
ಕನ್ನಡ ಚಿತ್ರರಂಗದ ಅದ್ಭುತ ನಟಿ ಶ್ರುತಿ ಕೃಷ್ಣ ಅವರ ತಂಗಿ ಮಗಳು ಕೀರ್ತಿ ಕೃಷ್ಣ ಕೂಡ ಸಿನಿಮಾ ಜರ್ನಿ ಶುರು ಮಾಡಲು ಸಜ್ಜಾಗಿದ್ದಾರೆ. ಬಾಲ್ಯದಲ್ಲಿ ನಾಗಶಕ್ತಿ ಸಿನಿಮಾದಲ್ಲಿ ನಟಿಸಿದ್ದ ಈ ಸುಂದರಿ ವಿದ್ಯಾಭ್ಯಾಸ ಮುಗಿಸಿಕೊಂಡು ಫುಲ್ ಫ್ಲೆಡ್ಜ್ ನಟಿಯಾಗಿ ಜರ್ನಿ ಆರಂಭಿಸುತ್ತಿದ್ದಾರೆ. ನಟ ಶ್ರೇಯಸ್ ಮಂಜು ಜೊತೆ ದಿಲ್ ದಾರ್ ಸಿನಿಮಾದಲ್ಲಿ ನಟಿಸುತ್ತಿರುವ ಕೀರ್ತಿ ಆಗಲೇ ಎರಡನೇ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನ ದೇವರು ರುಜು ಮಾಡಿದನು ಸಿನಿಮಾದಲ್ಲಿ ಡೀ-ಗ್ಲಾಮ್ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
'ಪ್ರತಿಯೊಂದು ಪಾತ್ರನೂ ಅದರದ್ದೇ ಮಹತ್ವ ಹೊಂದಿದೆ. ಕಲಾವಿದರಾಗಿ ನಾನು ಪಾತ್ರವನ್ನು ಅರ್ಥ ಮಾಡಿಕೊಂಡು ಪ್ರದರ್ಶಿಸಬೇಕು. ಈ ಪಾತ್ರದ ಬಗ್ಗೆ ಬಂದರೆ ವೀಣಾಳನ್ನು ಅರ್ಥ ಮಾಡಿಕೊಂಡು ಪ್ರತಿನಿಧಿಸಿದ್ದೀನಿ. ಆಕ್ಟರ್ ಆಗಿ ನಾನು ಹೀರೋಯಿನ್ ಆಗಿರಲು ಇಷ್ಟ ಪಡುವುದಿಲ್ಲ. ನಾನು ಒಂದೊಳ್ಳೆ ಕ್ಯಾರೆಕ್ಟರ್ ಆಗಿ ಇರಲು ಇಷ್ಟ ಪಡುತ್ತೀನಿ. ಮಾಡುವ ಪ್ರತಿಯೊಂದು ಪಾತ್ರವನ್ನು ಬದುಕುತ್ತೀನಿ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಕೀರ್ತಿ ಕೃಷ್ಣ ಮಾತನಾಡಿದ್ದಾರೆ.
ತಿಂಗಳಿಗೆ 400 ರೂಪಾಯಿ ಸಂಬಳ ಪಡೆದ ಮಂಡ್ಯ ರಮೇಶ್; ಶಾಕಿಂಗ್ ಏನೆಂದರೆ 3 ವರ್ಷ ಕಳೆದ್ರೂ 800 ರೂ. ಆಗಿತ್ತಂತೆ!
'2010ರಲ್ಲಿ ನಾಗಶಕ್ತಿ ಸಿನಿಮಾ ಮಾಡುವ ಸಮಯದಲ್ಲಿ ನನ್ನ ಕೈಯಲ್ಲಿ ಹಾವನ್ನು ಧೈರ್ಯವಾಗಿ ಹಿಡಿದುಕೊಂಡು ನಿಂತಿದ್ದೆ. 10 ವರ್ಷದ ಹುಡುಗಿಯಾಗಿ ಹೆದರಿಕೊಳ್ಳದೆ ನಟಿಸಿದ್ದಕ್ಕೆ ಇಡೀ ಚಿತ್ರರಂಗ ಮತ್ತು ನನ್ನ ದೊಡ್ಡಮ್ಮ ಶ್ರುತಿ ಕೃಷ್ಣ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ನಾನು ಪ್ರಾಣಿ ಪ್ರಿಯೆ ಆಗಿರುವ ಕಾರಣ ಹೆದರಿಕೊಳ್ಳಲಿಲ್ಲ ಅಲ್ಲದೆ ನನಗೆ ಕ್ಯಾಮೆರಾ ಭಯ ಕೂಡ ಇಲ್ಲ. ಆಗ ನನ್ನ ಆಂಟಿ ಶ್ರುತಿ ಕೃಷ್ಣ ಹೇಳಿದ ಮಾತು 'ನೀನು ಆಕ್ಟರ್ ಆಗಲು ಹುಟ್ಟಿರುವೆ' ಎಂದರು. ನಿಜಕ್ಕೂ ಆ ಮಾತುಗಳು ನನಗೆ ಈಗಲೂ ಧೈರ್ಯ ಕೊಡುತ್ತದೆ' ಎಂದು ಕೀರ್ತಿ ಹೇಳಿದ್ದಾರೆ.
