ಎಸ್‌ಪಿಬಿ ಧ್ವನಿಯಲ್ಲಿ 'ಈ ಭೂಮಿ ಬಣ್ಣದ ಬುಗುರಿ..' ಹಾಡು ಹುಟ್ಟಿದ್ದು ಹೀಗೆ, ಎಂತಾ ಸ್ಟೋರಿ ನೋಡಿ!

By Shriram Bhat  |  First Published Jul 28, 2024, 12:04 PM IST

ಲಹರಿ ಸಂಸ್ಥೆಯ ಮೊಟ್ಟಮೊದಲ ಪ್ರೊಡಕ್ಷನ್‌ ಸಿನಿಮಾ ಮಹಾ ಕ್ಷತ್ರಿಯ. ಈ ಚಿತ್ರವನ್ನು ಅದ್ದೂರಿಯಾಗಿ ಜತೆಗೆ, ಸಂಗೀತ ಮೂಲಕವೇ ಹೆಚ್ಚು ಜನರಿಗೆ ತಲುಪಿಸಬೇಕೆಂಬುದು ಲಹರಿ ವೇಲು ಅವರ ಮಹತ್ವಾಕಾಂಕ್ಷೆ ಆಗಿತ್ತಂತೆ. ಕಾರಣ, ಹೇಳಿಕೇಳಿ ಲಹರಿ ಸಂಸ್ಥೆ ಸಂಗೀತಕ್ಕೇ ತಮ್ಮನ್ನು ಅರ್ಪಿಸಿಕೊಂಡ ಕಂಪನಿ. 


ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಹಾಗೂ ಸೋನಿ ವಾಲಿಯಾ ನಟನೆಯ ಮಹಾ ಕ್ಷತ್ರಿಯ ಸಿನಿಮಾ 1994ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಅಂದು ಸ್ಟಾರ್ ನಟಿಯಾಗಿ ಉತ್ತುಂಗದಲ್ಲಿದ್ದ ಸುಧಾರಾಣಿ ಹಾಗೂ ನಟ ರಾಮ್‌ಕುಮಾರ್ ಅವರುಗಳು ಕೂಡ ಪ್ರಮುಖ ಪಾತ್ರ ಪೋಷಿಸಿದ್ದರು. ಆ ಚಿತ್ರಕ್ಕೆ ಹಂಸಲೇಖಾ ಸಂಗೀತವಿದ್ದು, 'ಈ ಭೂಮಿ ಬಣ್ಣದ ಬುಗುರಿ..' ಎಂಬ ಹಾಡು ಬಹಳಷ್ಟು ಜನಪ್ರಿಯತೆ ಪಡೆದಿತ್ತು. ಆ ಕಾಲದಲ್ಲಿ ಮಾತ್ರವಲ್ಲ, ಈಗಲೂ ಕೂಡ ಆ ಹಾಡನ್ನು ಒಮ್ಮೆ ಕೇಳಿದರೆ, ಮತ್ತೆ ಮತ್ತೆ ಗುನುಗುತ್ತಲೇ ಇರುತ್ತಾರೆ. 

ಆದರೆ ಆ ಹಾಡು ಹುಟ್ಟಿದ್ದು ಹೇಗೆ ಎಂಬುದನ್ನು ಲಹರಿ ಸಂಸ್ಥೆಯ ವೇಲು (ಲಹರಿ ವೇಲು) ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಲಹರಿ ಸಂಸ್ಥೆಯ ಮೊಟ್ಟಮೊದಲ ಪ್ರೊಡಕ್ಷನ್‌ ಸಿನಿಮಾ ಮಹಾ ಕ್ಷತ್ರಿಯ. ಈ ಚಿತ್ರವನ್ನು ಅದ್ದೂರಿಯಾಗಿ ಜತೆಗೆ, ಸಂಗೀತ ಮೂಲಕವೇ ಹೆಚ್ಚು ಜನರಿಗೆ ತಲುಪಿಸಬೇಕೆಂಬುದು ಲಹರಿ ವೇಲು ಅವರ ಮಹತ್ವಾಕಾಂಕ್ಷೆ ಆಗಿತ್ತಂತೆ. ಕಾರಣ, ಹೇಳಿಕೇಳಿ ಲಹರಿ ಸಂಸ್ಥೆ ಸಂಗೀತಕ್ಕೇ ತಮ್ಮನ್ನು ಅರ್ಪಿಸಿಕೊಂಡ ಕಂಪನಿ. 

Latest Videos

undefined

ನಟ ದರ್ಶನ್-ರೇಣುಕಾಸ್ವಾಮಿ ಫ್ಯಾಮಿಲಿ, ಎರಡೂ ಭೇಟಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ವಿನೋದ್ ರಾಜ್!

