'ನಾಳೆ 10 ಗಂಟೆಗೆ ಒಂದು ಪೋಸ್ಟ್‌ ಮಾಡ್ತೀನಿ, ಮರು ಕ್ಷಣವೇ ಡಿಲೀಟ್‌ ಮಾಡ್ತೀನಿ..' ಜನರ ತಲೆಗೆ ಹುಳಬಿಟ್ಟ ಬುದ್ಧಿವಂತ ಉಪೇಂದ್ರ!

Published : Mar 14, 2026, 06:38 PM IST
Upendra

ಸಾರಾಂಶ

ನಟ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ನಿಗೂಢ ವಾರ್ನಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡಿ, ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡುವುದಾಗಿ ತಿಳಿಸಿದ್ದು, ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.

ಬೆಂಗಳೂರು (ಮಾ.14): ನಟ ಉಪೇಂದ್ರ ಒಂದು ವಾರ್ನಿಂಗ್‌ ಪೋಸ್ಟ್‌ಅನ್ನು ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಅದರ ಬೆನ್ನಲ್ಲಿಯೇ ಅವರ ಅಭಿಮಾನಿಗಳಲ್ಲಿ ಕುತೂಹಲ ಆರಂಭವಾಗಿದೆ. ಅದಕ್ಕೆ ಕಾರಣ, ಪೋಸ್ಟ್‌ನಲ್ಲಿರುವ ಅಂಶ. 10 ಗಂಟೆಗೆ ನಾನು ಒಂದು ಲಿಂಕ್‌ ಪೋಸ್ಟ್‌ ಮಾಡ್ತೀನಿ, ಅದನ್ನು ಕೆಲ ಹೊತ್ತಲ್ಲೇ ಡಿಲೀಟ್‌ ಕೂಡ ಮಾಡ್ತೀನಿ. ಯಾಕೆಂದ್ರೆ ಹೀಗೆ ಮಾಡಬೇಕು ಎಂದು ನನಗೆ ತಿಳಿಸಲಾಗಿದೆ ಎಂದು ತಮ್ಮ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ಅವರು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಬಹುದಾ? ಇಲ್ಲವೇ ತಾವು ಈಗಾಗಲೇ ಮಾಡಿರುವ ಸಿನಿಮಾದ ಟೀಸರ್‌, ಫರ್ಸ್ಟ್‌ ಲುಕ್‌ ಏನಾದರೂ ರಿಲೀಸ್‌ ಮಾಡಬಹುದಾ? ಪ್ರಜಾಕೀಯದ ಬಗ್ಗೆ ಅಪ್‌ಡೇಟ್‌ ಇರಬಹುದಾ? ಇಲ್ಲವೇ ತಮ್ಮ ಹೊಸ ಸಿನಿಮಾದ ಘೋಷಣೆ ಇರಬಹುದಾ ಅನ್ನೋ ಚರ್ಚೆಗಳು ಶುರುವಾಗಿದೆ.

ಕನ್ನಡ ಚಿತ್ರರಂಗದ 'ಬುದ್ಧಿವಂತ' ಎಂದೇ ಕರೆಸಿಕೊಳ್ಳುವ ರಿಯಲ್ ಸ್ಟಾರ್ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು 'ವಾರ್ನಿಂಗ್' ಪೋಸ್ಟ್ ಈಗ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಯಾವಾಗಲೂ ವಿಭಿನ್ನವಾಗಿ ಆಲೋಚಿಸುವ ಉಪ್ಪಿ, ಈ ಬಾರಿ ತಮ್ಮ ಅಭಿಮಾನಿಗಳಿಗೆ ಒಂದು ನಿಗೂಢ ಸಂದೇಶ ರವಾನಿಸಿದ್ದಾರೆ.

