Yash: ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಸಖತ್ ಡಾನ್ಸ್; ವಿಡಿಯೋ ವೈರಲ್

Published : Apr 23, 2023, 11:23 AM ISTUpdated : Apr 24, 2023, 03:28 PM IST
 Yash: ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಸಖತ್ ಡಾನ್ಸ್; ವಿಡಿಯೋ ವೈರಲ್

ಸಾರಾಂಶ

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಸಖತ್ ಡಾನ್ಸ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ. 

ರಾಕಿಂಗ್ ಸ್ಟಾರ್ ಯಶ್ ಬ್ಲಾಕ್‌ಬಸ್ಟರ್ ಕೆಜಿಎಫ್ 2 ಬಳಿಕ ಖ್ಯಾತ ಮತ್ತಷ್ಟು ಹೆಚ್ಚಾಗಿದೆ. ದೇಶ-ವಿದೇಶಗಳಲ್ಲೂ ಯಶ್ ಹೆಸರು ರಾರಾಜಿಸುತ್ತಿದೆ. ಸಿನಿಮಾರಂಗ ಮಾತ್ರವಲ್ಲದೇ ಬೇರೆ ಬೇರೆ ಕ್ಷೇತ್ರದ ಗಣ್ಯರು ಸಹ ರಾಕಿ ಭಾಯ್‌ಯನ್ನು ಇಷ್ಟಪಡುತ್ತಾರೆ, ಭೇಟಿಮಾಡಿ ಸಂತೋಷ ಪಡುತ್ತಾರೆ. ಯಶ್ ಕ್ರಿಕೆಟ್ ಕ್ಷೇತ್ರದ ಅನೇಕರ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ಇತ್ತೀಚಿಗಷ್ಟೆ ಯಶ್ ಟೀಂ ಇಂಡಿಯಾದ ಅನೇಕ ಆಟಗಾರರನ್ನು ಭೇಟಿಯಾಗಿದ್ದರು. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಶೇಷ ಎಂದರೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದರು.    

ಈ ವರ್ಷ ಫೆಬ್ರವರಿಯಲ್ಲಿ ಹಾರ್ದಿಕ್​ ಪಾಂಡ್ಯ, ನತಾಶಾ ಸ್ಟಾಂಕೊವಿಕ್​​ ಜೊತೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆದರು. ಉದಯಪುರದಲ್ಲಿ ನಡೆದ  ಅದ್ದೂರಿ ವಿವಾಹ  ಸಮಾರಂಭಕ್ಕೆ ಅನೇಕ ಗಣ್ಯರು ಭಾಗಿ ಆಗಿದ್ದರು. ಕ್ರಿಕೆಟ್ ಮತ್ತು ಸಿನಿಮಾ ಗಣ್ಯರು ಸಹ ಹಾರ್ದಿಕ್ ಪಾಂಡ್ಯ ಮದುವೆ ಸಮಂಭ್ರಮದಲ್ಲಿ ಭಾಗಿಯಾಗಿದ್ದರು. ರಾಕಿಂಗ್ ಸ್ಟಾರ್ ಭಾಗಿಯಾಗಿದ್ದ ವಿಡಿಯೋಗಳು ಈಗ ವೈರಲ್ ಆಗಿದೆ. ಯಶ್ ಭಾಗಿಯಾಗಿದ್ದು ಅಷ್ಟೆಯಲ್ಲದೇ ಹಾರ್ದಿಕ್​ ಪಾಂಡ್ಯ  ಜೊತೆ ಸಖತ್ತಾಗಿ ಡಾನ್ಸ್ ಮಾಡಿದ್ದರು. ಪಾಂಡ್ಯ ಜೊತೆ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 



ಯಶ್ ಫೋನ್ ಮಾಡಿ KGF-3ಗೆ ರೆಡಿಯಾಗಿ ಅಂದ್ರು; ಇಂಟ್ರಸ್ಟಿಂಗ್ ಮಾತುಕತೆ ರಿವೀಲ್ ಮಾಡಿದ ರವೀನಾ ಟಂಡನ್

ಯಶ್ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು. ಇಬ್ಬರೂ ಮಸ್ತ್ ಡಾನ್ಸ್ ಮಾಡಿದ್ದಾರೆ. ಹಾರ್ದಿಕ್​ ಪಾಂಡ್ಯ ಮತ್ತು ಯಶ್​ ಇಬ್ಬರೂ ಉತ್ತಮ ಸ್ನೇಹಿತರು. ಸ್ನೇಹದಿಂದನೆ ಯಶ್ ಕ್ರಿಕೆಟಿಗ ಪಾಂಡ್ಯ ಮದುವೆಗೆ ಹಾಜರಾಗಿದ್ದರು. ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕೆಜಿಎಫ್-2 ರಿಲೀಸ್ ಆಗಿ ಒಂದು ವರ್ಷವಾಗಿದೆ. ಆದರೂ ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ. ಯಾವಾಗ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಆ ನಿರ್ದೇಶಕರ ಜೊತೆ ಸಿನಿಮಾ ಮಾಡ್ತಾರೆ ಈ ನಿರ್ದೇಶಕರ ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿವೆ. ಆದರೆ ಅದಿಕೃತವಾಗಿ ಇನ್ನೂ ಯಾವುದೇ ಸಿನಿಮಾ ಅನೌನ್ಸ್ ಆಗಿಲ್ಲ.

Yash 19; ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಿರ್ದೇಶಕಿ ಜೊತೆ ರಾಕಿಂಗ್ ಸ್ಟಾರ್ ಸಿನಿಮಾ; ಯಾರವರು?

ಇನ್ನು ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೊವಿಚ್  2020ರ ಮೇ ತಿಂಗಳಲ್ಲೇ​ ಮದುವೆ ನೆರವೇರಿತ್ತು. ಸಿಂಪಲ್ ಆಗಿ ಮದುವೆಯಾಗಿದ್ದ ಈ ಜೋಡಿ ಈ ವರ್ಷ ಮತ್ತೆ ಅದ್ದೂರಿಯಾಗಿ ಮದುವೆಯಾದರು. ಸುಂದರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೀಗ ಯಶ್ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್