ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯನ್ನ ಅಪರಾಧಿ ಸ್ಥಾನಕ್ಕೆ ತರಲು ಹೋಗಬೇಡಿ. ಅಪರಾಧ ನಿರ್ಧಾರ ಮಾಡೋಕೆ ನ್ಯಾಯಾಲಯ ಇದೆ. ಪೊಲೀಸರು ಕೂಡ ಕೊಲೆ ಆಗಿರೋದು ಮತ್ತು ಕೊಲೆ ಮಾಡಿರುವುದನ್ನ ನೋಡಿಲ್ಲ. ಸಾಂದರ್ಭಿಕ ಸಾಕ್ಷಿಗಳನ್ನ ತೆಗೆದುಕೊಂಡು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ಆರೋಪ ಪಟ್ಟಿ ಮೇಲೆ ಸಾಕ್ಷಿ ಮೇಲೆ ನ್ಯಾಯಾಲಯ ನಿರ್ಧಾರ ಮಾಡುತ್ತೆ.
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಕೆಂಡ ಸಂಪಿಗೆ' ಧಾರಾವಾಹಿಯಲ್ಲಿ ಸದ್ಯ ನಟಿಸುತ್ತಿರುವ ನಟ ಗಣೇಶ್ ರಾವ್ (Ganesh Rao) ಅವರು ನಿನ್ನೆ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಿದ್ದಾರೆ. ಆ ವೇಳೆ ನೊಂದಿರುವ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಹಣದ ಸಹಾಯವನ್ನೂ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ನಟ ಗಣೇಶ್ ರಾವ್ ಅವರು 'ದರ್ಶನ್ (Darshan) ಅವರ ಜೊತೆ ಶಾಸ್ತ್ರೀ ಸಿನಿಮಾದಲ್ಲಿ ಮೊದಲು ನಟನೆ ಮಾಡಿದ್ದೆ. ಆದೇ ರೀತಿ 13 ಸಿನಿಮಾಗಳಲ್ಲಿ ಅವರ ಜೊತೆ ನಟನೆ ಮಾಡಿದ್ದೇನೆ.
ನೆನ್ನೆ ಕೊಲೆಯಾದ ರೇಣುಕಾಸ್ವಾಮಿ (Renukaswamy) ಮನೆಗೆ ಹೋಗಿದ್ದು ಮನವೀಯತೆ ದೃಷ್ಟಿಯಿಂದ ಅಷ್ಟೇ. ಇದ್ರಲ್ಲಿ ಸಂಧಾನ ಮಾತುಕತೆ ಆಗಲಿ, ಯಾರೋದ್ದೋ ಪರ ಅಥವಾ ವಿರುದ್ದ ಮಾತನಾಡಲು ಹೋಗಿರಲಿಲ್ಲ. ಒಬ್ಬ ಮನುಷ್ಯನಾಗಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳೊದಕ್ಕೆ, ಜೊತೆಗೆ ನನ್ನ ಕೈಲಾದ ಸಹಾಯ ಮಾಡಲು ಹೋಗಿದ್ದೆ ಅಷ್ಟೇ. ಅವರ ಮನೆ ಪರಿಸ್ಥಿತಿ ತುಂಬಾ ಹೀನಾಯ ಸ್ಥಿತಿಯಲ್ಲಿದೆ.
undefined
ಎಸ್‌ಪಿಬಿ ಧ್ವನಿಯಲ್ಲಿ 'ಈ ಭೂಮಿ ಬಣ್ಣದ ಬುಗುರಿ..' ಹಾಡು ಹುಟ್ಟಿದ್ದು ಹೀಗೆ, ಎಂತಾ ಸ್ಟೋರಿ ನೋಡಿ!
