
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಸದ್ಯ ಬೈರಾಗಿ (Bairagee) ಸಿನಿಮಾದ ರಿಲೀಸ್‌ಗೆ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾತಂಡ ಬಿಡುಗಡೆಗೆ ಬ್ಯುಸಿಯಲ್ಲಿದ್ದು ಪ್ರಮೋಷನ್ ಕಾರ್ಯ ಜೋರಾಗಿ ನಡೆಯುತ್ತಿದೆ. ವಿಜಯ್ ಮಿಲ್ಟನ್ ಸಾರಥ್ಯದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಶಿವಣ್ಣ ಜೊತೆ ಡಾಲಿ ಧನಂಜಯ್ (Dhananjay) ಮತ್ತು ದಿಯಾ ಹೀರೋ ಪೃಥ್ವಿ ಅಂಬರ್ (Pruthvi Ambaar) ನಟಿಸಿದ್ದಾರೆ. ಅಂದಹಾಗೆ ಶಿವಣ್ಣ ಮತ್ತು ಡಾಲಿ ಧನಂಜಯ್ ಸೂಪಹ್ ಹಿಟ್ ಟಗರು ಸಿನಿಮಾದ ಬಳಿಕ ಬೈರಾಗಿ ಮೂಲಕ ಮತ್ತೆ ಒಟ್ಟಿಗೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಶಿವಣ್ಣ, ಡಾಲಿ ಜೊತೆ ನಟ ಚಿಟ್ಟೆ ಕೂಡ ಈ ಸಿನಿಮಾದ ಭಾಗವಾಗಿದ್ದಾರೆ. ಹೌದು ಟಗರು ಸಿನಿಮಾದಲ್ಲಿ ಮೂವರ ಜೋಡಿ ಮತ್ತೆ ಮೋಡಿ ಮಾಡುತ್ತಿದೆ. ಶಿವಣ್ಣನ ಟಗರಿನೇಟಿಗೆ ತರಗೆಲೆ ಥರಾ ಉದುರೋಗ್ತಾರೆ ಡಾಲಿ-ಚಿಟ್ಟೆ ಜೋಡಿ. ಆದ್ರೂ ಶಿವಣ್ಣ-ಡಾಲಿ-ಚಿಟ್ಟೆ ಕಾಂಬಿನೇಷನ್ ಗೆ ಭಯಂಕರ ಫ್ಯಾನ್ ಫಾಲೋಯಿಂಗ್ ಇದೆ. ಈ ತ್ರಿವಳಿ ಜೋಡಿ ಮತ್ತೀಗ ಒಂದಾಗ್ತಾ ಇದೆ.
ಧನಂಜಯ್‌ಯಿಂದ ಶಿವಣ್ಣ ಏನ್ ಕದಿತಾರಂತೆ ಗೊತ್ತಾ? ಇಲ್ಲಿದೆ ಉತ್ತರ
ಹೌದು ಶಿವಣ್ಣ ಜೊತೆ ಡಾಲಿ ಧನಂಜಯ ಹಾಗೂ ಚಿಟ್ಟೆ ವಸಿಷ‍್ಟ ಸಿಂಹ ಮತ್ತೆ ಜೋಡಿಯಾಗ್ತಾ ಇದ್ದಾರೆ. ಆದ್ರೆ ಇಲ್ಲಿ ವಸಿಷ್ಠ ತೆರೆ ಮೇಲೆ ಜೋಡಿಯಾಗೋ ಬದಲು ಹಾಡು ಹಾಡುವ ಮೂಲಕ ಧ್ವನಿ ನೀಡಿ ಒಂದಾಗ್ತಾ ಇದ್ದಾರೆ. ಇದೇ ಜು.1ಕ್ಕೆ ತೆರೆಗೆ ಬರ್ತಿರೋ ಡಾಲಿ ಧನಂಜಯ-ಶಿವಣ್ಣ ಒಟ್ಟಾಗಿ ನಟಿಸಿರುವ ಬೈರಾಗಿ ಸಿನಿಮಾದ ಒಂದು ಪವರ್ ಫುಲ್ ಹಾಡಿಗೆ ಚಿಟ್ಟೆ ವಸಿಷ್ಠ ದನಿಯಾಗಿದ್ದಾರೆ. ಈಗಾಗಲೇ ಹಾಡೊಂದಕ್ಕೆ ಶಿವಣ್ಣ ಜೊತೆ ಶರಣ್ ದನಿಯಾಗಿದ್ದು. ಈಗ ಮತ್ತೊಂದು ಹಾಡಿನಲ್ಲಿ ವಸಿಷ್ಠ ತಮ್ಮ ದನಿಯ ಮೂಲಕ ಶಿವಣ್ಣ ಡಾಲಿಯ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.
ಅನೂಪ್ ಸಿಳೀನ್ ಸಂಗೀತ ಸಂಯೋಜನೆಯಲ್ಲಿ ಬೈರಾಗಿ ಸಿನಿಮಾದ ಹಾಡುಗಳು ಮೂಡಿಬಂದಿವೆ. ಸದ್ಯ ವಸಿಷ್ಟ ಸಿಂಹ ಹಾಡಿರುವ ಹಾಡಿಗೆ ಕೆ.ಜಿ.ಎಫ್ ಅನನ್ಯ ಭಟ್ ಸಾಥ್ ಕೊಟ್ಟಿದ್ದಾರೆ.
ಜುಲೈ 1ಕ್ಕೆ ಬೈರಾಗಿ ಸಿನಿಮಾ ಬಿಡುಗಡೆ: ವಿಭಿನ್ನ ಅವತಾರದಲ್ಲಿ ಶಿವರಾಜ್ ಕುಮಾರ್!
ಪ್ರಿ-ರಿಲೀಸ್ ಈವೆಂಟ್
ಸದ್ಯ ಸಿನಿಮಾತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಿ ರಿಲೀಸ್ ಈವೆಂಟ್‌ಅನ್ನು ದೊಡ್ಡ ಮಟ್ಟದಲ್ಲಿ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಹೌದು, ಚಾಮರಾಜನಗರದಲ್ಲಿ ಬೈರಾಗಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಯುತ್ತಿದೆ. ಜೂನ್ 25ಕ್ಕೆ ಪ್ರಿ ರಿಲೀಸ್ ಈವೆಂಟ್ ನಡೆಯಲಿದೆ ಎನ್ನಲಾಗಿದೆ. ಅಂದಗಹಾಗೆ 24 ರಂದು ರಾಮನಗರದಿಂದ ಮೈಸೂರುವರೆಗೆ ರೋಡ್ ಶೋ ಕೂಡ ಹಮ್ಮಿಕೊಳ್ಳಲಾಗಿದೆಯಂತೆ. ಜುಲೈ 1ಕ್ಕೆ ಸಿನಿಮಾ ಅದ್ದೂರಿಯಾಗಿ ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.