ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರ ಜಗಳ-ಮನಸ್ತಾಪಗಳಿಲ್ಲದ ಡಿವೋರ್ಸ್ ಸಮಾಜದಲ್ಲಿ, ಅದರಲ್ಲು ಸೆಲೆಬ್ರಟಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ ಎನ್ನಬಹುದೇನೋ! ಏಕೆಂದರೆ, ಜಗಳ, ಆರೋಪ-ಪ್ರತ್ಯಾರೋಪಗಳು ಇಲ್ಲದೇ..
ನಟ ಹಾಗು ರಾಪರ್ ಚಂದನ್ ಶೆಟ್ಟಿ (Chandan Shetty) ಅವರು ಶಿರಡಿಗೆ (Shiradi) ಪ್ರಯಾಣ ಬೆಳೆಸಿದ್ದಾರೆ. ಈ ಮೊದಲು ನಾಲ್ಕು ವರ್ಷಗಳಿಂದ ತಮ್ಮ ಪತ್ನಿ ನಿವೇದಿತಾ ಅವರೊಂದಿಗೆ ಜೋಡಿಯಾಗಿ ಓಡಾಡುತ್ತಿದ್ದ ಚಂದನ್ ಶೆಟ್ಟಿ ಅವರದು ಈಗ ಒಂಟಿ ಪ್ರಯಾಣ. ನಟಿ ನಿವೇದಿತಾ ಗೌಡ ಅವರನ್ನು 2020ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು ಗಾಯಕ ಹಾಗೂ ನಟ ಚಂದನ್ ಶೆಟ್ಟಿ. ಇತ್ತೀಚೆಗಷ್ಟೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ತೆಗೆದುಕೊಂಡು ಬೇರೆಬೇರೆಯಾಗಿದ್ದಾರೆ. ಅವರಿಬ್ಬರ ವಿಚ್ಚೇದನ ಬಹುತೇಕ ಎಲ್ಲರಿಗೂ ಗೊತ್ತು!
ಚಂದನ್ ಶೆಟ್ಟಿ ಅವರು ಡಿವೋರ್ಸ್ ಬಳಿಕ ಹೊಸ ವೀಡಿಯೋ ಸಾಂಗ್ ಕೂಡ ಲಾಂಚ್ ಮಾಡಿದ್ದಾರೆ. ಇನ್ನು ನಟಿ ನಿವೇದಿತಾ ಗೌಡ ಅವರು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ನಾಲ್ಕು ವರ್ಷಗಳ ಮೊದಲು ಪ್ರೀತಿಸಿ ಮದುವೆಯಾಗಿದ್ದ ಚಂದನ್ ಹಾಗು ನಿವೇದಿತಾ ಮದುವೆಯಾಗಿ ಮೂರು ವರ್ಷಗಳ ಬಳಿಕವೂ ದಾಂಪತ್ಯದಲ್ಲಿ ಹೊಂದಾಣಿಕೆ ಕೊರತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೊನೆಗೂ ಹೊಂದಾಣಿಕೆ ಸಾಧ್ಯವಾಗದು ಎಂಬುದನ್ನು ಅರಿತುಕೊಂಡ ಅವರಿಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ತೆಗೆದಕೊಂಡಿದ್ದಾರೆ.
ಸಾಯಂಕಾಲದ ಹೊತ್ತಲ್ಲಿ ಖುಷ್ಬೂ & ಮಾಲಾಶ್ರೀ ಅಲ್ಲೇನ್ ಮಾಡ್ತಿದ್ರು; ಮಗಳು ಕೂಡ ಇದ್ರಲ್ವ..!
ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರ ಜಗಳ-ಮನಸ್ತಾಪಗಳಿಲ್ಲದ ಡಿವೋರ್ಸ್ ಸಮಾಜದಲ್ಲಿ, ಅದರಲ್ಲು ಸೆಲೆಬ್ರಟಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ ಎನ್ನಬಹುದೇನೋ! ಏಕೆಂದರೆ, ಜಗಳ, ಆರೋಪ-ಪ್ರತ್ಯಾರೋಪಗಳು ಇಲ್ಲದೇ ಇಬ್ಬರೂ ಒಟ್ಟಿಗೇ ಕೈಕೈ ಹಿಡಿದುಕೊಂಡು ಫ್ಯಾಮಿಲಿ ಕೋರ್ಟ್‌ಗೆ ಬಂದು, ಡಿವೋರ್ಸ್ ಬಳಿಕ ಕೂಡ ಶೇಕ್ ಹ್ಯಾಂಡ್ ಮಾಡಿಕೊಂಡೇ ದೂರವಾಗಿರುವುದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಭಾರತಿ, ಪಾರ್ವತಮ್ಮ ರಾಜ್‌ಕುಮಾರ್ ಪೋಟೋ ವೈರಲ್, ಮಧ್ಯೆ ಅಣ್ಣಾವ್ರು ಇರ್ಬೇಕಿತ್ತು ಎಂದ ನೆಟ್ಟಿಗರು!
ಒಟ್ಟಿನಲ್ಲಿ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಈಗ ದಂಪತಿಗಳಲ್ಲ. ಸದ್ಯ ಚಂದನ್ ಅವರು ಶಿರಡಿಗೆ ಹೊರಟಿದ್ದು, ಈ ಸಂಗತಿ ಗೊತ್ತಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಕೆಲವರು ಸಹಜವಾಗಿ ಕಾಮೆಂಟ್ ಮಾಡಿದ್ರೆ ಇನ್ನೂ ಹಲವರು ಲೈಟ್ ಆಗಿ ಕಾಲೆಳೆದು ಹ್ಯಾಪಿ ಜರ್ನಿ ಎಂದು ವಿಶ್ ಮಾಡಿದ್ದಾರೆ.
ಬೆಂಗಳೂರಂತ ಸಿಟಿನಲ್ಲಿ, ಅದ್ರಲ್ಲೂ ಮನೆ ಹತ್ರನೇ ಬಂದು ಗುಂಡಿಟ್ಟು ಸಾಯಿಸ್ತಾರೆ ಅಂದ್ರೆ..: ಇಂದ್ರಜಿತ್ ಲಂಕೇಶ್