
ಕಾಂತಾರ (Kantara) ಸೀಕ್ವೆಲ್ ಮಾಡಿರುವ ದಾಖಲೆ ಎಲ್ಲರಿಗೂ ತಿಳಿದದ್ದೆ. ಚಿಕ್ಕ ಬಜೆಟ್ನ ಚಿತ್ರವೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಸದ್ದು ಮಾಡಿ ಹಲವು ದಾಖಲೆಗಳನ್ನು ಉಡೀಸ್ ಮಾಡಬಹುದು ಎಂದು ತೋರಿಸಿದ್ದು 2022ರಲ್ಲಿ ಬಿಡುಗಡೆಯಾಗಿದ್ದ ಕಾಂತಾರ. ಆ ಚಿತ್ರದ ಯಶಸ್ಸು ಅದರ ಮುಂದುವರಿದ ಭಾಗವಾದ ಕಾಂತಾರ: ಅಧ್ಯಾಯ 1 ರ ನಿರ್ಮಾಣಕ್ಕೆ ಕಾರಣವಾಗಿವೆ. ಇದು ಇಂದು ಹಲವು ಭಾಷೆಗಳಲ್ಲಿ, ಹಲವು ರಾಜ್ಯಗಳಲ್ಲಿ ಬಿಡುಗಡೆಗೊಂಡಿದ್ದು, ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಇಂದು ಸಂಜೆ 4 ಗಂಟೆಯ ವೇಳೆ 33 ಕೋಟಿ ರೂಪಾಯಿಗಳನ್ನು ಗಳಿಸಿರುವುದಾಗಿ ಆರಂಭಿಕ ಮಾಹಿತಿ ಕೂಡ ಲಭ್ಯವಾಗಿದೆ.
ಇದಾಗಲೇ ಚಿತ್ರದ ಮುಂಗಡ ಬುಕಿಂಗ್ ಕೂಡ ಭರ್ಜರಿಯಾಗಿಯೇ ನಡೆದಿತ್ತು. ಚಿತ್ರವು ಬ್ಲಾಕ್ ಬುಕಿಂಗ್ ಸೇರಿದಂತೆ 11 ಕೋಟಿ ರೂ. ಮೌಲ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಸುಮಾರು 4.40 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಆಗಿತ್ತು. ಒಟ್ಟು 12.24 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಬ್ಲಾಕ್ ಡೀಲ್‌ಗಳನ್ನು ಸೇರಿಸುವ ಮೂಲಕ ಚಿತ್ರದ ಒಟ್ಟು ಸಂಗ್ರಹವು 19.85 ಕೋಟಿ ರೂ.ಗಳನ್ನು ತಲುಪಿದೆ. ಇಂದು ಒಂದೇ ದಿನ 50 ಕೋಟಿಗೂ ಮೀರಿ ಆದಾಯ ಮಾಡುವ ಲೆಕ್ಕಾಚಾರವನ್ನೂ ಹಾಕಲಾಗುತ್ತಿದೆ.
ಇದನ್ನೂ ಓದಿ: ಕಾಂತಾರಕ್ಕೆ ಅಂತರರಾಷ್ಟ್ರೀಯ ವಿಶೇಷ ಪ್ರಶಸ್ತಿ: ಶಂಕರ್ನಾಗ್ಗೆ ಸಮರ್ಪಿಸಿದ ರಿಷಬ್ ಶೆಟ್ಟಿ
ಸ್ಯಾಂಡಲ್ವುಡ್ನಲ್ಲಿ ಇತಿಹಾಸ ಸೃಷ್ಟಿಸಿದ ಡಿವೈನ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ರಿಷಬ್ ಶೆಟ್ಟಿ (Divine star Rishab Shetty) ಸುವರ್ಣ ಟಿವಿಯ ಜೊತೆ ಈ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಎರಡನೆಯ ಭಾಗ ಮೊದಲು ತೋರಿಸಿ, ಮೊದಲ ಭಾಗ ಆನಂತರ ಚಿತ್ರ ಮಾಡುವುದು ಸಿನಿಮಾ ಇತಿಹಾಸದಲ್ಲಿ ಇದೇ ಮೊದಲಾ ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿ ಅವರು, ನನಗೂ ಇದು ಗೊತ್ತಿಲ್ಲ. ಜೋಗಿ ಸರ್ ಕೇಳಿದ್ರೆ ಹೇಳಬಹುದು. ನನಗೂ ಸರಿಯಾಗಿ ಐಡಿಯಾ ಇಲ್ಲ ಎನ್ನುವ ಮೂಲಕ ಇಡೀ ಸಿನಿಮಾ ಇತಿಹಾಸದಲ್ಲಿಯೇ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ ಎನ್ನಬಹುದು.
ಕೊನೆಗೆ 2022ರಲ್ಲಿ ಕಾಂತಾರ ಚಿತ್ರ ರಿಲೀಸ್ ಆದ ಬಳಿಕ ಅಲ್ಲಿಂದ ಇಲ್ಲಿಯವರೆಗೂ ಪ್ರೀಕ್ವಲ್ (ಪಾರ್ಟ್-1) ಚಿತ್ರಕ್ಕಾಗಿ ಹಗಲಿರುಳೂ ಶ್ರಮಿಸಿದವರು ರಿಷಬ್ ಶೆಟ್ಟಿ. ಇಂಥದ್ದೊಂದು ಐಡಿಯಾ ಹೇಗೆ ಬಂತು ಎಂದು ಪ್ರಶ್ನಿಸಿದಾಗ ಪಿಯುಸಿಯಲ್ಲಿ ಇದ್ದಾಗಲೇ ಎರಡೂ ಕಥೆಗಳನ್ನು ಬರೆದಿದ್ದೆ. ನಮ್ಮೂರು, ನಮ್ಮ ಜನ, ನಮ್ಮ ಸಂಪ್ರದಾಯದ ಬಗ್ಗೆ ಸಿನಿಮಾ ಮಾಡುವ ಆಸೆ ಇತ್ತು. ಆರಂಭದಲ್ಲಿ ಮುಂದಿನ ಸ್ಟೋರಿ ತೋರಿಸಿ, ಆ ಬಳಿಕ ಪಾರ್ಟ್-1 ಮಾಡುವ ಬಗ್ಗೆ ಮೊದಲೇ ಯೋಚಿಸಿದ್ದೆ. ಪಾರ್ಟ್-1 ಮಾಡುವಾಗ ಹಿಂದೆ ತೋರಿಸಿದ ಸಿನಿಮಾದ ಸ್ವಲ್ಪ ಹಿಂದಿನ ಕಥೆ ಮಾಡೋಣ ಎಂದುಕೊಂಡರೆ, ನನ್ನ ಊಹೆಗೂ ಮೀರಿ ಸಿಕ್ಕಾಪಟ್ಟೆ ಹಿಂದಿನ ಸ್ಟೋರಿಗೆ ಹೋಯಿತು ಎನ್ನುವ ಅಚ್ಚರಿಯನ್ನೂ ರಿಷಬ್ ಶೆಟ್ಟಿ ಹೇಳಿದ್ದಾರೆ.
ಸುವರ್ಣ ಟಿವಿಗೆ (Rishab Shetty Interview with Suvarna TV) ಸಂದರ್ಶನ ಇಲ್ಲಿದೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.