ಧ್ರುವ ಸರ್ಜಾಗೆ ಮುತ್ತು ಕೊಟ್ಟ ಸ್ಪೆಷಲ್ ಅಭಿಮಾನಿ; ಆಕ್ಷನ್ ಪ್ರಿನ್ಸ್‌ ಗುಣ ಮಗುವಿನಂತೆ ಎಂದ ನೆಟ್ಟಿಗರು!

Published : Jul 05, 2023, 01:14 PM IST
ಧ್ರುವ ಸರ್ಜಾಗೆ ಮುತ್ತು ಕೊಟ್ಟ ಸ್ಪೆಷಲ್ ಅಭಿಮಾನಿ; ಆಕ್ಷನ್ ಪ್ರಿನ್ಸ್‌ ಗುಣ ಮಗುವಿನಂತೆ ಎಂದ ನೆಟ್ಟಿಗರು!

ಸಾರಾಂಶ

ವೈರಲ್ ಆಯ್ತು ಧ್ರುವ ಸರ್ಜಾ ವಿತ್ ಸ್ಪೆಷಲ್ ಅಭಿಮಾನಿ ಫೋಟೋ. ನೆಟ್ಟಿಗರಿಂದ ಹರಿದು ಬಂತು ಮೆಚ್ಚುಗೆ...

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್, ಅಭಿಮಾನಿಗಳನ್ನು ಅದ್ಧೂರಿಯಾಗಿ ಪ್ರೀತಿಸುವ ಧ್ರುವ ಸರ್ಜಾ ಒಂದು ಸ್ಪೆಷಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಯಿಂದ ಮುತ್ತು ಪಡೆದಿರುವ ಧ್ರುವ ನಿಜಕ್ಕೂ ಮಗು ಮನಸ್ಸಿನ ಹುಡುಗ ಎಂದು ಕಾಮೆಂಟ್ ಬಂದಿದೆ. 

ಹೌದು! ಧ್ರುವ ಸರ್ಜಾ ಪ್ರತಿ ವೀಕೆಂಡ್ ತಪ್ಪದೆ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಅವರೊಟ್ಟಿಗೆ ಫೋಟೋಗೆ ಪೋಸ್‌ ಕೊಡುವುದಲ್ಲದೆ ಅವರ ಡೈಲಾಗ್, ಹಾಡು ಮತ್ತು ಕಷ್ಟ ಸುಖಗಳನ್ನು ಕೇಳುತ್ತಾರೆ. ಪ್ರೀತಿಯಿಂದ ಅಭಿಮಾನಿಗಳು ಏನೇ ಮಾಡಿದರೂ ಮಾಡಿಸಿಕೊಳ್ಳುತ್ತಾರೆ. ಹೀಗಿರುವಾಗ ಧ್ರುವ ಸರ್ಜಾ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವ ವೇಳೆ ಅಭಿಮಾನಿ ಮುತ್ತು ಕೊಟ್ಟಿದ್ದಾರೆ. ಸ್ಪೆಷಲ್ ಅಭಿಮಾನಿ ಮುತ್ತು ಕೊಡುತ್ತಿದ್ದರು ಧ್ರುವ ತಲೆ ಕೆಡಿಸಿಕೊಳ್ಳದೆ ಸಿಟ್ಟು ಮಾಡಿಕೊಳ್ಳದೆ ಕ್ಯಾಮೆರಾಗೆ ಸ್ಮೈಲ್ ಮಾಡಿದ್ದಾರೆ. 

ಧ್ರುವ ಸರ್ಜಾ ಮಗಳ ಫೋಟೋ ರಿವೀಲ್; ನಾವೇ ಹೆಸರಿಡುತ್ತೀವಿ ಎಂದ ಅಭಿಮಾನಿಗಳು

'ಇವರು ಹೆಸರಿಗಷ್ಟೇ ಆಕ್ಷನ್ ಪ್ರಿನ್ಸ್‌ ಗುಣವೆಲ್ಲ ಮಗುವಿನಂತೆ, ಮಾಡಿರೋ 5 ಸಿನಿಮಾಗೆ ಎಷ್ಟು ನಮ್ಮ ಹೃದಯ ಕದ್ದಿರುವೆ ಬಾಸ್, ಹತ್ತಿರ ಬಂದ್ರೆನೇ ದೂರ ತಳ್ಳುವ ಜನರಿರುವ ಈ ಪ್ರಪಂಚದಲ್ಲಿ ತಬ್ಬಿಕೊಂಡು ಮುತ್ತು ಕೊಡುವ ರಾಜ ಧ್ರುವ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ಕೆಲವು ದಿನಗಳ ಹಿಂದೆ ಧ್ರುವ ಸರ್ಜಾ ತಮ್ಮ ನೆಚ್ಚಿನ ಅಭಿಮಾನಿಗೆ ದುಬಾರಿ ಕಾರ ಗಿಫ್ಟ್ ಕೊಟ್ಟಿದ್ದಾರೆ. ಅಭಿಮಾನಿಯನ್ನು ಆಪ್ತ ಸ್ನೇಹಿತನ ರೀತಿ ನೋಡಿಕೊಂಡು ಆತನನ್ನು ಕಾರು ಶೋ ರೂಮ್‌ಗೆ ಕರೆದುಕೊಂಡು ಹೋಗಿ ಕಪ್ಪು ಬಣ್ಣದ ಕಾರ ಕವರ್ ಓಪನ್ ಮಾಡಿ ಗಿಫ್ಟ್‌ ಮಾಡಿದ್ದಾರೆ. ಅಭಿಮಾನಿ ಕೈ ಹಿಡಿದುಕೊಂಡು ಕೇಕ್ ಕೂಡ ಕಟ್ ಮಾಡಿದ್ದಾರೆ. ಇದಾದ ಮೇಲೆ ಮತ್ತೊಬ್ಬ ಅಭಿಮಾನಿ ನಿವಾಸಕ್ಕೆ ಭೇಟಿ ನೀಡಿದ್ದಾರೆ ಆಗ ಅಲ್ಲಿದ್ದ ಹಿರಿಯರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ ಧ್ರುವ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಧ್ರುವ ನಿಜಕ್ಕೂ ರೋಲ್ ಮಾಡಲ್ ಎನ್ನಬಹುದು. 

