
ನಟ ಚೇತನ್ ಅಹಿಂಸಾ ಇದೀಗ ರಾಮನ ಬಗ್ಗೆ ಮಾತನಾಡುವ ಮೂಲಕ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ರಾಮ ಬರೀ ಕಾಲ್ಪನಿಕ ವ್ಯಕ್ತಿ, ರಾಮಜನ್ಮಭೂಮಿ ಎನ್ನುವುದು ಅವೈಜ್ಞಾನಿಕ ಎನ್ನುವ ಮೂಲಕ ಮತ್ತೊಂದು ವಿವಾದ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಹಿಂದುತ್ವದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಕಾರಣ ನಟ ಚೇತನ್ ಅಹಿಂಸಾರನ್ನು ಬಂಧಿಸಲಾಗಿತ್ತು. "ಹಿಂದುತ್ವವನ್ನು ಸುಳ್ಳಿನ ಅಧಾರದ ಮೇಲೆ ಕಟ್ಟಲಾಗಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಜೈಲಿನಿಂದ ಬಂದ ಬಳಿಕವೂ ಚೇತನ್ ಹೆಚ್ಚಿನ ಹೋರಾಟ ಮಾಡುವುದಾಗಿ ಹೇಳಿದ್ದರು. ಇದಾದ ಬಳಿಕ ಚೇತನ್ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಎಲ್ಲಾ ಘಟನೆಗಳ ಬಳಿಕವೂ ಚೇತನ್ ಇದೀಗ ರಾಮ ಬಗ್ಗೆ ನೀಡಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ನ್ಯಾಷನಲ್ ಟಿವಿ ಎನ್ನುವ ಯೂಟ್ಯೂಬ್ ಚಾನಲ್ ಜೊತೆ ಮಾತನಾಡಿರುವ ಚೇತನ್ ರಾಮ ಬರೀ ಕಾಲ್ಪನಿಕ ವ್ಯಕ್ತಿ, ರಾಮಜನ್ಮಭೂಮಿ ಎನ್ನುವುದು ಅವೈಜ್ಞಾನಿಕ ಎಂದಿದ್ದಾರೆ. 'ಸಾರ್ವಕರ್ ಹೇಳುವಂತೆ ರಾಮ, ರಾವಣನನ್ನು ಸಾಯಿಸಿ ಅಯೋಧ್ಯೆಗೆ ಬಂದು ದೇಶ ಶುರುವಾಯಿತು ಎನ್ನುವುದನ್ನು ಒಪ್ಪುವುದಿಲ್ಲ. ಅದು ಸುಳ್ಳು. ಅದು ಅವರ ಅಭಿಪ್ರಾಯ ಇರಬಹುದು. ನಮ್ಮ ಪ್ರಕಾರ ಸುಳ್ಳು. ಅದೇ ರೀತಿ 1992 ಹಿಂದುತ್ವಕ್ಕೆ ಬಹಳ ದೊಡ್ಡ ಘಟನೆ. ಆಗ ರಾಮಜನ್ಮಭೂಮಿ ಆಗುತ್ತದೆ. ರಾಮ ಜನ್ಮಭೂಮಿ ಆದಾಗ ಬಾಬ್ರಿ ಮಸೀದಿ ಒಡೆದು ಹಾಕುತ್ತಾರೆ. ರಾಮಜನ್ಮಭೂಮಿ ಎನ್ನುವ ಕಾನ್ಸೆಪ್ಟ್ ಅವೈಜ್ಞಾನಿಕ. ರಾಮ ಅನ್ನೋದು ಕಾಲ್ಪನಿಕ ವ್ಯಕ್ತಿ. ನಂಬಿಕೆ ಇರಬಹುದು. ಸಾರ್ವಕರ್ ರಾಮ ಬೇರೆ, ಗಾಂಧೀ ರಾಮ ಬೇರೆ, ರಾಮಾಯಣದ ರಾಮ ಬೇರೆ' ಎಂದು ಹೇಳಿದರು.
