
ಸಿನಿ ಪ್ರಿಯರ ಬಹು ನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1 (Kantara Chapter 1) ಇಂದು ತೆರೆಗಪ್ಪಳಿಸಿದೆ. ಎಲ್ಲ ಚಿತ್ರಮಂದಿರಗಳಲ್ಲಿ ಕಾಂತಾರ ಚಾಪ್ಟರ್ 1 ಅಬ್ಬರ ಶುರುವಾಗಿದೆ. ಮೊದಲ ದಿನವೇ ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ, ಬಿರುಗಾಳಿಯಂತೆ ಮುನ್ನುಗ್ಗುತ್ತಿರುವ ಕಾಂತಾರ ಚಾಪ್ಟರ್ 1 ನೋಡಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಕಾಂತಾರಾ ಚಾಪ್ಟರ್ 1 ಬೆಂಗಳೂರಿನಲ್ಲಿ ಒಂದೇ ದಿನ 1,000ಕ್ಕೂ ಹೆಚ್ಚು ಪ್ರದರ್ಶನಗಳೊಂದಿಗೆ ಬಿಡುಗಡೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸಾಧನೆ ಮಾಡಿದ 2ನೇ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ. ಈಗಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದ್ದು, 11.46 ಕೋಟಿಗೂ ಹೆಚ್ಚು ಆದಾಯ ಗಳಿಸಿದೆ. ನಿನ್ನೆ ಪ್ರೀಮಿಯರ್ ಶೋ ನಡೆದಿದ್ದು, ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಪ್ರೀಮಿಯರ್ ಶೋ ನೋಡಿದ ಚಿತ್ರ ಪ್ರೇಮಿಗಳು ಕಾಂತಾರ ಚಾಪ್ಟರ್ 1 ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಥಿಯೇಟರ್ ನಲ್ಲಿ ಧೂಳೆಬ್ಬಿಸುತ್ತಿರುವ ಕಾಂತಾರ ಚಾಪ್ಟರ್ 1 ನ ಒಟಿಟಿ ಡೀಲ್ ಕೂಡ ಪೂರ್ಣಗೊಂಡಿದೆ. ಸಿನಿಮಾ ಯಾವ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ತೆರೆಗೆ ಬರುತ್ತೆ, ಎಷ್ಟಕ್ಕೆ ಡೀಲ್ ಆಗಿದೆ ಎಂಬ ವಿವರ ಇಲ್ಲಿದೆ.
ಅಮೆಜಾನ್ ಫ್ರೈಮ್ ಕಾಂತಾರಾ ಚಾಪ್ಟರ್ 1 ಸಿನಿಮಾ ಬಿಡುಗಡೆ ಹಕ್ಕನ್ನು ಪಡೆದಿದೆ. ವರದಿಗಳ ಪ್ರಕಾರ, ಕಾಂತಾರ ಚಾಪ್ಟರ್ 1 ರ ಡಿಜಿಟಲ್ ಹಕ್ಕನ್ನು 125 ಕೋಟಿ ರೂಪಾಯಿಗೆ ಅಮೆಜಾನ್ ಫ್ರೈಮ್ ಪಡೆದುಕೊಂಡಿದೆ. ಪಿಂಕ್ವಿಲ್ಲಾ ವರದಿಯ ಪ್ರಕಾರ, 125 ಕೋಟಿ ರೂಪಾಯಿಗೆ ಮಾರಾಟವಾದ ಮೊದಲ ಕನ್ನಡ ಚಿತ್ರ ಇದಾಗಿದೆ. ಕೆಜಿಎಫ್ 2 ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಾಂತಾರ ಚಾಪ್ಟರ್ 1 ರ ಡಿಜಿಟಲ್ ಹಕ್ಕನ್ನು ಅಮೆಜಾನ್ ಎಲ್ಲಾ ಭಾಷೆಗಳಲ್ಲಿ ಪಡೆದುಕೊಂಡಿದೆ.
Bigg Boss Kannada ಮನೆಗೆ ಹೋಗದಿರಲು ಕಾರಣ ಹೇಳಿದ ಯುಟ್ಯೂಬರ್ ವರುಣ್ ಆರಾಧ್ಯ
ಮಾಹಿತಿ ಪ್ರಕಾರ, ಅಕ್ಟೋಬರ್ 30 ರಿಂದ ಜನರು ಅಮೆಜಾನ್ ಪ್ರೈಮ್ನಲ್ಲಿ ಚಿತ್ರ ವೀಕ್ಷಿಸಬಹುದು ಎನ್ನಲಾಗ್ತಿದೆ. ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ ನಾಲ್ಕು ವಾರಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಅಕ್ಟೋಬರ್ 30 ರಂದು ಬಿಡುಗಡೆಯಾಗಲಿದ್ದು, ಹಿಂದಿ ಆವೃತ್ತಿ ಎಂಟು ವಾರಗಳ ನಂತರ ಬಿಡುಗಡೆಯಾಗಲಿದೆ.
2022ರಲ್ಲಿ ಬಿಡುಗಡೆಯಾದ 'ಕಾಂತಾರ' ಸಿನಿಮಾ ಜಾಗತಿಕ ಮಟ್ಟದಲ್ಲಿ ದೊಡ್ಡಮಟ್ಟದ ಯಶಸ್ಸು ಗಳಿಸಿತ್ತು. ಆ ಚಿತ್ರದ ಯಶಸ್ಸಿನ ನಂತರ ಈಗ ಅದರ ಪೂರ್ವಕಥೆಯಾಗಿ ಕಾಂತಾರ ಚಾಪ್ಟರ್ 1 ಬಂದಿದ್ದು, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಕಾಂತಾರಾ ಚಾಪ್ಟರ್ 1 ಸಿನಿಮಾದಲ್ಲಿ ರಿಷಭ್ ಶೆಟ್ಟಿ ಜೊತೆ ರುಕ್ಮಿಣಿ ವಸಂತ್ ,ಗುಲ್ಶನ್ ದೇವಯ್ಯ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮನೆ ಮನೆಗೆ 'ಬಾವ' ಬರುವ ದಿನಾಂಕ ಫಿಕ್ಸ್: 2025ರ ಬ್ಲಾಕ್ ಬಸ್ಟರ್ 'ಸು ಪ್ರೇಮ್ ಸೋ' ಕಿರುತೆರೆಗೆ!
ಪ್ರೀಮಿಯರ್ ಶೋ ನೋಡಿದ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಭಾವುಕರಾಗಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ನೋಡಿ ಭಾವುಕರಾದ ಅವರನ್ನು ರಿಷಬ್ ಶೆಟ್ಟಿ ಸಂತೈಸಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ, ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ಹೊಸ ದಾಖಲೆ ಬರೆಯಲಿದೆ ಎನ್ನುವ ಮಾತನಾಡ್ತಿದ್ದಾರೆ. 1500 ವರ್ಷಗಳ ಹಿಂದಿನ ಕಥೆಯೊಂದಿಗೆ ರಿಷಬ್ ಶೆಟ್ಟಿ ಬಂದಿದ್ದಾರೆ. ಟ್ರೈಲರ್ ನೋಡಿ ಸಾಕಷ್ಟು ಥ್ರಿಲ್ ಆಗಿದ್ದ ಅಭಿಮಾನಿಗಳು ಈಗ ಕಾಂತಾರ ಚಾಪ್ಟರ್ 1 ಸಿನಿಮಾ ಕಣ್ತುಂಬಿಕೊಂಡು ಖುಷಿಯಾಗ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಂತಾರ ಚಾಪ್ಟರ್ 1 ಟ್ರೆಂಡ್ ಜೋರಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.