ಇಂತಹ ದುರ್ಘಟನೆ ಆಗಬಾರದಿತ್ತು, ಆಗಿ ಹೋಗಿದೆ. ಈ ವಿಚಾರವನ್ನ ಅವರ ಮನೆಯವರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಜೊತೆಗೆ ಯಾರ ಪರವಾಗಿ ಮಾತನಾಡಲು ಹೋಗಿರಲಿಲ್ಲ. ಮಾಧ್ಯಮದಲ್ಲಿ ಬರುತ್ತಿರುವ ವಿಚಾರಗಳನ್ನ ನೋಡಿದ್ರೆ ಅಲ್ಲಿ ಎಲ್ಲೂ ಡೈರೆಕ್ಟ್ ಆಗಿ ಕೊಲೆಯಲ್ಲಿ ದರ್ಶನ್ ಅವರ ನೇರ ಪಾತ್ರ ಇರೋದು ಕಾಣಿಸುತ್ತಿಲ್ಲ.
ಹಾಗಾಗಿ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯನ್ನ ಅಪರಾಧಿ ಸ್ಥಾನಕ್ಕೆ ತರಲು ಹೋಗಬೇಡಿ. ಅಪರಾಧ ನಿರ್ಧಾರ ಮಾಡೋಕೆ ನ್ಯಾಯಾಲಯ ಇದೆ. ಪೊಲೀಸರು ಕೂಡ ಕೊಲೆ ಆಗಿರೋದು ಮತ್ತು ಕೊಲೆ ಮಾಡಿರುವುದನ್ನ ನೋಡಿಲ್ಲ. ಸಾಂದರ್ಭಿಕ ಸಾಕ್ಷಿಗಳನ್ನ ತೆಗೆದುಕೊಂಡು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ಆರೋಪ ಪಟ್ಟಿ ಮೇಲೆ, ಸಾಕ್ಷಿ ಮೇಲೆ ನ್ಯಾಯಾಲಯ ನಿರ್ಧಾರ ಮಾಡುತ್ತೆ.
ನ್ಯಾಯಾಲಯ ಏನು ತೀರ್ಮಾನ ಮಾಡಿದ್ರು ನಾವು ಬದ್ದರಾಗಿರಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಕೊಲೆ ವಿಚಾರವಾಗಿ ಸುಮ್ನೆ ಅಲ್ಲಿ ಇಲ್ಲಿ ಕೂತು ಮಾತನಾಡುತ್ತೀರ, ಅವರ ಮನೆಗೆ ಹೋಗಿದ್ರಾ ಅನ್ನೋ ಪ್ರಶ್ನೆ ನನಗೆ ಬಂತು. ಹಾಗಾಗಿ ಸಿನಿಮಾ ತಂಡದ ಜೊತೆ ಹೋಗಿ ರೇಣುಕಾಸ್ವಾಮಿ ಅವರ ಕುಟುಂಬವನ್ನ ಮಾತನಾಡಿಸಿ ಸಾಂತ್ವನ ಹೇಳಿ ಬಂದಿದ್ದೇನೆ.
ಏಕಾಏಕಿ ಯಾಕಾಗಿ 'ಮದಗಜ' ಮಹೇಶ್ 'ಡಿ ಬಾಸ್' ಪರ ನಿಂತಿದಾರೆ? ಅಸಲಿ ಕಹಾನಿ ಇಲ್ಲಿದೆ ನೋಡಿ!
ನಾನು ನೋಡಿದ ಹಾಗೆ ತುಂಬಾ ಜನರಿಗೆ ದರ್ಶನ್ ಸಹಾಯ ಮಾಡಿದ್ದಾರೆ. ಆದ್ರೆ ಈ ಸನ್ನಿವೇಶದಲ್ಲಿ ಏನಾಗಿದೆ ನನಗೆ ಗೊತ್ತಿಲ್ಲ. ನಾಲ್ಕೈದು ವರ್ಷದಿಂದ ನಾನು ಅವರ ಜೊತೆ ಪಾತ್ರ ಮಾಡುತ್ತಿಲ್ಲ. ಅದಕ್ಕೆ ಹಿಂದಿನ ದರ್ಶನ್ ಹೆಚ್ಚು ಮಾತನಾಡುತ್ತಿರಲಿಲ್ಲ. ಆದ್ರೆ ಕಷ್ಟದಲ್ಲಿ ಇದ್ದವರಿಗೆ ತುಂಬಾ ಸಹಾಯ ಮಾಡುತ್ತಿದ್ರು. ಸಹವಾಸದಿಂದ ಸನ್ಯಾಸಿ ಕೆಟ್ಟ ಅಂತಾರೆ. ಅದೇ ರೀತಿ ಹೊಗಳಿ ಹೊಗಳಿ ಹೊನ್ನ ಶೂಲಕ್ಕೆರಿಸಿದರೆ ಅಂತಾರೆ ಅಲ್ವ ಆ ರೀತಿ ಆಗಿರಬಹುದು.
