
ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಮಂದಿ ನೋಡಿದ ಟ್ರೇಲರ್ (Trailer) 'ಕೆಜಿಎಫ್ 2' (KGF 2) ಚಿತ್ರದ್ದು. ಬಿಡುಗಡೆಯಾದ 24 ಗಂಟೆಗಳಲ್ಲಿ 109 ಮಿಲಿಯನ್ ವೀಕ್ಷಣೆ ಕಂಡ ಈ ಟ್ರೇಲರ್ ನಂತರವೂ ಟ್ರೆಂಡಿಂಗ್ ಆಗುತ್ತಲೇ ಇದೆ. ಈ ಸುದ್ದಿ ಅಚ್ಚಿಗೆ ಹೋಗುವ ಕ್ಷಣದಲ್ಲಿ ಕೆಜಿಎಫ್2 ಟ್ರೇಲರ್ ನೋಡಿದವರ ಸಂಖ್ಯೆ 13 ಕೋಟಿ ಮೀರಿದೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾದ ಟ್ರೇಲರ್‌ಗಳ ಪೈಕಿ ಹಿಂದಿ ಟ್ರೇಲರ್ ಅತ್ಯಂತ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅವರ ಸಂಖ್ಯೆ ಆರು ಕೋಟಿ ದಾಟಿದೆ.
ತೆಲುಗಿನಲ್ಲಿ 2.6 ಕೋಟಿ, ಕನ್ನಡದಲ್ಲಿ 2.1 ಕೋಟಿ ತಮಿಳಿನಲ್ಲಿ 1.5 ಕೋಟಿ ಹಾಗೂ ಮಲಯಾಳಂನಲ್ಲಿ ಒಂದು ಕೋಟಿ ಮಂದಿ ವೀಕ್ಷಿಸಿರುವ ಈ ಟ್ರೇಲರ್ ಅನೇಕ ಕಾರಣಗಳಿಗೆ ಚರ್ಚೆಯಾಗುತ್ತಿದೆ. ಬಹುಭಾಷೆಗಳಲ್ಲಿ ಕನ್ನಡ ಸಿನಿಮಾ ಈ ಮಟ್ಟಿನ ಸೌಂಡ್ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಯಶ್ (Yash), ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತಿತರರ ತಾರಾಗಣವಿದೆ. ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಚಿತ್ರವನ್ನು ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ. ಚಿತ್ರ ಏಪ್ರಿಲ್ 14ಕ್ಕೆ ತೆರೆಗೆ ಅಪ್ಪಳಿಸಲಿದೆ.
'KGF 2' ಚಿತ್ರದಲ್ಲಿ ಅನಂತ್ ನಾಗ್ ಯಾಕಿಲ್ಲ? ಅಭಿಮಾನಿಗಳ ಪ್ರಶ್ನೆ
ಅದ್ದೂರಿಯಾಗಿ ಬಿಡುಗಡೆಯಾದ ಕೆಜಿಎಫ್ 2 ಟ್ರೇಲರ್: ಯಶ್ ನಟನೆಯ ‘ಕೆಜಿಎಫ್ 2’ ಚಿತ್ರದ ಟ್ರೈಲರ್ ಐದು ಭಾಷೆಯಲ್ಲಿ ಬಿಡುಗಡೆಗೊಂಡಿದೆ. ಯಶ್, ಶಿವರಾಜ್ ಕುಮಾರ್, ಸಂಜಯ್ ದತ್, ರವೀನಾ ಟಂಡನ್, ಪೃಥ್ವಿರಾಜ್ ಉಪಸ್ಥಿತಿಯಲ್ಲಿ, ಐದು ಭಾಷೆಯ ಮಾಧ್ಯಮದ ಮಂದಿಯ ಸಮ್ಮುಖದಲ್ಲಿ, ಕರಣ್ ಜೋಹರ್ ನಿರೂಪಣೆಯಲ್ಲಿ ಅದ್ದೂರಿಯಾಗಿ ಟ್ರೈಲರ್ ಬಿಡುಗಡೆ ಆಗಿದ್ದು ವಿಶೇಷ. ಕನ್ನಡ ಟ್ರೈಲರ್ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್ ಮಾತನಾಡಿ ‘ಯಶ್ ಮೊದಲಿಂದಲೂ ನನಗೆ ಇಷ್ಟ. ನನ್ನ ತಮ್ಮನ ಹಾಗೆ ಇರುವವರು ಅವರು. ಎಲ್ಲರಂತೆ ನಾನೂ ಸಿನಿಮಾಗಾಗಿ ಕಾಯುತ್ತಿದ್ದೇನೆ. ಮೊದಲ ದಿನ ಮೊದಲ ಶೋ ನೋಡುತ್ತೇನೆ’ ಎಂದರು.
