ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ಬ್ಲಾಕ್‌ಬಸ್ಟರ್ ಹಿಟ್ 'ಕಾಂತಾರ' ನಟ; ಯಾರು?

By Shruthi Krishna  |  First Published Nov 22, 2022, 3:26 PM IST

ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ನಟರೊಬ್ಬರು ಪ್ರಭಾಸ್ ಅಭಿನಯದ ಸಲಾರ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 


ಕಾಂತಾರ ಸಿನಿಮಾದ ಹವಾ ಇನ್ನೂ ಕಡಿಮೆಯಾಗಿಲ್ಲ. ಅನೇಕ ಕಡೆ ಇನ್ನೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ವರ್ಷದ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದು. ಅತೀ ಹೆಚ್ಚು ಚರ್ಚಿತ ಸಿನಿಮಾ ಕಾಂತಾರ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಭಾಷೆಯ ಪ್ರೇಕ್ಷಕರು ಸಿನಮಾ ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾ ಗಣ್ಯರು ಸಹ ಚಿತ್ರಕ್ಕೆ ಫಿದಾ ಆಗಿದ್ದರು. ಈ ಸಿನಿಮಾದಲ್ಲಿ ನಟಿಸಿದ್ದ ಪ್ರತಿಯೊಬ್ಬರ ಪಾತ್ರವೂ ಪ್ರೇಕ್ಷಕರ ಹೃದಯ ಗೆದ್ದಿತ್ತು. ಈ ಸಿನಿಮಾದಲ್ಲಿ ನಟಿಸಿದ್ದ ನಟರೊಬ್ಬರಿಗೆ ಬಂಪರ್ ಆಫರ್ ಸಿಕ್ಕಿದೆ. ಹೌದು ಕಾಂತಾರ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ನವೀನ್ ಬೊಂಡೇಲ್ ಅವರು ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 

ಕಾಂತಾರ ಸಿನಿಮಾದಲ್ಲಿ ನವೀನ್ ಬೊಂಡೇಲ್ ದೈವನರ್ತಕರ ಪಾತ್ರದಲ್ಲಿ ಟಿಸಿದ್ದರು. ಪುಟ್ಟ ಪಾತ್ರವಾಗಿದ್ದರೂ ಎಲ್ಲರ ಗಮನ ಸೆಳೆಯುವ ಪಾತ್ರ ಅದಾಗಿತ್ತು. ಈ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ನವೀವ್ ಅವರಿಗೆ ಅವಕಾಶಗಳು ಹುಡುಕಿ ಬರುತ್ತಿವೆ. ಸದ್ಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲೇ ಬರ್ತಿರುವ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಲಾರ್ ಪ್ರಶಾಂತ್ ಸಾರಥ್ಯದಲ್ಲಿ ಬರ್ತಿರುವ ಸಿನಿಮಾ. ಈಗಾಗಲೇ 50ರಷ್ಟು ಚಿತ್ರೀಕರಣ ಮುಗಿಸಿರುವ ಸಲಾರ್ ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದಲ್ಲಿ ನಟಿಸುವ ಆವಕಾಶ ಗಿಟ್ಟಿಸಿಕೊಳ್ಳುವ ಮೂಲಕ ನವೀನ್ ಮತ್ತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ.

Tap to resize

Latest Videos

 

kantara ನೋಡಿ ಕಣ್ಣೀರು ಬಂತು; ರಿಷಬ್ ಶೆಟ್ಟಿ ನಟನೆಗೆ ಸುನಿಲ್ ಶೆಟ್ಟಿ ಫಿದಾ

ದೊಡ್ಡದಾದ ಆಕರ್ಷಕ ಕಣ್ಣುಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ನವೀನ್ ಅವರು ನಟನೆಗೂ ಮೊದಲು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ಜೊತೆಗೆ ರಂಗಭೂಮಿ ಕಲಾವಿದರು ಕೂಡ ಹೌದು. ಕಾಂತಾರ ಸಿನಿಮಾದ ಸಕ್ಸಸ್‌ನಿಂದ ಅವಕಾಶಗಳು ಜಾಸ್ತಿ ಆಗಿದ್ದು ಸಲಾರ್ ಜೊತೆಗೆ ನವೀನ್ ಮತ್ತೊಂದು ನಿರೀಕ್ಷೆಯ ಸಿನಿಮಾಗೂ ಆಯ್ಕೆಯಾಗಿದ್ದಾರೆ. ಶ್ರೀಮುರಳಿ ನಟನೆಯ ಬಘೀರಾ ಚಿತ್ರದಲ್ಲೂ ನಟಿಸುತ್ತಿದ್ದಾರೆ.  ಕಾಂತಾರ ಸಿನಿಮಾದ ಬಳಿಕ ಹೊಂಬಾಳೆ ಬ್ಯಾನರ್‌ನ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. 

Kantara OTT ರಿಲೀಸ್ ಮುಂದಕ್ಕೆ ಹೋಗಿದ್ದೇಕೆ? ಯಾವಾಗ ಸ್ಟ್ರೀಮಿಂಗ್ ಆಗುತ್ತೆ ರಿಷಬ್ ಶೆಟ್ಟಿ ಸಿನಿಮಾ?

ಕಾಂತಾರ ರಿಲೀಸ್ ಆದ ಬಳಿಕ ಮೊದಲು ಬಘೀರ ಸಿನಿಮಾಗೆ ಸಹಿ ಮಾಡಿದ್ದು ಈಗಾಗಲೇ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಆದರೆ ಪಾತ್ರದ ಬಗ್ಗೆ ಏನು ರಿವೀಲ್ ಆಗಿಲ್ಲ. ಈ ಸಿನಿಮಾದ ಶೂಟಿಂಗ್ ಮುಗಿಸುತ್ತಿದ್ದಂತೆ ಸಲಾರ್ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಸಲಾರ್ ಚಿತ್ರದಲ್ಲಿ ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ರಿವೀಲ್ ಆಗಿಲ್ಲ. ಇತ್ತೀಚಿಗಷ್ಟೆ ಸಲಾರ್ ಸಿನಿಮಾಗೆ ಕನ್ನಡ ನಟ ಪ್ರಮೋದ್ ಎಂಟ್ರಿಯಾಗಿದ್ದರು. ಇದೀಗ ಮತ್ತೋರ್ವ ಕನ್ನಡದ ನಟ ಸಲಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. 

  
 

click me!