ತಂದೆಯಾದ ಸಂಭ್ರಮದಲ್ಲಿ ಗಾಯಕ ಹೇಮಂತ್ ಕುಮಾರ್

Published : Jun 20, 2022, 05:59 PM IST
ತಂದೆಯಾದ ಸಂಭ್ರಮದಲ್ಲಿ ಗಾಯಕ ಹೇಮಂತ್ ಕುಮಾರ್

ಸಾರಾಂಶ

ಸ್ಯಾಂಡಲ್ ವುಡ್‌ನ ಖ್ಯಾತ ಗಾಯಕ ಹೇಮೆಂತ್ ಕುಮಾರ್ (Hemanth kumar) ತಂದೆಯಾದ ಸಂಭ್ರಮದಲ್ಲಿದ್ದಾರೆ. ಹೇಮಂತ್ ಪತ್ನಿ ಕೃತಿಕಾ (Kritika) ಇಂದು (ಜೂನ್ 20) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ (Baby Boy). ಮೊದಲ ಮಗುವನ್ನು ಸ್ವಾಗತಿಸಿದ ಖುಷಿಯನ್ನು ಗಾಯಕ ಹೇಮೆಂತ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 

ಸ್ಯಾಂಡಲ್ ವುಡ್‌ನ ಖ್ಯಾತ ಗಾಯಕ ಹೇಮೆಂತ್ ಕುಮಾರ್ (Hemanth kumar) ತಂದೆಯಾದ ಸಂಭ್ರಮದಲ್ಲಿದ್ದಾರೆ. ಹೇಮಂತ್ ಪತ್ನಿ ಕೃತಿಕಾ (Kritika) ಇಂದು (ಜೂನ್ 20) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ (Baby Boy). ಮೊದಲ ಮಗುವನ್ನು ಸ್ವಾಗತಿಸಿದ ಖುಷಿಯನ್ನು ಗಾಯಕ ಹೇಮೆಂತ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆಗತಾನೆ ಹುಟ್ಟಿದ ಮುದ್ದು ಕಂದನನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿ ಹೇಮಂತ್ ಸಂತಸ ಹಂಚಿಕೊಂಡಿದ್ದಾರೆ. ಹೇಮೆಂತ್‌ಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳು ಹರಿದುಬರುತ್ತಿದೆ. 

ಹೇಮೆಂತ್ ಮಗನನ್ನು ಎತ್ತಿಕೊಂಡು ಕುಟುಂಬ ಜೊತೆ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಫೋಟೋ ಶೇರ್ ಮಾಡಿ, 'ನಮ್ಮ ಮನೆಗೆ ರಾಜಕುಮಾರನಾ ಆಗಮನವಾಗಿದೆ. ಮುದ್ದಾದ ಆರೋಗ್ಯವಂತ ಗಂಡು ಮಗು ಜನಿಸಿದ್ದಾನೆಂದು ನಿಮಗೆಲ್ಲರಿಗೂ ತಿಳಿಸಲು ಸಂತೋಷದ ಜಲಪಾತ ಧುಮ್ಮಿಕ್ಕುತ್ತಿದೆ. ನಿಮ್ಮಲ್ಲರ ಆಶೀರ್ವಾದ, ಹಾರೈಕೆಗಳು ಸದಾ ನಮ್ಮ ಮೇಲಿರಲಿ' ಎಂದು ಹೇಳಿದ್ದಾರೆ. 

ಹೇಮಂತ್ ಕುಮಾರ್ ಇತ್ತೀಚಿಗಷ್ಟೆ ಪತ್ನಿ ಕೃತಿಕಾ ಅವರ ಸೀಮಂತ ಸಂಭ್ರಮದ ಫೋಟೋವನ್ನು ಹಂಚಿಕೊಂಡಿದ್ದರು. ಕೃತಿಕಾ ಅವರ ಸೀಮಂತ ಸಂಭ್ರಮವನ್ನು ಸರಳವಾಗಿ ಸಂಪ್ರದಾಯಬದ್ದವಾಗಿ ಮಾಡಿದ್ದರು. ಸಂಭ್ರಮದಲ್ಲಿ ಕುಟುಂಬದವರು ಮತ್ತು ತೀರ ಆಪ್ತರ ಮಾತ್ರ ಭಾಗಿಯಾಗಿದ್ದರು. ತುಂಬು ಗರ್ಭಿಣಿ ಕೃತಿಕಾ ಸೀಮಂತ ಶಾಸ್ತ್ರದಲ್ಲಿ ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಕೃತಿಕಾ ಮತ್ತು ಹೇಮಂತ್ ಕುಟುಂಬದವರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಕೃತಿಕಾ ಸೀಮಂತ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಗಾಯಕ ಹೇಮಂತ್ ಪತ್ನಿಗೆ ಸೀಮಂತ ಸಂಭ್ರಮ; ಇಲ್ಲಿವೆ ಅಮೃತ ಘಳಿಗೆಯ ಫೋಟೋಗಳು

