ರಿಲೀಸ್‌ಗೂ ಮೊದಲೇ ಸ್ಯಾಂಡಲ್‌ವುಡ್‌ನಲ್ಲಿ ಇಶಾನ್ ಕಮಾಲ್, ಸ್ಟಾರ್ ನಿರ್ದೇಶಕರಿಂದ ಭರ್ಜರಿ ಆಫರ್

By Suvarna News  |  First Published Nov 21, 2022, 6:11 PM IST

'ರೆಮೋ' ಸಿನಿಮಾ ಸೌಂಡ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಜೋರಾಗಿದೆ. ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಆದ್ರೆ ಸಿನಿಮಾ ಬಿಡುಗಡೆಗೂ ಮುನ್ನವೇ ನಾಯಕ ನಟ ಇಶಾನ್ ಗೆ ಸ್ಟಾರ್ ನಿರ್ದೇಶಕರಿಂದ ಆಫರ್ ಮೇಲೆ ಆಫರ್ ಬರ್ತಿದೆ.


ಬೆಂಗಳೂರು (ನ.21): ಪವನ್ ಒಡೆಯರ್ ಮತ್ತು ಇಶಾನ್ ಕಾಂಬಿನೇಶನ್ ನಲ್ಲಿ ಬರ್ತಿರುವ 'ರೆಮೋ' ಸಿನಿಮಾ ಸೌಂಡ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಜೋರಾಗಿದೆ. ಸೆಟ್ಟೇರಿದ ದಿನದಿಂದ ಸಖತ್ ಸುದ್ದಿಯಲ್ಲಿರುವ ಈ ಅದ್ದೂರಿ ಚಿತ್ರ ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಆದ್ರೆ ಸಿನಿಮಾ ಬಿಡುಗಡೆಗೂ ಮುನ್ನವೇ ನಾಯಕ ನಟ ಇಶಾನ್ ಗೆ ಸ್ಟಾರ್ ನಿರ್ದೇಶಕರಿಂದ ಆಫರ್ ಮೇಲೆ ಆಫರ್ ಬರ್ತಿದ್ದು, 'ರೆಮೋ' ನಂತರ ಇಂಡಸ್ಟ್ರಿಯಲ್ಲಿ ಫುಲ್ ಬ್ಯುಸಿಯಾಗಲಿದ್ದಾರೆ ಹ್ಯಾಂಡ್ಸಮ್ ಹಂಕ್. 'ರೆಮೋ' ಹಾಡು, ಟೀಸರ್, ಟ್ರೇಲರ್ ಎಲ್ಲವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದ್ರೆ ಅದಕ್ಕೂ ಮಿಗಿಲಾಗಿ ನಾಯಕ ನಟ ಇಶಾನ್ ನಟನೆ, ಲುಕ್, ಪರ್ಸನಾಲಿಟಿ, ಸ್ಕ್ರೀನ್ ಅಪಿಯರೆನ್ಸ್ ಎಲ್ಲವೂ ಪ್ರೇಕ್ಷಕರ ಜೊತೆಗೆ ಚಂದನವನದ ಸ್ಟಾರ್ ನಿರ್ದೇಶಕರನ್ನೂ ಇಂಪ್ರೆಸ್ ಮಾಡಿದೆ. ಇದ್ರಿಂದಾಗಿ ಇಶಾನ್ ಜೊತೆ ಸಿನಿಮಾ ಮಾಡಲು ಚಂದನವನದ ಖ್ಯಾತ ನಿರ್ದೇಶಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಇಶಾನ್ ಜೊತೆ ಈಗಾಗಲೇ ಹೊಸ ಸಿನಿಮಾ ಘೋಷಿಸಿದ್ದಾರೆ. ಲೇಟೆಸ್ಟ್ ಸಮಾಚಾರ ಅಂದ್ರೆ ಭಜರಂಗಿ ಖ್ಯಾತಿಯ ಎ ಹರ್ಷ, ರ್ಯಾಂಬೋ ಖ್ಯಾತಿಯ ಅನಿಲ್ ಹಾಗೂ ಯುವ ರಾಜ್ ಕುಮಾರ್ ಮೊದಲ‌ ಸಿನಿಮಾ ಘೋಷಿಸಿದ್ದ ಪುನೀತ್ ರುದ್ರನಾಗ್ ಇಶಾನ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈ ಬಗ್ಗೆ ನಾಯಕ ಇಶಾನ್ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದು, ಇಶಾನ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ರೆಮೋ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಇಶಾನ್ ಸಿನಿಮಾ ಬಿಡುಗಡೆಯ ನಂತರ ಹೊಸ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಲಿದ್ದಾರೆ. 

Tap to resize

Latest Videos

ರೆಮೋ ಸಿನಿಮಾ ಟ್ರೈಲರ್ ರಿಲೀಸ್: ಮ್ಯೂಸಿಕಲ್ ಲವ್ ಸ್ಟೋರಿಗೆ ಶಿವಣ್ಣ ಫಿದಾ

ರೆಮೋ ಬಿಡುಗಡೆಯ ಮುನ್ನವೇ ಇಷ್ಟೊಂದು ನಿರ್ದೇಶಕರನ್ನು ಇಂಪ್ರೆಸ್ ಮಾಡಿದ್ದಾರೆ ಅಂದ್ರೆ ಭವಿಷ್ಯದಲ್ಲಿ ಸ್ಯಾಂಡಲ್ ವುಡ್ ಅಂಗಳಕ್ಕೆ ಇಶಾನ್ ಒಬ್ಬ ಭರವಸೆಯ ನಾಯಕ ನಟನಾಗಿ ನಿಲ್ಲೋದ್ರಲ್ಲಿ ಡೌಟೇ ಇಲ್ಲ. 

ಎಣ್ಣೆ ಏಟಿನಲ್ಲಿ ಚುಟು-ಚುಟು ಹುಡುಗಿ ರಂಪಾಟ: 'ರೆಮೋ'ಗಾಗಿ ಟೈಟ್ ಆದ ಆಶಿಕಾ

ಪವನ್‌ ಒಡೆಯರ್‌ ನಿರ್ದೇಶನ ಆಶಿಕಾ ರಂಗನಾಥ್‌, ಇಶಾನ್‌ ನಟನೆಯ ‘ರೆಮೋ’ ಚಿತ್ರ ನವೆಂಬರ್‌ 25ಕ್ಕೆ ತೆರೆಗೆ ಬರಲಿದೆ. ಸಿ ಆರ್‌ ಮನೋಹರ್‌ ನಿರ್ಮಾಣದ ಈ ಚಿತ್ರದಲ್ಲಿ ಬಹುಭಾಷಾ ನಟ ಶರತ್‌ಕುಮಾರ್‌, ರಾಜೇಶ್‌ ನಟರಂಗ, ಮಧು ಶಾ ನಟಿಸಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತ, ವೈದ್ಯ ಛಾಯಾಗ್ರಹಣ, ಕೆಎಂ ಪ್ರಕಾಶ್‌ ಸಂಕಲನವಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಚಿತ್ರದ ಹಾಡೊಂದು ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ.

click me!