ಯಾರಾದ್ರೂ ಒಂದು ತಪ್ಪು ಮಾಡಿದಾಗ ನೀನು ತಪ್ಪು ಮಾಡುತ್ತಿದ್ದೀಯಾ ಅನ್ನೋ ಸ್ನೇಹಿತರು ಜೊತೆಯಲ್ಲಿ ಇದ್ದಿದ್ದರೆ ಅವರಿಗೆ ಈ ರೀತಿಯ ಪರಿಸ್ಥಿತಿ ಬರುತ್ತಿರಲಿಲ್ಲ. ರೇಣುಕಾಸ್ವಾಮಿ ಅವರ ಮನೆಯವರು ತುಂಬಾ ನೊಂದಿದ್ದಾರೆ. ಅವರ ನೋವನ್ನು ನನ್ನ ಬಳಿ ಹಂಚಿಕೊಂಡ್ರು. ಆಗ ನನ್ನ ಅಭಿಪ್ರಾಯವನ್ನು ನಾನು ಹಂಚಿಕೊಂಡೆ ಅನ್ನೋದು ಬಿಟ್ರೆ, ದರ್ಶನ್ ಮಾಡಿದ್ದು ಸರಿ ಅಂತ ಅಥವಾ ನಿಮ್ಮ ಮಗ ಮಾಡಿದ್ದು ತಪ್ಪು ಅಂತ ನಾನು ಎಲ್ಲೂ ಹೇಳಿಲ್ಲ.
ಕೊಲೆಯಾಗಿದ್ದರ ವಿಚಾರವಾಗಿ ದರ್ಶನ್ ಪರವಾಗಿ ಸಮರ್ಥಿಸಿಕೊಂಡು ನಾನು ಮಾತನಾಡಿಲ್ಲ. ಯಾರಿಗೂ ಜೀವವನ್ನು ತೆಗೆಯುವ ಹಕ್ಕು ಕೊಟ್ಟಿಲ್ಲ. ಆದ್ರೆ ಆರೋಪಿಯನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ದಿನ ಚಿತ್ರಹಿಂಸೆ ಕೊಡುವುದನ್ನು ನಿಲ್ಲಿಸಬೇಕು. ಅದು ದರ್ಶನ್ ಕುಟುಂಬ ಮತ್ತು ರೇಣುಕಾಸ್ವಾಮಿ ಕುಟುಂಬ ಇಬ್ಬರಿಗೂ ಅನ್ವಯವಾಗುತ್ತೆ. ಕೊಲೆ ಸನ್ನಿವೇಶದಲ್ಲಿ ದರ್ಶನ್ ಭಾಗಿಯಾಗಿರಬಹುದು. ಡೈರೆಕ್ಟ್ ಆಗಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಅನ್ನೋದ್ರ ಮೇಲೆ ನನಗೆ ನಂಬಿಕೆ ಇಲ್ಲ.
ನಟ ದರ್ಶನ್-ರೇಣುಕಾಸ್ವಾಮಿ ಫ್ಯಾಮಿಲಿ, ಎರಡೂ ಭೇಟಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ವಿನೋದ್ ರಾಜ್!
ನಾವು ಯಾರನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ನಾನು ನಟ ದರ್ಶನ್ ಜೊತೆಗೆ 13 ಸಿನಿಮಾಗಳನ್ನು ಮಾಡಿದ್ದೇನೆ. ನಟ ದರ್ಶನ್ ಅವರು ಅಷ್ಟು ಕ್ರೂರಿ ಅಲ್ಲ. ಅವರು ಸ್ಟಾರ್ ಸೆಲೆಬ್ರಿಟಿ ಆಗಿರೋದ್ರಿಂದ ಅವರ ಹೆಸರು ಮುಂಚೂಣಿಗೆ ಬರುತ್ತಿದೆ. ದರ್ಶನ್ ಆ ಮಟ್ಟಕ್ಕೆ ಇಳಿಯುವ ಮನುಷ್ಯ ಅಲ್ಲ ಅಂತ ನನ್ನ ಆತ್ಮಸಾಕ್ಷಿ ಹೇಳುತ್ತಿದೆ. ಸಂಗಡಿಗರು ಮಾಡಿರೋದ್ರಿಂದ ಅದರ ಅಪವಾದ ದರ್ಶನ್ ಮೇಲೆ ಬಂದಿದೆ.
