ಯಶ್‌ ಕೆಜಿಎಫ್‌ ನೋಡಿದ ಮೇಲೆ ಕೆಜಿಎಫ್‌ ಸಿನ್ಮಾ ಮಾಡಬೇಕು ಅನಿಸಿತು: ಪಾ ರಂಜಿತ್‌

By Vaishnavi ChandrashekarFirst Published Jun 20, 2022, 4:02 PM IST
Highlights

ತೆರೆ ಮೇಲೆ ಮತ್ತೆ ಚಿನ್ನದೂರಿನ ಕತೆ. ಪಾ ರಂಜಿತ್ ಕೆಜಿಎಫ್ ನಗರಕ್ಕೆ ಭೇಟಿ ನೀಡಿದಾಗ ಹೇಳಿದ ಮಾತುಗಳಿದು..

ಕೆಜಿಎಫ್‌ ನಗರದ ಕತೆ ಮತ್ತೆ ತೆರೆ ಮೇಲೆ ಮೂಡಲಿದೆ. ಈ ಬಾರಿ ಕೆಜಿಎಫ್‌ ಕತೆಯನ್ನು ಸಿನಿಮಾ ಮಾಡಲು ಹೊರಟಿರುವುದು ತಮಿಳಿನ ನಿರ್ದೇಶಕ ಪಾ ರಂಜಿತ್‌ ಅವರು. ಇತ್ತೀಚೆಗಷ್ಟೆ ಕೆಜಿಎಫ್‌ಗೆ ಬೇಟಿ ಕೊಟ್ಟಾಗ ಅವರು ಹೇಳಿದ ಮಾತುಗಳು ಇಲ್ಲಿವೆ.

1. ‘ಕಬಾಲಿ’ ಮುಗಿಸಿದ ಕೂಡಲೇ ಕೆಜಿಎಫ್‌ ಕುರಿತು ಸಿನಿಮಾ ಮಾಡಬೇಕು ಎಂದು ಯೋಚಿಸಿದೆ. ನನಗೆ ಈ ಊರಿನ ಬಗ್ಗೆ ಒಂದು ಕುತೂಹಲ ಇತ್ತು. ಅದಕ್ಕೆ ಕಾರಣ ಇಲ್ಲಿನ ಚಿನ್ನ ಹಾಗೂ ಇಲ್ಲಿರುವ ಜನರು. ಈ ಎರಡೂ ಕಾರಣಗಳನ್ನು ಇಟ್ಟುಕೊಂಡು ಕೆಜಿಎಫ್‌ ಕುರಿತು ಓದಿಕೊಳ್ಳದೆ ಒಂದು ಕತೆ ಮಾಡಿಕೊಂಡೆ. ಆದರೆ, ಆ ಕತೆಯನ್ನು ನಾನು ಸಿನಿಮಾ ಮಾಡುವುದು ಬೇಡ ಅಂದುಕೊಂಡೆ. ಯಾಕೆಂದರೆ ನಿಜವಾದ ಕೆಜಿಎಫ್‌ ಬೇರೆ, ನಾನು ಬರೆದುಕೊಂಡಿದ್ದ ಕತೆ ಬೇರೆ.

2. ಅದೇ ಸಮಯಕ್ಕೆ ಯಶ್‌ ನಟನೆಯ ‘ಕೆಜಿಎಫ್‌’ ಸಿನಿಮಾ ಬಂತು. ಈ ಸಿನಿಮಾ ನೋಡಿದ ಮೇಲೆ ಕೆಜಿಎಫ್‌ ಬಗ್ಗೆ ನಾನು ಸಿನಿಮಾ ಮಾಡುವ ಬಗ್ಗೆ ನಿರ್ಧರಿಸೋಣ ಅಂದುಕೊಂಡೆ. ‘ಕೆಜಿಎಫ್‌’ ನೋಡಿದ ಮೇಲೆ ಕೆಜಿಎಫ್‌ ಕುರಿತು ಸಿನಿಮಾ ಮಾಡಬೇಕು ಅನಿಸಿತು. ಯಾಕೆಂದರೆ ನಿಜವಾದ ಕತೆ ‘ಕೆಜಿಎಫ್‌’ ಚಿತ್ರದಲ್ಲೂ ಇರಲಿಲ. ಕೆಜಿಎಫ್‌ ಹೆಸರಿನಲ್ಲಿ ಬೇರೆ ಕತೆ ಹೇಳಲಾಗಿತ್ತು.

