1975 ಚಿತ್ರದಲ್ಲಿ ಸಿಂಧು ಲೋಕನಾಥ್‌ ವಿಶೇಷ ಡಾನ್ಸ್‌

Published : Apr 29, 2022, 09:58 AM ISTUpdated : Apr 29, 2022, 10:17 AM IST
1975 ಚಿತ್ರದಲ್ಲಿ ಸಿಂಧು ಲೋಕನಾಥ್‌ ವಿಶೇಷ ಡಾನ್ಸ್‌

ಸಾರಾಂಶ

ಡಿಫರೆಂಟ್‌ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಸಿಂಧು ಲೋಕನಾಥ್ ಡ್ರಗ್ಸ್ ಮಾಫಿಯಾ ಆಯ್ಕೆ ಮಾಡಿದ್ದು ಯಾಕೆ!

ಡ್ರಗ್‌ ಮಾಫಿಯಾ ಸುತ್ತ ಬರುತ್ತಿರುವ ಚಿತ್ರ ‘1975’ ಈ ಚಿತ್ರದಲ್ಲಿ ಬರುವ ಹಾಡಿಗೆ ನಟಿ ಸಿಂಧು ಲೋಕನಾಥ್‌ ಹೆಜ್ಜೆ ಹಾಕಿದ್ದಾರೆ. ವಸಿಷ್ಠ ಬಂಟನೂರು ನಿರ್ದೇಶನದ ಸಿನಿಮಾ ಇದು. ಚಕ್ರವರ್ತಿ ಚಂದ್ರಚೂಡ್‌, ವಿಜಯ… ಶೆಟ್ಟಿ, ಮಾನಸ, ವೆಂಕಟೇಶ್‌ ಪ್ರಸಾದ್‌ ಹಲವರು ನಟಿಸಿದ್ದಾರೆ. ‘ನನ್ನ ಸಿನಿಮಾ ಜರ್ನಿಯಲ್ಲಿ ಈ ರೀತಿ ಸ್ಪೆಷಲ… ಸಾಂಗ್‌ಗೆ ಹೆಜ್ಜೆ ಹಾಕಿದ್ದು ಇದೇ ಮೊದಲು. ಹಾಡು ತುಂಬಾ ಚೆನ್ನಾಗಿದೆ’ ಎಂದು ಸಿಂಧು ಲೋಕನಾಥ್‌ ಹೇಳುತ್ತಾರೆ. ದಿನೇಶ್‌ ರಾಜನ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್(Sindhu Loknath) ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಕೆಲವು ವರ್ಷಗಳು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಸಿಂಧು ಇದೀಗ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಹೊಸ ಹೇರ್ ಸ್ಟೈಲ್ ಮೂಲಕ ಮಿಂಚುತ್ತಿದ್ದ ಸಿಂಧು ಇದೀಗ ಡ್ರಗ್ ಅಡಿಕ್ಟ್(Drug Addict) ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ತಯಾರಾಗಿದ್ದಾರೆ. ಪದ್ಮವ್ಯೂಹ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ಸಿಂಧು ಲೋಕನಾಥ್ ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ.

ಈ ಪಾತ್ರಕ್ಕಾಗಿ ಸಿಂಧು ಅನೇಕ ದಿನಗಳಿಂದ ತಯಾರಿ ಕೂಡ ನಡೆಸಿದ್ದಾರಂತೆ. ಪಾತ್ರಕ್ಕಾಗಿ ಅನೇಕ ಸಿನಿಮಾಗಳನ್ನು ವೀಕ್ಷಿಸಿರುವುದಾಗಿ ಹೇಳಿದ್ದಾರೆ. ಕಂಗನಾ ರಣಾವತ್ ಫ್ಯಾಶನ್ ಚಿತ್ರದ ಕೆಲವು ಅಂಶಗಳನ್ನು ತಿಳಿದುಕೊಂಡಿದ್ದೇನೆ. ನಾನು ಆ ಪಾತ್ರಕ್ಕೆ ತನ್ನದೆ ಆದ ಸೂಕ್ಷ್ಮತೆಗಳನ್ನು ತಂದಿದ್ದೇನೆ. ಇದು ನನ್ನ ನಟನೆಯಲ್ಲಿ ಖಂಡಿತವಾಯಿಗೂ ಗಮನ ಸೆಳೆಯುತ್ತದೆ ಎಂದಿದ್ದಾರೆ.