ಜೈಲಿಗೆ ಹಾಕೋದು, ಗಡೀಪಾರು ಮಾಡೋದು ಅತಿರೇಕ; ಚೇತನ್ ಬಂಧನ, ವೀಸಾ ರದ್ದು ವಿರುದ್ಧ ನಟ ಕಿಶೋರ್ ಗರಂ
"ರಾಮ, ಕೃಷ್ಣ, ಗಣೇಶ ಇವೆಲ್ಲ ಜನರ ನಂಬಿಕೆ. ಅದೇ ರೀತಿ ಅಲ್ಲಾ ಕೂಡ ಆಗಿರಬಹುದು. ಇವೆಲ್ಲ ನಂಬಿಕೆ ಮೇಲೆ ಕಟ್ಟಿರುವ ದೇವರುಗಳು. ಮಾರಮ್ಮ, ಯಲ್ಲಮ್ಮ ಎಲ್ಲವೂ ಅವೈಜ್ಞಾನಿಕ. ವೈಜ್ಞಾನಿಕ ಅಂದಾಗ ಇತಿಹಾಸದಲ್ಲಿ ದಾಖಲೆ ಇರಬೇಕು. ಜೀಸಸ್, ಮೊಹಮ್ಮದ್, ಬುದ್ಧ, ಅಂಬೇಡ್ಕರ್, ಜ್ಯೋತಿಬಾ ಫುಲೆ, ಅಶೋಕ, ಅಕ್ಬರ್, ಟಿಪ್ಪು ಇವೆರೆಲ್ಲಾ ವೈಜ್ಞಾನಿಕವಾಗಿ ಇತಿಹಾಸದಲ್ಲಿ ಬದುಕಿದ್ದವರು. ಇನ್ನುಳಿದವರು ನಂಬಿಕೆ ಮೇಲೆ ಕಟ್ಟಿರುವ ಕಾಲ್ಪನಿಕ ಪಾತ್ರಗಳು" ಎಂದು ಹೇಳಿದ್ದಾರೆ.
ನಟ ಚೇತನ್ ಅಹಿಂಸಾ ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ!
ಸಾಕ್ಷಾಧಾರಗಳು ಹಾಗೂ ಪುರಾವೆಗಳು ಇವೆಯಲ್ಲಾ ಎಂದು ನಿರೂಪಕಿ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸಿದ ಚೇತನ್ "ನೀವು ಹೇಳುವ ಸಾಕ್ಷಾಧಾರಗಳು ವೈಜ್ಞಾನಿಕವಾಗಿ ಒಪ್ಪಿಗೆಯಾಗಿಲ್ಲ. ಯಾವುದಾದರೂ ಚಿಂತನೆಯ ಕೇಂದ್ರ ಇದು ಸತ್ಯ ಎಂದು ಹೇಳಿದ್ಯಾ? ಯಾರು ಕೂಡ ರಾಮನನ್ನು ಒಂದು ಅವಧಿಯಲ್ಲಿ ಒಂದು ಕಾಲಘಟ್ಟದಲ್ಲಿ ಇದ್ದ? ದ್ವಾಪರಯುಗ, ತ್ರೇತಾಯುಗ, ಕಲಿಯುಗ ಯಾವಾಗ ಅದು? ಅದೆಲ್ಲಾ ಬರೀ ಕಾಲ್ಪನಿಕ. ಬುದ್ಧನನ್ನು ತೆಗೆದುಕೊಂಡದೇ 2500 ವರ್ಷಗಳ ಹಿಂದೆ. ವೈದಿಕ ಕಾಲ, ಆರ್ಯನ್ನರು ಭಾರತಕ್ಕೆ ಬಂದಿದ್ದು 3500 ವರ್ಷಗಳ ಹಿಂದೆ. ಅಲ್ಲಿಂದಲೇ ಚತುವರ್ಣ, ವೇದಗಳು, ಹಿಂದು ಧರ್ಮ ಬಂದಿದ್ದು. ಇದೆಲ್ಲ ದಾಖಲೆಯಾಗಿದೆ. ರಾಮ, ಕೃಷ್ಣ, ಲಕ್ಷ್ಮಣ, ಸೀತಾ, ಹನುಮಂತ ಇವೆಲ್ಲಾ ಕಾಲ್ಪನಿಕ, ನಮ್ಮ ನಂಬಿಕೆಗಳು. ಜನರಿಗೆ ನಂಬಿಕೆಯ ಹಕ್ಕಿದೆ' ಎಂದು ಚೇತನ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.