
ಬೆಂಗಳೂರು (ಮಾ.14) ಧ್ರುವ ಸರ್ಜಾ ಬಹುನಿರೀಕ್ಷಿತ ಕೆಡಿ ಸಿನಿಮಾದ ಸೆರಗಿನ ಹಾಡು ಕನ್ನಡದಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ಧೂಳೆಬ್ಬಿಸುತ್ತಿದೆ. ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇದೀಗ ಕೆಡಿ ಸಿನಿಮಾದ ಸೆರಗು ಸರಿಸೆ ಹಾಡು ಬಿಡುಗಡೆಯಾಗಿದ್ದು ಭಾರಿ ವೈರಲ್ ಆಗಿದೆ. ವಿಶೇಷ ಅಂದರೆ ಬಾಲಿವುಡ್ ಬೆಡಗಿ ನೋರಾ ಫತೇಹಿ ಹಾಗೂ ಸಂಜಯ್ ದತ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ನೋರಾ ಡ್ಯಾನ್ಸ್, ಸಂಜಯ್ ದತ್ ಲೋಕಲ್ ಈ ಹಾಡಿನಲ್ಲಿ ವಿಶೇಷವಾಗಿದೆ.
ನಿರ್ದೇಶಕ ಪ್ರೇಮ್ ಸರ್ಸೆ ಸೆರಗ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಎಂದಿನಂತೆ ಪ್ರೇಮ್ ಪರಿಕಲ್ಪನೆಯ ಐಟಂ ಸಾಂಗ್ ಹಲವು ವಿಶೇಷತೆಗಳನ್ನು ನೀಡಿದೆ. ಬಾಲಿವುಡ್ ದಿಗ್ಗಜರನ್ನೇ ಹಾಡಿನಲ್ಲಿ ಕುಣಿಸಿದ್ದಾರೆ. ಒಂದೆ ನೋರಾ ಸ್ಟೆಪ್ಸ್ ಹಾಗೂ ಅವತಾರ ಸದ್ದು ಮಾಡತ್ತಿದೆ. ಇತ್ತ ಕೆಜಿಎಫ್ ಬಳಿಕ ಸಂಜಯ್ ದತ್ತ, ಇದೀಗ ಕನ್ನಡದ ಕೆಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಈ ಹಾಡು ಅದ್ಧೂರಿಯಾಗಿ ತೆರೆ ಕಂಡಿದೆ.ಅಷ್ಟೇ ವೇಗದಲ್ಲಿ ಭಾರಿ ವೈರಲ್ ಆಗಿದೆ.
ಹಾಡಿನ ಕೆಲ ತುಣುಕುಗಳನ್ನು ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಪೋಸ್ಟ್ ಮಾಡಲಾಗಿದೆ. ಧ್ರುವ ಸರ್ಜಾ ಅಭಿಮಾನಿಗಳಿಗೆ ಡಬಲ್ ಧಮಾಕ ಎದುರಾಗಿದೆ. ಕನ್ನಡ ಸಿನಿ ಪ್ರೇಮಿಗಳು ಕೆಡಿ ಸಿನಿಮಾ ಹಾಡಿಗೆ ಉತ್ತಮ ರೆಸ್ಪಾನ್ಸ್ ನೀಡಿದ್ದಾರೆ. ಹಾಡಿನ ಮೇಕಿಂಗ್ ಹಾಗೂ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಧ್ರುವ ಸರ್ಜಾ ಹಾಗೂ ರೀಷ್ಮಾ ನಾಯಣಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೆಡಿ ಸಿನಿಮಾ ಎಪ್ರಿಲ್ 30ಕ್ಕೆ ತೆರೆ ಕಾಣುತ್ತಿದೆ. ಧ್ರುವ ಸರ್ಜಾ ಅವರಿಗೂ ಈ ಸಿನಿಮಾ ಹೊಸ ತಿರುವು ನೀಡಲಿದೆ ಎಂದೇ ಹೇಳಲಾಗುತ್ತಿದೆ. ಸಾಕಷ್ಟು ಮುತುವರ್ಜಿ ವಹಿಸಿ ಪ್ರೇಮ್ ಕೆಡಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಲವು ಹೊಸತನ ಜೊತೆಗೆ ಬಾಲಿವುಡ್ ತಾರಾಗಣವನ್ನೇ ಸ್ಯಾಂಡಲ್‌ನವುಡ್‌ನಲ್ಲಿ ಸಮಾಗಮ ಮಾಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.