Puneeth Rajkumar;  ಪುನೀತ್ ರಾಜ್‌ಕುಮಾರ್ 'ಕರ್ನಾಟಕ ರತ್ನ', ಅತ್ಯುನ್ನತ ಗೌರವ

Published : Nov 16, 2021, 06:08 PM ISTUpdated : Nov 16, 2021, 10:11 PM IST
Puneeth Rajkumar;  ಪುನೀತ್ ರಾಜ್‌ಕುಮಾರ್  'ಕರ್ನಾಟಕ ರತ್ನ', ಅತ್ಯುನ್ನತ ಗೌರವ

ಸಾರಾಂಶ

* ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಗೌರವ * ಮರಣೋತ್ತರ ಕರ್ನಾಟಕ ರತ್ನ ಅಪ್ಪು * ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಣೆ * ಹೃದಯಾಘಾತದಿಂದ ಅಗಲಿದ್ದ ಕಲಾವಿದ

ಬೆಂಗಳೂರು (ನ. 16) ಅಗಲಿದ ಪುನೀತ್ ರಾಜ್ ಕುಮಾರ್  (Puneeth Rajkumar) ಅವರಿಗೆ ನಮನ ಸಲ್ಲಿಸಲಾಗುತ್ತಲೇ ಇದೆ.  ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪುರಸ್ಕಾರವನ್ನು ಕರ್ನಾಟಕ ರಾಜ್ಯ (Karnataka Govt) ಸರ್ಕಾರ ಘೋಷಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ಟ್ಟೀಟ್‌ ಮಾಡಿ ಘೋಷಣೆ ಅಧಿಕೃತ ಮಾಹಿತಿ ತಿಳಿಸಿದ್ದಾರೆ. ಎಲ್ಲ ನಾಯಕರು ಪುನೀತ್ ಅವರಿಗೆ ಕರ್ನಾಟಕ ರತ್ನ ಸ್ವಾಗತ ಮಾಡಿದ್ದಾರೆ. 'ಕನ್ನಡನಾಡಿನ ಜನಪ್ರಿಯ ಕಲಾವಿದ ದಿವಂಗತ ಶ್ರೀ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ' ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ನಟ ಪುನೀತ್‌ ರಾಜ್‌ಕುಮಾರ್‌ ನಿಧನದ ಬಳಿಕ ಅವರ ಸಾಕಷ್ಟು ಸಮಾಜ ಸೇವೆಗಳು ಬೆಳಕಿಗೆ ಬಂದಿದ್ದವು. ಪುನೀತ್‌ ಅವರಿಗೆ ಪದ್ಮ ಪ್ರಶಸ್ತಿ  ಗೌರವ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಪ್ರಮುಖವಾಗಿ ಒತ್ತಾಯಿಸಿದ್ದರು.

ಯಾವತ್ತೂ ಪುನೀತ್ ಕೆಲಸಗಳು ಚಿರಸ್ಥಾಯಿ

ಪುನೀತ್‌ ರಾಜ್‌ಕುಮಾರ್‌ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬ ಬೇಡಿಕೆಯೂ ಸೃಷ್ಟಿಯಾಗಿತ್ತು. ಆದರೆ ಇದಕ್ಕೆ ತಾಂತ್ರಿಕ ಸಮಸ್ಯೆಗಳು ಅಡ್ಡಿಯಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಹಿತಿ ನೀಡಿತ್ತು. ಸಚಿವ ಸುನೀಲ್ ಕುಮಾರ್ ಕಾನೂನು ತೊಡಕುಗಳನ್ನು ತಿಳಿಸಿದ್ದರು.

ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಕರ್ನಾಟಕ ರತ್ನ'ವನ್ನು ಪುನೀತ್‌ ರಾಜ್‌ಕುಮಾರ್‌ ಅವರಿಗೆ ನೀಡಲು ನಿರ್ಧರಿಸಿದೆ. ಕರ್ನಾಟಕ ರತ್ನ ಪ್ರಶಸ್ತಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.  ಇಲ್ಲಿಯವರೆಗೆ 9 ಜನ ಗಣ್ಯರಿಗೆ ಈ ಪ್ರಶಸ್ತಿ ಸಂದಿದೆ. ಪುನೀತ್‌ ರಾಜ್‌ಕುಮಾರ್‌ ಈ ಪ್ರಶಸ್ತಿ ಪಡೆಯುತ್ತಿರುವ 10ನೇ ಸಾಧಕರಾಗಿದ್ದಾರೆ.

1992ರಲ್ಲಿ ಜ್ಞಾನಪೀಠ ಕವಿ ಕುವೆಂಪು ಹಾಗೂ ಡಾ. ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಂತರದ ದಿನಗಳಲ್ಲಿ ಎಸ್‌. ನಿಜಲಿಂಗಪ್ಪ, ಸಿಎನ್‌ಆರ್‌ ರಾವ್‌, ಡಾ. ದೇವಿಶೆಟ್ಟಿ, ಭೀಮಸೇನ್‌ ಜೋಶಿ, ಡಾ. ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡ, ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಈ ಗೌರವ ನೀಡಲಾಗಿತ್ತು. 

ಪುನೀತ್ ಗೆ ನಮನ; ಪುನೀತ್ ರಾಜ್ ಕುಮಾರ್ ಅವರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ  ನಮನ ಸಲ್ಲಿಸಲಾಗುತ್ತಿದೆ.  ಸಿಎಂ ಬಸವರಾಜ ಬೊಮ್ಮಾಯಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು, ಪ್ರಕಾಶ್ ರಾಜ್, ವಿಶಾಲ್ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದ ಗಣ್ಯರು.. ಸ್ಯಾಂಡಲ್ ವುಡ್ ನ  ತಾರೆಗಳು ಭಾಗವಹಿಸಿ ಮತ್ತೊಮ್ಮೆ ನಮನ ಸಲ್ಲಿಸಿದರು.

ಹೃದಯಾಘಾತದಿಂದ ಯುವರತ್ನ ಅಭಿಮಾನಿಗಳನ್ನು ಅಗಲಿದ್ದರು. ಪುನೀತ್ ನಿಧನದ ನಂತರ ಅವರ ಎಲ್ಲ ಸಾಮಾಜಿಕ ಕೆಲಸಗಳು ಅನಾವರಣವಾಗಿದ್ದು ಪ್ರತಿ ದಿನ ಅವರ ಸಮಾಧಿಗೆ ಸಾವಿರಾರು ಅಭಿಮಾನಿಗಳು ನಮನ ಸಲ್ಲಿಸುತ್ತಲೇ ಇದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!