ಯಶಸ್ಸಿನಲ್ಲಿ ಇದ್ದಾಗ ಬಂದು ಹೋಗೋ ಫ್ರೆಂಡ್ಸ್ ನಂಗೆ ಬೇಡ, ಕಷ್ಟದಲ್ಲಿದ್ದಾಗ ನಿಂತಿದ್ದು ಇವರೇ: ಅಮೃತಾ ಅಯ್ಯಂಗಾರ್
'ದೊಡ್ಡಮ್ಮ ಶ್ರುತಿ ಕೃಷ್ಣ, ಮಾವ ಶರಣ್ ಮತ್ತು ತಾತ ಅಜ್ಜಿ ನಿಜಕ್ಕೂ ನನಗೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ನಾನು ಮಾಡುವ ಪ್ರತಿಯೊಂದು ಪಾತ್ರಕ್ಕೂ ಸಪೋರ್ಟ್ ಮಾಡುತ್ತಾರೆ. ನಮ್ಮ ಕುಟುಂಬದಿಂದ ಮೂರನೇ ಜನರೇಷನ್ ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿರುವುದು. ನನಗೆ ಹೆಚ್ಚಿಗೆ ಟೆಕ್ನಿಕಲ್ ಮಾಹಿತಿಗಳನ್ನು ಹೇಳುತ್ತಿಲ್ಲ ಏಕೆಂದರೆ ಸಮಯ ಕಳೆಯುತ್ತಿದ್ದಂತೆ ನಾನು ಕಲಿಯುತ್ತೀನಿ ಎಂದು. ನನಗೆ ಸಿನಿಮಾ ಜರ್ನಿ ಆರಂಭಿಸಲು ಒಂದೊಳ್ಳೆ ಶುರು ಸಿಕ್ಕಿದೆ. ಸಾಮಾನ್ಯವಾಗಿ ಕಲಾವಿದರು ಒಂದು ಸಿನಿಮಾ ಮುಗಿದ ಮೇಲೆ ಮತ್ತೊಂದು ಸಿನಿಮಾ ಆರಂಭಿಸುತ್ತಾರೆ. ಅಲ್ಲದೆ ನನಗೆ ಈ ಪಾತ್ರವನ್ನು ಆಯ್ಕೆ ಮಾಡದೇ ಇರಲು ಆಗಲಿಲ್ಲ. ನಾನು ಮತ್ತೊಂದು ಸಿನಿಮಾ ಸಹಿ ಮಾಡಿದ್ದೀನಿ ಅದರಲ್ಲೂ ಯಾವುದೇ ಗ್ಲಾಮರ್ ಪಾತ್ರವನ್ನು ಆಯ್ಕೆ ಮಾಡಿಲ್ಲ. ನನ್ನ ಡೆಬ್ಯೂ ಈ ಹಿಂದೆನೇ ಶುರು ಮಾಡಬೇಕಿತ್ತು ಆದರೆ ವಿದ್ಯಾಭ್ಯಾಸ ಮುಗಿಸಿ ನಟನೆಗೆ ಕಾಲಿಡಬೇಕಿತ್ತು' ಎಂದಿದ್ದಾರೆ ಕೀರ್ತಿ ಕೃಷ್ಣ.
ಮುಖಕ್ಕೆ ಬಣ್ಣ ಹಚ್ಚಿ ನಾಲಿಗೆಗೆ ಹಚ್ಕೋಬೇಡಿ; ರಚಿತಾ ರಾಮ್ ಪ್ರಮೋಷನ್‌ಗೆ ಬಂದಿಲ್ಲ ಎಂದು ಚಿತ್ರತಂಡ ಗರಂ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.