪ್ರಕಾಶ್.

ಸ್ಯಾಂಡಲ್ ವುಡ್ ನಟಿ ವಿಜಯ ರಾಘವೇಂದ್ರ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ವಿಜಯ್ ರಾಘವೇಂದ್ರ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಅಪರಾಧಗಳ ಬಗ್ಗೆ ಹೇಳಲು ತೆರೆಮೇಲೆ ಬರ್ತಿದ್ದಾರೆ. ಗ್ರೇ ಗೇಮ್ಸ್ ಎಂದು ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಿದ್ದು ಈಗಾಗಲೇ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದು ಕುತೂಹಲ ಹೆಚ್ಚಿಸಿದೆ. ಇಲ್ಲಿ ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿದ್ದಾರೆ ನಟಿ, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್.  

ವಿಭಿನ್ನ ಕಥಾಹಂದರ ಹೊಂದಿರುವ "ಗ್ರೇ ಗೇಮ್ಸ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ. "ಗ್ರೇ ಗೇಮ್ಸ್" ಒಂದು ರೋಮಾಂಚಕ ಕೌಟುಂಬಿಕ ಚಿತ್ರವಾಗಿದೆ. ಗ್ರೇ ಗೇಮ್ಸ್, ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಅಪರಾಧಗಳ ವಿಷಯಗಳ ಸುತ್ತ ಸುತ್ತುತ್ತದೆ. ವಿಜಯ್ ರಾಘವೇಂದ್ರ ಮನಶ್ಶಾಸ್ತ್ರಜ್ಞನಾಗಿ ನಟಿಸಿದ್ದಾರೆ. ಭಾವನಾ ರಾವ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ.  ಶ್ರುತಿ ಪ್ರಕಾಶ್ ಸಿನಿಮಾ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ತಂತ್ರಜ್ಞಾನ ಯುಗದಲ್ಲಿ ನಮ್ಮ ಮೇಲಾಗುವ ಮಾನಸಿಕ ಒತ್ತಡವನ್ನು ಆಧರಿಸಿದ ಸಿನಿಮಾವಾಗಿದೆ. ಚಿತ್ರದಲ್ಲಿ ಮೂರು ಹಾಡುಗಳು ಮತ್ತು ಹೊಸ ಕಥಾವಸ್ತುವಿನ ಜೊತೆಗೆ ಭಾವನಾತ್ಮಕ ತಿರುವುಗಳೊಂದಿಗೆ, ಮಾನಸಿಕವಾಗಿ  ಸೆಳೆಯುವಂತ ಸಿನಿಮಾವಾಗಿದೆ.

ಸದ್ಯ ರಿಲೀಸ್ ಆಗಿರುವ ಟೀಸರ್ ಆನಂದ್ ಆಡಿಯೋದಲ್ಲಿ ಲಭ್ಯವಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಂಗಾಧರ ಸಾಲಿಮಠ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಒಂದು ರೋಚಕ ಕಥೆಯನ್ನು ರಚಿಸಿದ್ದಾರೆ. ಚಿತ್ರದ ಛಾಯಾಗ್ರಾಹಕ ವರುಣ ಡಿಕೆ ಕ್ಯಾಮೆರಾದಲ್ಲಿ ಕಥೆಗೆ ಜೀವ ತುಂಬಿದ್ದಾರೆ. ಚಿತ್ರವನ್ನು ಆನಂದ ಹೆಚ್.ಮುಗದ್ ನಿರ್ಮಿಸಿದ್ದಾರೆ ಮತ್ತು ಸತೀಶ ಗ್ರಾಮಪುರೋಹಿತ, ಅರವಿಂದ ಜೋಶಿ, ಮತ್ತು ಡೋಲೇಶ್ವರ್ ರಾಜ್ ಸುಂಕು ಸಹ-ನಿರ್ಮಾಣ ಮಾಡಿದ್ದಾರೆ. 

ಪೊಲೀಸ್‌ ಪಾತ್ರಕ್ಕೆ ಬ್ರಾಂಡ್‌ ಮಾಡಿದ್ರೆ ಖುಷಿನೇ: ವಿಜಯ ರಾಘವೇಂದ್ರ

'ರಿಯಾಲಿಟಿ ಮತ್ತು ವರ್ಚುವಾಲಿಟಿ ಜಗತ್ತಿನ ಕಥೆಯುಳ್ಳ, ನುರಿತ ಕಲಾವಿದರು ಅಭಿನಯಿಸಿರುವ ಈ ಚಿತ್ರ, ಪ್ರೇಕ್ಷಕರನ್ನು ಮನರಂಜನೆಯ ಜೊತೆಗೆ ಅವರ ವಾಸ್ತವದ ಗ್ರಹಿಕೆಗೆ ಸವಾಲು ಹಾಕುತ್ತದೆ ಎಂಬ ವಿಶ್ವಾಸವಿದೆ' ಎನ್ನುತ್ತಾರೆ ನಿರ್ದೇಶಕ ಗಂಗಾಧರ ಸಾಲಿಮಠ.

Kadala Theerada Bhargava Film Review ಕಡಲ ತೀರದ ಗೊಂದಲಗಳು

ನಟ ವಿಜಯ್ ರಾಘವೇಂದ್ರ ಬಿಗ್ ಬಾಸ್ ಖ್ಯಾತಿಯ ನಟಿ ಶ್ರುತಿ ಪ್ರಕಾಶ್ ಮತ್ತು ಭಾವನಾ ರಾವ್ ಜೊತೆಗೆ ಅಪರ್ಣಾ, ರವಿ ಭಟ್ ಮತ್ತು ಪ್ರಮುಖ ಅಭಿನಯಿಸಿದ್ದಾರೆ. ಈ ಕಥೆಯು ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆಗಳನ್ನು ನಿರಂತರ ಬದಲಾವಣೆ ಮತ್ತು ಯೋಚಿಸಲು ಒಳಪಡಿಸುತ್ತಿದೆ ಮತ್ತು ವಾಸ್ತವದ ನಿಮ್ಮ ಗ್ರಹಿಕೆಗೆ ಸವಾಲು ಹಾಕುತ್ತದ ಗ್ರೇ ಗೇಮ್ಸ್‌.

click me!