
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಶ್ವೇತಾ ಶ್ರೀವಾತ್ಸವ್ ಅವರ ರಾಜರಾಜೇಶ್ವರಿ ನಿವಾಸದಲ್ಲಿ ಹಾವು ಕಾಣಿಸಿಕೊಂಡಿದೆ. ಆಟವಾಡುತ್ತಿದ್ದ ವೇಳೆ ಹಾವನ್ನು ಕಂಡು ತೊದಲು ಮಾತುಗಳಲ್ಲಿ ವರ್ಣಿಸಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂ ಪೋಸ್ಟ್:
'ನಮ್ಮ ಮನೆಯಲ್ಲಿ ಆಹ್ವಾನಿಸದೇ ಬಂದ ಅತಿಥಿ. ಮೊದಲ ಬಾರಿ ಪ್ರತ್ಯಕ್ಷವಾಗಿ ನನ್ನ ಪುತ್ರಿ ಹಾವು ನೋಡಿದ್ದು. ಕಾಕತಾಳೀಯ, ಇವತ್ತು ವಿಶ್ವ ಹಾವುಗಳ ದಿನಾಚರಣೆ...' ಎಂದು ಶ್ವೇತಾ ಬರೆದುಕೊಂಡಿದ್ದಾರೆ.
'ಸ್ನೇಕ್ ಬಂತು, ನನ್ನ ಹತ್ರ ಬಂತು. ಇಷ್ಟು ದೊಡ್ಡ ಹಾವು ಅದು. ಹಾವು ಬಂದಿದೆ ಅಂತ ಹೇಳಿ ಅಪ್ಪ ಹೆದರಿಸಿದ್ದರು. ಬುಸ್ ಬುಸ್ ಅಂತ ಸೌಂಡ್ ಮಾಡ್ತು,' ಎಂದು ತೊದಲು ಮಾತುಗಳಿಂದ ಬೇಬಿ ಅಶ್ಮಿತಾ ಹೇಳಿದ್ದು, ಮೊದಲ ಸಲ ಉರಗನ ನೋಡಿ ಪುಳಕಿತಳಾಗಿದ್ದಾಳೆ.
ಬೇಬಿ ವಿಡಿಯೋ:
ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಶ್ವೇತಾ ಮಗಳಿಗೂ ಇನ್‌ಸ್ಟಾಗ್ರಾಂನಲ್ಲಿ ಖಾತೆ ಓಪನ್ ಮಾಡಿದ್ದಾರೆ. ಈಗಾಗಲೆ 1 ಲಕ್ಷ 20 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ತಂದೆ ಅಮಿತ್ ಮಗಳ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.