ಪತ್ನಿ ಸೀಮಂತ ಸಂಭ್ರಮದ ಬಗ್ಗೆ ಹೇಮಂತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಹಿತಿ ನೀಡುವ ಮೂಲಕ ತಂದೆಯಾಗುತ್ತಿರುವ ಸಂತಸವನ್ನು ಹಂಚಿಕೊಂಡಿದ್ದರು. 'ನನ್ನ, ಕೃತಿಕಾ ಅವರ ಕನಸು ಸಾಕಾರಗೊಳ್ಳುವ ಶುಭ ಘಳಿಗೆ ಅತಿ ಶೀಘ್ರದಲ್ಲೇ ಕೂಡಿಬರಲಿದೆ. ನಾವಿಬ್ಬರೂ ತಂದೆ ತಾಯಿಯರಾಗಿ ಅತಿ ಶೀಘ್ರದಲ್ಲಿಯೇ ಭಡ್ತಿ ಪಡೆಯಲ್ಲಿದ್ದೇವೆ ಎಂದು ನಿಮಗೆಲ್ಲರಿಗೂ ತಿಳಿಸುವುದಕ್ಕೆ ನಮ್ಮ ಹರ್ಷದ ಕಟ್ಟೆ ಒಡೆದು ಸಂತೋಷದ ಕೋಡಿ ಬಿದ್ದಿದೆ' ಎಂದಿದ್ದರು.

2021ರಲ್ಲಿ ಮದುವೆ

ಗಾಯಕ ಹೇಮಂತ್ ಕಳೆದ ವರ್ಷ 2021, ಆಗಸ್ಟ್ 11ರಂದು ಕೃತಿಕಾ ಜೊತೆ ಹಸೆಮಣೆ ಏರಿದ್ದರು. ಬೆಂಗಳೂರಿನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕೃತಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೇಮಂತ್ -ಕೃತಿಕಾ ಮದುವೆ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ಅನೇಕ ಗಣ್ಯರು ಭಾಗಿಯಾಗಿ ಶುಭಹಾರೈಸಿದರು. ಗಾಯಕ ಹೇಮಂತ್ ಪತ್ನಿ ಕೃತಿಕಾ ವೃತ್ತಿಯಲ್ಲಿ ವೈದ್ಯರು. ಕೃತಿಕಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ Nephrologist ಆಗಿ ಕೆಲಸ ಮಾಡುತ್ತಿದ್ದಾರೆ.

ಹೇಮಂತ್ ವೃತ್ತಿ ಜೀವನದ ಬಗ್ಗೆ

ಗಾಯಕ ಹೇಮಂತ್ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಗಣೇಶ್, ಉಪೇಂದ್ರ, ದರ್ಶನ್, ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ಸ್ಟಾರ್ ನಟರ ಚಿತ್ರಗಳಲ್ಲಿ ಹೇಮಂತ್ ಹಾಡಿದ್ದಾರೆ. ಹೇಮಂತ್ ವೃತ್ತಿ ಜೀವನದಲ್ಲಿ ಹಲವು ಹಿಟ್ ಗೀತೆಗಳಿವೆ. ವಿ ಮನೋಹರ್, ಗುರುಕಿರಣ್, ಮನೋಮೂರ್ತಿ, ಅರ್ಜುನ್ ಜನ್ಯ, ಶ್ರೀಧರ್ ವಿ ಸಂಭ್ರಮ್, ಹಂಸಲೇಖ, ಸಾಧು ಕೋಕಿಲಾ ಅಂತಹ ಸಂಗೀತ ನಿರ್ದೇಶಕರ ಹಾಡುಗಳಿಗೆ ಹೇಮಂತ್ ಧ್ವನಿಯಾಗಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರ ಬಳಿ ಸಹಾಯಕರಾಗಿ ಕೆಲಸ ಆರಂಭಿಸಿದ ಹೇಮಂತ್, 2000ನೇ ವರ್ಷದಲ್ಲಿ ಚಿತ್ರರಂಗಕ್ಕೆ ಅಧಿಕೃತವಾಗಿ ಪ್ರವೇಶಿಸಿದರು. ಉಪೇಂದ್ರ-ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಪ್ರೀತ್ಸೆ' ಸಿನಿಮಾದಲ್ಲಿ ಮೊದಲ ಸಲ ಹಾಡಿದರು. ಪ್ರೀತ್ಸೆ ಸಾಂಗ್ ದೊಡ್ಡ ಹಿಟ್ ಆಯಿತು. ಹೇಮಂತ್ ಗಾಯಕರಾಗಿ ಗುರುತಿಸಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?