ಪೊಗರು ಸಿನಿಮಾ ನಂತರ ಧ್ರುವ ಸರ್ಜಾ ಮಾರ್ಟಿನ್ ಮತ್ತು ಕೆಡಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಟಿನ್‌ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಡಿಫರೆಂಟ್ ಡೈರೆಕ್ಟರ್ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಕೆಡಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. 

ಧ್ರುವ ಸಿನಿಮಾಗಳು:

2012ರಲ್ಲಿ ಎಪಿ ಅರ್ಜುನ್ ನಿರ್ದೇಶನದ ರಿಲೀಸ್ ಆಗ ಅದ್ಧೂರಿ ಸಿನಿಮಾ ಮೂಲಕ ಇಂಡಸ್ಟ್ರಿಗೆ ಧ್ರುವ ಸರ್ಜಾ ಕಾಲಿಟ್ಟರು. ಇದಾದ ಮೇಲೆ ಅಶೋಕ ರಾಜ ಬಹದ್ದೂರ್ ಆಗಿ ಬಹದ್ದೂರ್ ಸಿನಿಮಾ, ಸೂರ್ಯ ರುದ್ರಪ್ರತಾಪ್ ಆಗಿ ಭರ್ಜರಿ, ಪ್ರೇಮಾಬರಹದಲ್ಲಿ ಸಣ್ಣ ಪಾತ್ರ, ಪಿ ರಾಮಕೃಷ್ಣ ಉರ್ಫಿ ಶಿವ ಆಗಿ ಪೊಗರು ಸಿನಿಮಾದಲ್ಲಿ ನಟಿಸಿದ್ದಾರೆ.

ಚಿರು ಮೀರಿಸುತ್ತಾನೆ ರಾಯನ್ ರಾಜ್ ಸರ್ಜಾ; ಮೇಘನಾ ಪುತ್ರನ ಲೇಟೆಸ್ಟ್‌ ಫೋಟೋಗಳು

ಧ್ರುವ ಪರ್ಸನಲ್ ಲೈಫ್: 

ಧ್ರುವ ಸರ್ಜಾ ಸಹೋದರ ಚಿರಂಜೀವಿ ಸರ್ಜಾ ಜೂನ್ 7, 2020ರಲ್ಲಿ ಅಗಲಿದರು. ಧ್ರುವ ಸರ್ಜಾ ಅಂಕಲ್‌ ಅರ್ಜುನ್ ಸರ್ಜಾ, ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದಾರೆ. 80-90ರ ದಶಕದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಧ್ರುವ ತಾತ ಶಕ್ತಿ ಪ್ರಸಾದ್ ನಟಿಸಿದ್ದರು.  
ಬಾಲ್ಯ ಗೆಳತಿ ಪ್ರೇರಣಾ ಜೊತೆ 2018 ಡಿಸೆಂಬರ್ 9ರಂದು ಧ್ರುವ ನಿಶ್ಚಿತಾರ್ಥ ಮಾಡಿಕೊಂಡು 2019 ನವೆಂಬರ್‌ 25ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಕ್ಟೋಬರ್ 2, 2022 ಹೆಣ್ಣು ಮಗುವಿಗೆ ತಂದೆಯಾದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sapthami Gowda: ‘ಯಾಕೋ ಯಾಕೋ’ ಸೀರೆಯಲ್ಲಿ ಸಿಕ್ಕಾಪಟ್ಟೆ ಮಿಂಚ್ತಿದ್ದಾರೆ ಸಪ್ತಮಿ ಗೌಡ
ಕನ್ನಡ ನಟರು ಬೇರೆ ಭಾಷೆಗಳಲ್ಲಿ ಅತಿಥಿ ಪಾತ್ರ ಮಾಡುತ್ತಾರೆ, ಆದ್ರೆ, ಪರಭಾಷೆಯವರು ಇಲ್ಲಿಗೆ ಬರುವುದಿಲ್ಲ: ಕಿಚ್ಚ ಸುದೀಪ್