KGF 2 ತರದ ಸಿನಿಮಾ ಬಾಲಿವುಡ್‌ನಲ್ಲಿ ಮಾಡಿದ್ರೆ ವಿರೋಧಿಸುತ್ತಿದ್ರು; ಕರಣ್ ಜೋಹರ್

3. ಆ ನಂತರ ನಾನು ಕೆಜಿಎಫ್‌ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಆಗ ಅಪ್ಪ ಬಂದು ನನಗೆ ‘ಕೋಲಾರ್‌ ತಂಗವಯಲ್‌’ ಎನ್ನುವ ಪುಸ್ತಕ ಕೊಟ್ಟರು. ಅದನ್ನು ಓದಿದ ಮೇಲೆ ಮೈ ಜುಮ್‌ ಅನಿಸಿತು. ಮಹಾತ್ಮ ಗಾಂಧಿ, ಅಂಬೇಡ್ಕರ್‌ರಂತಹ ದಿಗ್ಗಜರು ಬಂದು ಹೋಗಿರುವ ಊರು. ಜತೆಗೆ ಕೆಜಿಎಫ್‌ ಹೆಸರು ಬಂದಿದ್ದೇ ಒಂದು ರೋಚಕ. ಇದನ್ನು ಇಟ್ಟುಕೊಂಡು ನಿಜವಾದ ಕೆಜಿಎಫ್‌ ಕತೆಯನ್ನು ಸಿನಿಮಾ ಮಾಡುತ್ತೇನೆ. ಆ ನಿಟ್ಟಿನಲ್ಲಿ ತಯಾರಿಗಳು ನಡೆಯುತ್ತಿವೆ.

OTTಯಲ್ಲಿ ದಾಖಲೆ

 ಅಮೆಜಾನ್ ಪ್ರೈಮ್ ಚಂದಾದರರಾಗಿರುವರು ಕೆಜಿಎಫ್-2 ಸಿನಿಮಾವನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದು. ಅಂದಹಾಗೆ ಕೆಜಿಎಫ್-2 ಈಗಾಗಲೇ ಒಟಿಟಿಯಲ್ಲಿ ವೀಕ್ಷಿಸಲು ಲಭ್ಯವಿತ್ತು. ಆದರೆ ಹಣ ಕೊಟ್ಟು ವೀಕ್ಷಿಸಬೇಕಿತ್ತು. ಇದೀಗ ಉಚಿತ ವೀಕ್ಷಣಗೆ ಲಭ್ಯವಾಗುತ್ತಿದೆ.ಈ ಮೂಲಕ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಸಾಧ್ಯವಾಗದೇ ಇರುವವರು ಹಾಗೂ ಮತ್ತೆ ಮತ್ತೆ ಸಿನಿಮಾ ನೋಡಬೇಕು ಎಂದುಕೊಂಡವರು ಒಟಿಟಿಯಲ್ಲಿ ನೋಡಿ ಆನಂದಿಸಬಹುದು. ಅಂದಹಾಗೆ ಕೆಜಿಎಫ್-2 ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ತೆರೆಗೆ ಬಂದಿದೆ. ಸದ್ಯ ಒಟಿಟಿಯಲ್ಲೂ ಎಲ್ಲಾಭಾಷೆಯಲ್ಲೂ ಸಿನಿಮಾ ಲಭ್ಯವಿರಲಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿದ್ದು ಆಯಾಯ ಭಾಷೆಯ ಪ್ರೇಕ್ಷಕರು ಅವರ ಭಾಷೆಯಲ್ಲೆ ಸಿನಿಮಾ ವೀಕ್ಷಿಸಬಹುದು. 

ಹೊಸ ಸಿನಿಮಾ ಅನೌನ್ಸ್ ಮಾಡುತ್ತಿಲ್ಲ ರಾಕಿಭಾಯ್ ಯಾಕೆ..?

ಕೆಜಿಎಫ್-2ನಲ್ಲಿ ಯಶ್‌ ಜೊತೆಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್ ಸಂಜಯ್‌ ದತ್‌, ನಟಿ ರವೀನಾ ಟಂಡನ್‌, ಪ್ರಕಾಶ್‌ ರಾಜ್‌, ರಾವ್‌ ರಮೇಶ್‌, ಈಶ್ವರಿ ರಾವ್‌, ಅಚ್ಯುತ್ ಕುಮಾರ್ ಮತ್ತು ಅರ್ಚನಾ ಜೋಯಿಸ್‌ ಹಾಗೂ ಇತರರು ಪ್ರಮುಖ ಪಾತ್ರದಲ್ಲಿದ್ದಾರೆ ನಟಿಸಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್:ಚಾಪ್ಟರ್ 2 ಅನ್ನು ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

click me!