Yash: ರಾವಣ ಪಾತ್ರ ಮಾಡಲ್ಲ ಎಂದಿದ್ದೇಕೆ ರಾಕಿಂಗ್ ಸ್ಟಾರ್? ಉತ್ತಮ ನಿರ್ಧಾರ ಎಂದ ಪ್ಯಾನ್ಸ್

Published : Jun 13, 2023, 05:18 PM IST
Yash: ರಾವಣ ಪಾತ್ರ ಮಾಡಲ್ಲ ಎಂದಿದ್ದೇಕೆ ರಾಕಿಂಗ್ ಸ್ಟಾರ್?  ಉತ್ತಮ ನಿರ್ಧಾರ ಎಂದ ಪ್ಯಾನ್ಸ್

ಸಾರಾಂಶ

ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ಯಶ್ ರಾವಣ ಪಾತ್ರ ಮಾಡಲ್ಲ ಎಂದು ತಿರಸ್ಕರಿಸಿದ್ದಾರೆ. ಅಭಿಮಾನಿಗಳು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಬಳಿಕ ಹೊಸ ಸಿನಿಮಾ ಅಮೌನ್ಸ್ ಮಾಡಿಲ್ಲ. ಹಾಗಾಗಿ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೆಜಿಎಫ್-2 ರಿಲೀಸ್ ಆಗಿ ವರ್ಷದ ಮೇಲಾದರೂ ಯಶ್ ಸಿನಿಮಾ ಅನೌನ್ಸ್ ಮಾಡಿಲ್ಲ. ಈ ನಡುವೆ ಕೆಜಿಎಫ್ ಸ್ಟಾರ್ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ನಿತೇಶ್ ತಿವಾರಿ ಅವರ ಬಹುನಿರೀಕ್ಷೆಯ ರಾಮಾಯಣ ಚಿತ್ರದಲ್ಲಿ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. 

ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ ರಾವಣನಾಗಿ ಯಶ್ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸೀತೆಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಆದರೀಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಯಶ್ ರಾವಣನಾಗಿ ನಟಿಸಲು ತಿರಸ್ಕರಿಸಿದ್ದಾರಂತೆ. ಮೂಲಗಳ ಪ್ರಕಾರ ಯಶ್ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಯಶ್ ನಿರ್ಧಾರಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.  

ಅಭಿಷೇಕ್-ಅವಿವಾ ವೆಡ್ಡಿಂಗ್ ಪಾರ್ಟಿ: ಸಂಭ್ರಮದಲ್ಲಿ ಯಶ್, ಶಿವಣ್ಣ, ಪ್ರಭುದೇವ, ಜಯಪ್ರದಾ ಸೇರಿ ತಾರೆಯರ ದಂಡು

ಯಶ್ ರಾವಣನಾಗಲು ತಿರಸ್ಕರಿಸಿದ್ದೇಕೆ? 

ಯಶ್ ನೆಗೆಟಿವ್ ಪಾತ್ರಗಳಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಅಭಿಮಾನಿಗಳು ಯಶ್ ಅವರನ್ನು ನೆಗೆಟಿವ್ ಪಾತ್ರಗಳಲ್ಲಿ ನೋಡಲು ಇಷ್ಟಪಡದ ಕಾರಣ ರಾವಣ ಪಾತ್ರ ರಿಜೆಕ್ಟ್ ನಾಡಿದ್ದಾರೆ ಎನ್ನಲಾಗಿದೆ. ಯಶ್ ಅಭಿಮಾನಿಗಳು ಏನು ಬಯಸುತ್ತಾರೆ ಅಂತ ತುಂಬಾ ಗಮನಕೊಡುತ್ತಾರೆ. ಅಭಿಮಾನಿಗಳು ನೆಗೆಟಿವ್ ಪಾತ್ರ ಒಪ್ಪಿಕೊಳ್ಳುವುದಿಲ್ಲ. ಅಭಿಮಾನಿಗಳ ಭಾವನೆಗಳ ಬೆಲೆ ಕೊಡುತ್ತಾರೆ. ಅಲ್ಲದೇ ತನ್ನ ಕರಿಯರ್ ಉತ್ತುಂಗದಲ್ಲಿರುವ ಈ ಸಮಯದಲ್ಲಿ ನೆಗೆಟಿವ್ ಪಾತ್ರ ಮಾಡುವಂತ ರಿಸ್ಕ್ ಯಶ್ ತೆಗೆದುಕೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

ಫ್ಯಾನ್ಸ್ ರಿಯಾಕ್ಷನ್ 

ಯಶ್ ಅವರನ್ನು ರಾವಣ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಅಸಮಾಧಾನ ಹೊರಹಾಕಿದ್ದರು. ರಾಮನ ಪಾತ್ರ ಮಾಡುತ್ತಿರುವ ರಣಬೀರ್ ವಿರುದ್ಧ ಆಕ್ರೋಶ ಹೊರಹಾಕಿ ಯಶ್ ಅವರನ್ನು ಹೊಗಳಿದ್ದರು. ಅಭಿಮಾನಿಗಳು 'ಉತ್ತಮ ನಿರ್ಧಾರ' ಎಂದು ಹೊಗಳುತ್ತಿದ್ದಾರೆ. 'ರಾಮ ಪಾತ್ರಕ್ಕೆ ಪರಿಪೂರ್ಣರಾಗುತ್ತಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇಬ್ಬರೂ ಹಿನ್ನೆಲೆಯಲ್ಲಿ ವಾನರ ಸೇನೆಯಲ್ಲಿ ಕಾಣಿಸಿಕೊಳ್ಳಲು ಪರಿಪೂರ್ಣರಾಗಲಿದ್ದಾರೆ' ಎಂದು ಹೇಳಿದ್ದಾರೆ. 

ಹೆಣ್ಣುಬಾಕ-ಮಾದಕ ವ್ಯಸನಿ ರಾಮ, ಸೆಲ್ಫ್‌ಮೇಡ್ ಸ್ಟಾರ್‌ ರಾವಣ, ಇದೆಂತ ಕಲಿಯುಗ? ರಣಬೀರ್ ತೆಗಳಿ ಯಶ್ ಹೊಗಳಿದ ಕಂಗನಾ

ರಾಮಾಯಣ ಬಗ್ಗೆ

ನಿತೇಶ್ ತಿವಾರಿ ನಿರ್ದೇಶನದ ಮದು ಮಂಟೆನಾ ನಿರ್ಮಾಣದ ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ಆಲಿಯಾ ಭಟ್, ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವುದು ಅಧಿಕೃತ ಎನ್ನಲಾಗಿದೆ. ಈಗಾಗಲೇ ರಣಬೀರ್ ಲುಕ್ ಟೆಸ್ಟ್‌ನಲ್ಲಿ ನಿರತರಾಗಿದ್ದಾರಂತೆ. ಆದರೆ ರಾವಣನಾಗಲು ಯಶ್ ನಿರಾಕರಿಸಿದ್ದಾರೆ. ಹಾಗಾದ್ರೆ ರಾವಣ ಯಾರಾಗ್ತಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ. ಈ ವರ್ಷದ ದೀಪಾವಳಿಯಂದು ಚಿತ್ರದ ಅಧಿಕೃತ ಘೋಷಣೆ ಬರುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?