ಉಪೇಂದ್ರ ಅವರು ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ ಖಾತೆಯಲ್ಲಿ, "ನಾಳೆ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ. ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು. ನೀವು ಇದನ್ನು ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್‌ ನೋಡಿ ಸುಮ್ಮನಿದ್ದುಬಿಡು" ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಬೆನ್ನಲ್ಲೇ ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿದೆ. ಇದು ಅವರ ಮುಂದಿನ ಸಿನಿಮಾದ ಟ್ರೈಲರ್ ಬಿಡುಗಡೆಯ ಬಗ್ಗೆ ಇರಬಹುದಾ? ಅಥವಾ ಅವರ ರಾಜಕೀಯ ಪಕ್ಷ 'ಪ್ರಜಾಕೀಯ'ದ ಮುಂದಿನ ನಡೆಯ ಬಗ್ಗೆ ಇರಬಹುದಾ? ಇಲ್ಲವೇ ಯಾವುದಾದರೂ ಹೊಸ ಸಿನಿಮಾದ ಘೋಷಣೆಯೇ? ಎಂಬ ಪ್ರಶ್ನೆಗಳು ಎದ್ದಿವೆ.

 

 

ನಿರ್ದೇಶನಕ್ಕೆ ಮತ್ತೆ ಬರ್ತಾರಾ ಉಪೇಂದ್ರ

ಉಪೇಂದ್ರ ಅವರು ದೀರ್ಘಕಾಲದ ನಂತರ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟು 'UI' ಸಿನಿಮಾ ಮಾಡಿದ್ದರು. ಆದರೆ, ಅದು ಜನರಿಗೆ ರುಚಿಸಲಿಲ್ಲ. 2024ರಲ್ಲಿ ಈ ಸಿನಿಮಾ ಬಂದ ಬಳಿಕ ಉಪೇಂದ್ರ ನಿರ್ದೇಶನಕ್ಕೆ ಮತ್ತೆ ಬ್ರೇಕ್‌ ನೀಡಿ, ತಮಿಳಿನಲ್ಲಿ ಕೂಲಿ, ತೆಲುಗುವಿನಲ್ಲಿ ಆಂಧ್ರ ಕಿಂಗ್‌ ತಾಲೂಕಾ ಹಾಗೂ ಕನ್ನಡದಲ್ಲಿ 45 ಸಿನಿಮಾದಲ್ಲಿ ನಟಿಸಿದ್ದರು. ಬಹಳ ವರ್ಷಗಳ ಹಿಂದೆ ಅವರು ನಟಿಸಿದ್ದ ರಕ್ತಕಾಶ್ಮೀರ ಸಿನಿಮಾ ಕೂಡ ಈ ನಡುವೆ ಬಂದು ಹೋಗಿತ್ತು.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಉಪ್ಪಿ ಸೃಷ್ಟಿಸಿರುವ ಈ 'ಲಿಂಕ್' ಹವಾ ನಾಳೆ ಬೆಳಗ್ಗೆ 10 ಗಂಟೆಗೆ ಯಾವ ಸ್ಫೋಟ ಮಾಡಲಿದೆ ಎಂದು ಕಾದು ನೋಡಬೇಕಿದೆ. ರಿಯಲ್ ಸ್ಟಾರ್ ಅಂದ ಮೇಲೆ ಅಲ್ಲಿ ಏನೋ ಒಂದು ವಿಶೇಷ ಇದ್ದೇ ಇರುತ್ತದೆ ಎಂಬುದು ಅಭಿಮಾನಿಗಳ ಅಚಲ ನಂಬಿಕೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತೆರೆಗೆ ಬರಲು ರೆಡಿಯಾದ ರೇಣುಕಾಸ್ವಾಮಿ ಕೊಲೆ ಕೇಸ್‌ ಆಧಾರಿತ ಸಿನಿಮಾ, 'ಬಾಸ್‌' ಸಿನಿಮಾದ ಅಸಲಿ ಬಾಸ್‌ ದರ್ಶನ್ ಅವರಾ?
ಕುಂದಾಪುರದಲ್ಲಿ ರಿಷಬ್ ಶೆಟ್ಟಿ ಅವರ ₹12 ಕೋಟಿಯ ಅರಮನೆ: ಮನೆಯೊಳಗಿದೆ 300 ಕೆಜಿಯ ತುಳಸಿ ಕಟ್ಟೆ!