ಮಲಯಾಳಂ ನಟ ಪೃಥ್ವಿರಾಜ್, ‘ಪ್ರಾದೇಶಿಕ ಭಾಷೆಯ ಸಿನೆಮಾ ಈ ಮಟ್ಟಕ್ಕೆ ಬಂದು ನಿಂತಿರುವುದು ನಮಗೆ ಎಲ್ಲರಿಗೂ ಹೆಮ್ಮೆಯ ವಿಚಾರ. ‘ಬಾಹುಬಲಿ’ ನಾವು ಕನಸು ಕಾಣಬಹುದು ಎಂದು ತೋರಿಸಿ ಕೊಟ್ಟಿತು. ಕೆಜಿಎಫ್ ಕನಸು ನನಸು ಮಾಡಬಹುದು ಎಂದು ನಂಬಿಕೆ ಹುಟ್ಟಿಸಿತು. ಇದು ಮುಂದಿನ ಶ್ರೇಷ್ಠ ಪ್ರಯಾಣದ ಆರಂಭ. ರಾಜಮೌಳಿ ಮತ್ತು ಪ್ರಶಾಂತ್ ನೀಲ್ ಭಾರತ ಸಿನೆಮಾ ಕ್ಷೇತ್ರದ ಹೆಮ್ಮೆಯ ನಿರ್ದೇಶಕರು. ಈ ಸಿನೆಮಾ ವಿತರಣೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈ ಸಿನೆಮಾದ ನಿರೂಪಣೆ ಕರಣ್ ಜೋಹರ್ ಮಾಡಿದ್ದಾರೆ. ಸಿನಿಮಾಗಾಗಿ ಇಡೀ ದೇಶ ಕಾಯುತ್ತಿದೆ. ಪ್ರಾದೇಶಿಕ ಸಿನೆಮಾ ಇಷ್ಟೆಲ್ಲಾ ಸಾಧ್ಯ ಮಾಡಿದ್ದು ನನಗೆ ದೊಡ್ಡ ಖುಷಿ’ ಎಂದರು.
ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವತ್ಥ ನಾರಾಯಣ ಅವರು ಮಾತನಾಡಿ ‘ಕರ್ನಾಟಕದ ಹೆಮ್ಮೆಯಾಗಿದ್ದ ಯಶ್ ಈಗ ದೇಶದ ಹೆಮ್ಮೆ. ಕೆಜಿಎಫ್ ಮೇಕಿಂಗ್ ಹಾಲಿವುಡ್ ಥರ ಆಗಿದೆ. ಭಾರತ ಸಿನೆಮಾ ಜಗತ್ತು, ಜಗತ್ತಿನ ಸಿನೆಮಾ ಕ್ಷೇತ್ರದಲ್ಲಿ ಈ ಸಿನೆಮಾ ದೊಡ್ಡ ಬದಲಾವಣೆ ತರಲಿದೆ ಎಂಬ ನಂಬಿಕೆ ನನಗಿದೆ’ ಎಂದರು. ಈ ಎಲ್ಲಕ್ಕೂ ಕಾರಣರಾದ ಹೊಂಬಾಳೆ ಫಿಲ್ಮಮ್ಸ್‌ನ ಸ್ಥಾಪಕ, ನಿರ್ಮಾಪಕ ವಿಜಯ್ ಕಿರಗಂದೂರ್ ಜಾಸ್ತಿ ಮಾತನಾಡಲಿಲ್ಲ. ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ನಟಿ ರಾಧಿಕಾ ಪಂಡಿತ್, ತಮಿಳುನಾಡಿನಲ್ಲಿ ವಿತರಣೆ ಮಾಡುತ್ತಿರುವ ಎಸ್ ಆರ್ ಪ್ರಭು, ಹಿಂದಿ ವಿತರಕರಾದ ರಿತೇಶ್ ಸಿದ್ವಾನಿ, ಅನಿಲ್ ತದಾನಿ, ತೆಲುಗು ವಿತರಕ ಸಾಯಿ ಕೊರಪಾಟಿ ಇದ್ದರು.