ವಸಿಷ್ಠ ಸಿಂಹ ನಟನೆಯ ಲವ್‌ಲಿ ಚಿತ್ರಕ್ಕೆ ಸಮೀಕ್ಷ ನಾಯಕಿ

    ಇತ್ತೀಚಿಗೆ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಅಲ್ಲದೆ ತನ್ನ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್ ವಿರುದ್ಧ ಸಿಂಧು ಸಿಡಿದೆದ್ದಿದ್ದರು. ವದಂತಿ ಹಬ್ಬಿಸುವವರ ಬಾಯಿ ಮುಚ್ಚಿಸಿದ್ದ ಸಿಂಧು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದರು. ತರಹೇವಾರಿ ಫೋಟೋಗಳನ್ನು ಶೇರ್ ಮಾಡುತ್ತಾ ಸಿಂಧು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಬಣ್ಣದ ಲೋಕದಿಂದ ದೂರ ಆಗಿದ್ದರು, ಸಾಮಾಜಿಕ ಜಾಲತಾಣದಲ್ಲಿ ಯಾಕ್ಟೀವ್ ಆಗಿದ್ದರು. ಇದೀಗ ಮತ್ತೆ ದೊಡ್ಡ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

    OTTಯಲ್ಲಿ ಲಭ್ಯವಿರುವ ಕನ್ನಡದ ಸಿನಿಮಾಗಳು; ಯಾವಾಗ ಬರುತ್ತೆ KGF 2, RRR?

    ನಟಿ ಸಿಂಧೂ ಲೋಕ್‌ನಾಥ್‌ ರಾಜಸ್ಥಾನದ ಪ್ರಮುಖ ನಗರ, ಪಟ್ಟಣ, ಹಳ್ಳಿ ಹಳ್ಳಿಗಳ ಗಲ್ಲಿ ಗಲ್ಲಿಗಳನ್ನು ಅವರು ಸುತ್ತಾಡಿ ತಮ್ಮ ಬಹು ದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಅದರ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.‘ನನಗೆ ತುಂಬಾ ಚಿಕ್ಕ ವಯಸ್ಸಿನಿಂದಲೂ ರಾಜಸ್ಥಾನ್‌ ನೋಡಬೇಕು ಎನ್ನುವ ಆಸೆ ಇತ್ತು. ಆದರೆ ಅದಕ್ಕೆ ತಕ್ಕ ಅವಕಾಶಗಳು ಸಿಕ್ಕಿರಲಿಲ್ಲ. ಕಳೆದ ಮೂರು ವರ್ಷದಿಂದ ಈ ಬಯಕೆ ಅತಿಯಾಯಿತು. ಫ್ಯಾಮಿಲಿ  ಜೊತೆಗೆ ಹೋಗೋಣ ಎಂದು ಸಿದ್ಧತೆ ಮಾಡಿಕೊಂಡರೂ ಕಡೆ ಕ್ಷಣದಲ್ಲಿ ಮತ್ತ್ಯಾರಿಗೋ ಅನಾನುಕೂಲವಾಗಿ, ಏನೋ ಒಂದು ಸಮಸ್ಯೆಯಾಗಿ ಪ್ರಸಾಸ ರದ್ದಾಗುತ್ತಿತ್ತು. ಈ ಭಾರಿ ಹೀಗೆ ಆಗುವುದು ಬೇಡ. ನನ್ನ ಆಸೆಯನ್ನು ಪೂರ್ಣ ಮಾಡಿಕೊಳ್ಳಬೇಕು ಎಂದುಕೊಂಡು ನಾನೊಬ್ಬಳೇ ಹೊರಟು ಬಂದೆ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
    ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!