
ಹೈರಿಸ್ಕ್ ಜಾಬ್‌ನಲ್ಲಿ
ಕಳೆದ ಹತ್ತು ವರ್ಷದಿಂದ ಬಿಜಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಬೇಸಿಕಲಿ ನಾನು ಪೊ›ಫೆಸರ್. ಟೀಚಿಂಗ್‌ನಲ್ಲಿಯೇ ತೊಡಗಿಸಿಕೊಂಡಿದ್ದೆ. ಆದರೆ ಈಗ ಕೊರೋನಾ ಬಂದು, ಹಲವು ಡಾಕ್ಟರ್‌ಗಳೇ ಈ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ನಾನು ಈಗ ಕೊರೋನಾ ಕಾರ್ಯರಂಗಕ್ಕೆ ಇಳಿದಿದ್ದೇನೆ. ಫೀವರ್ ಕ್ಲಿನಿಕ್, ಕೊರೋನಾ ಡ್ಯೂಟಿ ಮಾಡುತ್ತಿದ್ದೇನೆ. ಇದು ಹೈರಿಸ್ಕ್ ಜಾಬ್. ಮನೆಯವರೆಲ್ಲರಿಂದ ದೂರವೇ ಇದ್ದು ಕೆಲಸ ಮಾಡುತ್ತಿದ್ದೇನೆ.
ಕೊರೋನಾ ಬಂದು ಹೋಗಿದ್ದೇ ಗೊತ್ತಿರಲಿಲ್ಲ
ಒಬ್ಬ ಮಹಿಳೆ ನಮ್ಮಲ್ಲಿಗೆ ನೆಗಡಿ, ತಲೆನೋವು, ಕೆಮ್ಮು ಎಂದು ಹೇಳಿಕೊಂಡು ಪರೀಕ್ಷೆ ಮಾಡಿಸಿಕೊಂಡರು. ಎರಡು ಬಾರಿ ಪರೀಕ್ಷೆ ಮಾಡಿದಾಗಲೂ ವರದಿ ನೆಗೆಟಿವ್ ಎಂದೇ ಬಂತು. ಆದರೆ ಲಕ್ಷಣಗಳನ್ನು ನೋಡಿದರೆ ಕೊರೋನಾ ರೀತಿಯೇ ಇದೆ. ಆಗ ಆ್ಯಂಟಿಬಾಡಿ ಚೆಕ್ ಮಾಡಿದಾಗ ಅವರಿಗೆ ಕೊರೋನಾ ಬಂದು ಹೋಗಿರುವುದು ಗೊತ್ತಾಯಿತು. ಸಾಕಷ್ಟುಪ್ರಕರಣಗಳಲ್ಲಿ ಹೀಗೆಯೇ ಆಗಿದೆ. ಇದನ್ನು ನಾವು ವೈದ್ಯಕೀಯ ಪರಿಭಾಷೆಯಲ್ಲಿ ಹರ್ಡ್ ಇಮ್ಯುನಿಟಿ ಎನ್ನುತ್ತೇವೆ. ಇದು ಸಮುದಾಯದಲ್ಲಿ ಹೆಚ್ಚಾದರೆ ಕೊರೋನಾ ಹಾವಳಿ ಕಡಿಮೆ ಆಗುತ್ತದೆ. ಆಗ ಯಾವುದೇ ಔಷಧ, ಲಸಿಕೆ ಬೇಕಾಗುವುದಿಲ್ಲ. ಆದರೆ ಈ ಹಂತ ತಲುಪಬೇಕು, ಹರ್ಡ್ ಇಮ್ಯುನಿಟಿ ಬಿಲ್ಡ್ ಆಗಬೇಕು ಎಂದರೆ ಒಂದಷ್ಟುಸಮಯ ಬೇಕಾಗಬಹುದು.
ಅಂದು ಸ್ಯಾಂಡಲ್‌ವುಡ್ ಮ್ಯೂಸಿಕ್ ಡೈರೆಕ್ಟರ್, ಇಂದು ಕೊರೋನಾ ವಾರಿಯರ್ ಡಾಕ್ಟರ್!
ಭಯ ಬೀಳುವ ಅಗತ್ಯವಿಲ್ಲ
ಕೊರೋನಾಗೆ ಇಷ್ಟೊಂದು ಪ್ರಮಾಣದಲ್ಲಿ ಭಯ ಬೀಳುವ ಅಗತ್ಯ ಇಲ್ಲ. ನಮ್ಮ ದೇಹದಲ್ಲಿಯೇ ಕೊರೋನಾ ವಿರುದ್ಧ ಹೋರಾಟ ಮಾಡುವ ಸೈನಿಕರು ತಾನಾಗಿಯೇ ಹುಟ್ಟುತ್ತಾರೆ. ಇದಕ್ಕೆ ತುಸು ಸಮಯ ಬೇಕು. ಇದು ಹೆಚ್ಚಿನ ಜನರಲ್ಲಿ ಉತ್ಪತ್ತಿಯಾಗು ಪ್ರಕ್ರಿಯೆಗೆ ಹರ್ಡ್ ಇಮ್ಯುನಿಟಿ ಎನ್ನುತ್ತೇವೆ. ನೂರು ಮಂದಿಯಲ್ಲಿ ಐವತ್ತು ಮಂದಿಗೆ ಈ ರೀತಿಯ ಆ್ಯಂಟಿಬಾಡಿ ಕ್ರಿಯೇಟ್ ಆದರೆ ಅವರಿಂದ ಮತ್ತಷ್ಟುಮಂದಿಗೆ ಸೋಂಕು ಹಬ್ಬುವ ಸಾಧ್ಯತೆ ಕಡಿಮೆ ಆಗುತ್ತದೆ. ಹೀಗೆ ಆದಾಗ ಕೊರೋನಾ ತಾನಾಗಿಯೇ ನಾಶವಾಗುತ್ತದೆ. ಗರಿಷ್ಟಮೂರು ದಿನಗಳ ಕಾಲ ಯಾವುದೇ ದೇಹದ ಆಶ್ರಯ ಅದಕ್ಕೆ ಸಿಗದೇ ಇದ್ದರೆ ಅದರ ಅಂತ್ಯವಾಗುತ್ತದೆ. ಈ ವೇಳೆಯಲ್ಲಿ ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು.
ಇಮ್ಯುನಿಟಿ ಬಿಲ್ಡ್ ಮಾಡಿಕೊಳ್ಳಿ
ಮನೆಯಲ್ಲಿಯೇ ಪೌಷ್ಠಿಕ ಆಹಾರಗಳ ಸೇವನೆ ಮಾಡಬೇಕು. ಮಿಟಮಿನ್ ಸಿ ಹೆಚ್ಚಾಗಿ ಇರುವ ಪದಾರ್ಥಗಳು, ಅಥವಾ ವಿಟಮಿನ್ ಮಾತ್ರೆಗಳ ಸೇವನೆ ಮಾಡಿಕೊಂಡು ದೇಹದ ಆರೋಗ್ಯ ಕಾಪಾಡಿಕೊಂಡರೆ ಸಾಕು ಕೊರೋನಾ ವಿರುದ್ಧದ ಹೋರಾಟದಲ್ಲಿ ನಾವು ಅರ್ಧ ಗೆಲುವು ಪಡೆದ ಹಾಗೆಯೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.