ಇದೇನು ಎಲೆಕ್ಷನ್ ಅಲ್ಲ; ವಿಜಯ್ 'ಬೀಸ್ಟ್' ಸಿನಿಮಾ ಪೈಪೋಟಿ ಬಗ್ಗೆ ಯಶ್ ಪ್ರತಿಕ್ರಿಯೆ
ಯಶ್ ಮಾತುಗಳು
- ನಾನು ಯವತ್ತೂ ಯಾವುದರ ಬಗ್ಗೆಯೂ ನರ್ವಸ್ ಆಗುವವನಲ್ಲ. ಇವತ್ತು ಒಂಥರಾ ಅನ್ನಿಸುತ್ತಿದೆ. ಈ ಕ್ಷಣ ನಾನು ಪುನೀತ್ ಸರ್‌ನ ತುಂಬಾ ಮಿಸ್ ಮಾಡಿ ಕೊಳ್ಳುತ್ತಿದ್ದೇನೆ. ಅವರು ಯಾವತ್ತೂ ನಮ್ಮ ಮಧ್ಯೆ ಇರುತ್ತಾರೆ.
- ಕನ್ನಡ ಜನತೆ, ಕನ್ನಡ ಇಂಡಸ್ಟ್ರಿ, ಕನ್ನಡ ಮಾಧ್ಯಮದಿಂದ ನಾನು ಇಲ್ಲಿ ನಿಂತಿದ್ದೇನೆ. ಈ ಪಯಣದಲ್ಲಿ ನನಗೆ ಸಿಗಬೇಕಾದ ಶ್ರೇಯ ತುಂಬಾ ಕಡಿಮೆ.
- ವಿಜಯ್ ಕಿರಗಂದೂರ್, ಹೊಂಬಾಳೆ ಈ ಹೆಸರು ನೆನಪಿಟ್ಟುಕೊಳ್ಳಿ. ಈ ಕನಸು ಹಂಚಿಕೊಂಡಾಗ ಬಹುತೇಕರು ನಮಗೆ ಹುಚ್ಚು ಅಂದಿದ್ದರು. ಆದರೆ ಈ ವ್ಯಕ್ತಿ ವಿಷನ್ ಅರ್ಥ ಮಾಡಿಕೊಂಡು ಬೆನ್ನೆಲುಬಾಗಿ ನಿಂತರು.
- ಈ ಕನಸು ನನಸಾಗಲು ದೊಡ್ಡ ಕಾರಣ ಪ್ರಶಾಂತ್ ನೀಲ್. ಅವರ ಶ್ರದ್ಧೆ ಅಪರಿಮಿತ.
- ನಮ್ಮ ತಂತ್ರಜ್ಞರು, ನಮ್ಮ ತಂಡದಂತ ತಂಡ ಬೇರೆ ಎಲ್ಲೂ ಸಿಗಲ್ಲ. ಎಲ್ಲರಿಗೂ ಧನ್ಯವಾದ.
- ನನ್ನ ಅಭಿಮಾನಿಗಳು, ನನ್ನ ಅಣ್ತಮ್ಮಂದಿರಿಗೆ ಪ್ರೀತಿ. ನೀವು ಮೆಚ್ಚುವಂತಹ ಸಿನೆಮಾ ಮಾಡಿದ್ದೇವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.