ಹೀಗಾಗಿ, ಲಹರಿ ವೇಲು ಅವರು ಮಹಾ ಕ್ಷತ್ರಿಯ ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಕೂಡ ಆ ಚಿತ್ರದಲ್ಲಿ ತುಂಬಾ ಒಳ್ಳೆಯ ಹಾಡುಗಳು ಇರಬೇಕು ಎಂದು ಹೇಳಿದ್ದರಂತೆ. ಅದರಂತೆ, ಸಂಗೀತ ನಿರ್ದೇಶಕ ಹಂಸಲೇಖಾ ಅವರ ಬಳಿ ಕೂಡ ಲಹರಿ ವೇಲು ಅವರು ಅದನ್ನೇ ಹೇಳಿದ್ದರಂತೆ. ಈ ಚಿತ್ರದ ಒಂದು ಹಾಡಾದರೂ ಕರ್ನಾಟಕದ ಮೂಲೆಮೂಲೆಯನ್ನು ತಲುಪಬೇಕು. ಜೊತೆಗೆ, ಎಲ್ಲಾ ಕಾಲಕ್ಕೂ, ಎಲ್ಲಾ ವಯೋಮಾನದವರೂ ಇಷ್ಟಪಟ್ಟು ಗುನುಗುವಂತೆ ಇರಬೇಕು ಎಂದಿದ್ದರಂತೆ. 

ಈ ಬಗ್ಗೆ ಲಹರಿ ವೇಲು ಅವರು ಹೀಗೆ ಹೇಳಿದ್ದಾರೆ. 'ಅಂದು ಸಂಗಿಥಧ ನಿರ್ದೇಶಕ ಹಂಸಲೇಖಾ ಅವರು ರೇಸ್‌ ವ್ಯೂ ಹೊಟೆಲ್‌ನಲ್ಲಿ ಇದ್ದರು. ನಾನು ಹೋಗಿ ಅವರನ್ನು ಭೇಟಿಯಾಗಿ, ನಮ್ಮ ಮೊದಲ ನಿರ್ಮಾಣದ ಮಹಾ ಕ್ಷತ್ರಿಯ ಸಿನಿಮಾಗೆ ಸಂಗೀತ ನೀಡಲು ಕೇಳಿಕೊಂಡೆ. ಜೊತೆಗೆ, 'ನಮ್ಮದು ಸಂಗೀತಕ್ಕೇ ಮೀಸಲಾಗಿರುವ ಸಂಸ್ಥೆ ಎಂಬುದು ನಿಮಗೂ ಗೊತ್ತು. ಹೀಗಾಗಿ ಈ ಚಿತ್ರದಲ್ಲಿ ಸಂಗೀತ ಹಾಗೂ ಹಾಡುಗಳು ವಿಶೇಷವಾಗಿ ಇರಬೇಕು. ಆಡುಭಾಷೆಯ ಸಾಹಿತ್ಯವೇ ಇರಲಿ.

ಸುದೀಪ್-ದರ್ಶನ್‌ ಮಧ್ಯೆ ಇಲ್ಲದ ಸಂಬಂಧ: ಅದೊಂಥರಾ ಖಾಲಿ ಪಾತ್ರೆ ಇದ್ದಂಗೆ ಅಂತಾರೆ ಆಪ್ತರು!

ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಲೇಬೇಕು. ಇಲ್ಲದಿದ್ದರೆ ಜನರ ಮುಂದೆ ತಲೆ ತಗ್ಗಿಸಬೇಕಾಗುತ್ತದೆ' ಎಂದೆ. ಅದಕ್ಕೆ ಹಂಸಲೇಖಾ ಅವರು 'ಯಾಕಿಷ್ಟು ಆತಂಕ ಗೊಂಡಿದ್ದೀರಿ? ಭಯ ಯಾಕೆ? ಒಳ್ಳೊಳ್ಳೆಯ ಹಾಡುಗಳನ್ನೇ ಕೊಡೋಣ..' ಎಂದರು. ತಕ್ಷಣವೇ ಭಯಭೀತನಾಗಿದ್ದ ನನ್ನನ್ನು ನೋಡಿ, ಅಲ್ಲೇ 'ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ' ಎಂದು ಹೇಳಿ ಅದಕ್ಕೊಂದು ಟ್ಯೂನ್ ಹಾಕಿ ಹಾಡಿಯೂ ಬಿಟ್ಟರು. ಹೀಗೆ ಹುಟ್ಟಿಕೊಂಡಿದ್ದು ಆ ಹಾಡು ' ಎಂದಿದ್ದಾರೆ ಲಹರಿ ವೇಲು. 

click me!