ನಟ ದರ್ಶನ್ ಹೆಸರನ್ನ ಮಾತ್ರ ಎಲ್ಲರೂ ಬಿಂಬಿಸುತ್ತಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ, ನ್ಯಾಯಾಲಯ ಹೇಳೋಕೂ ಮುನ್ನವೇ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿದ್ದಾರೆ. ಅದು ತಪ್ಪು. ನ್ಯಾಯಲಯ ಏನು ಹೇಳುತ್ತೆ ಎಂಬುದನ್ನು ನೋಡೋಣ, ಅಲ್ಲಿಯವರೆಗೆ ಕಾಯೋಣ. ನಾನು ದರ್ಶನ್ ವ್ಯಕ್ತಿತ್ವದ ಬಗ್ಗೆ ಹೇಳಿದ್ದೇನೆ, ಅವರ ಈ ಕೃತ್ಯದ ಬಗ್ಗೆ ನನಗೆ ಗೊತ್ತಿಲ್ಲ, ಅದನ್ನು ನ್ಯಾಯಾಲಯ ಹೇಳೋದಕ್ಕೆ ಬಿಡಿ..' ಎಂದು ಗಣೇಶ್ ರಾವ್ ಅಭಿಪ್ರಾಯ ಪಟ್ಟರು.
ರೇಣುಕಾಸ್ವಾಮಿ ಕುಟುಂಬದ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗಣೇಶ್ ರಾವ್, 'ಈ ದುರ್ಘಟನೆ ನಡೆಯಬಾರದಿತ್ತು. ರೇಣುಕಾಸ್ವಾಮಿ ಮನೆಯವರು ನೋವು ಅನುಭವಿಸುತ್ತಿದ್ದಾರೆ. ಅವರಿಗೆ ದುಃಖ ಭರಿಸುವ ಶಕ್ತಿಯನ್ನ ದೇವರು ಕೊಡಲಿ. ಯಾರು ತಪ್ಪಿತಸ್ಥರೋ ಅವರಿಗೆ ಶಿಕ್ಷೆ ಆಗಲಿ. ಆರೋಪಿಗಳನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ತಪ್ಪು. ಅವರು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ.
ಸುದೀಪ್-ದರ್ಶನ್ ಮಧ್ಯೆ ಇಲ್ಲದ ಸಂಬಂಧ: ಅದೊಂಥರಾ ಖಾಲಿ ಪಾತ್ರೆ ಇದ್ದಂಗೆ ಅಂತಾರೆ ಆಪ್ತರು!
ಆದರೆ, ಆರೋಪ ಸಾಬೀತಾಗುವ ಮುನ್ನವೇ ಸೆಲೆಬ್ರಿಟಿ ಎಂಬ ಕಾರಣಕ್ಕೆ ಯಾರನ್ನೇ ಆದರೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ತಪ್ಪು ಎಂಬುದು ನನ್ನ ಅನಿಸಿಕೆ. ದರ್ಶನ್ ಅವರನ್ನ ಬಹಳ ಹತ್ತಿರದಿಂದ ನಾನು ನೋಡಿದ್ದೇನೆ. ಸಮಾಜಕ್ಕೆ ಒಬ್ಬರು ರೋಲ್ ಮಾಡೆಲ್ ಆಗಿರುವ ನಟ ದರ್ಶನ್ ಅವರು ಅಷ್ಟು ಕ್ರೂರ ಮಟ್ಟಕ್ಕೆ ಇಳಿಯಲ್ಲ. ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಮಾನವೀಯತೆ ದೃಷ್ಟಿಯಿಂದ ನೊಂದಿರುವ ಆ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದೆ ಅಷ್ಟೇ' ಎಂದಿದ್ದಾರೆ.