ತಪ್ಪು ಹುಡುಕೋದು ಬೇಡ, ಚೆನ್ನಾಗಿ ಹೋಗುತ್ತಿರುವ ಸಿನಿಮಾ ತೆಗೆಯೋದು ಸರಿ ಅಲ್ಲ: ಶಿವರಾಜ್‌ಕುಮಾರ್

Published : Mar 24, 2022, 03:04 PM IST
ತಪ್ಪು ಹುಡುಕೋದು ಬೇಡ, ಚೆನ್ನಾಗಿ ಹೋಗುತ್ತಿರುವ ಸಿನಿಮಾ ತೆಗೆಯೋದು ಸರಿ ಅಲ್ಲ: ಶಿವರಾಜ್‌ಕುಮಾರ್

ಸಾರಾಂಶ

ಆರ್‌ಆರ್‌ಆರ್‌ ಸಿನಿಮಾದಿಂದ ಅಪ್ಪು ಸಿನಿಮಾಗೆ ಅಡ್ಡಿ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಿವಣ್ಣ ಮತ್ತು ನಿರ್ಮಾಪಕ ಕಿಶೋರ್ ಮಾತು...

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿರುವ ಜೇಮ್ಸ್‌ ಸಿನಿಮಾ ಮಾರ್ಚ್‌ 17ರಂದು ಬಿಡುಗಡೆಯಾಗಿದೆ. ಮೊದಲ ದಿನವೇ 30 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ನಾಲ್ಕು ದಿನಕ್ಕೆ 100 ಕೋಟಿ ದಾಟಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇದೇ ಸಮಯಕ್ಕೆ ಎಸ್‌ಎಸ್‌ ರಾಜಮೌಳಿ ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ. ಹೀಗಾಗಿ ಜೇಮ್ಸ್‌ ಸಿನಿಮಾವನ್ನು ಎತ್ತಂಗಡಿ ಮಾಡಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜೇಮ್ಸ್‌ ಸಿನಿಮಾಗೆ ಯಾವ ತೊಂದರೆ ಆಗಬಾರದು ನಾವು RRR ನೋಡುವುದಿಲ್ಲ ಎಂದು ಅಭಿಮಾನಿಗಳು bycott RRR ಎಂದು ಹೋರಾಟ ಮಾಡುತ್ತಿದ್ದಾರೆ. 

ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದಾರೆ. ಆನಂತರ ಫಿಲ್ಮಂ ಚೇಂಬರ್‌ಗೆ ಆಗಮಿಸಿ ಜೇಮ್ಸ್‌ ಚಿತ್ರಕ್ಕೆ ಆಗುತ್ತಿರುವ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದಾರೆ. 'ನಮ್ಮ ಸರ್ಕಾರ ಇದನ್ನು ಗಮನಿಸಿದೆ. ದಯವಿಟ್ಟು ಕನ್ನಡ ಚಿತ್ರರಂಗ ಉಳಿಸಿ ರಾಜ್‌ಕುಮಾರ್ ಹೇಳಿದ ಹಾಗೆ ನಾವು ಪರಭಾಷೆ ವಿರೋಧಿಗಳು ಅಲ್ಲ ಕಲೆಕ್ಷನ್‌ ತುಂಬಾನೇ ಚೆನ್ನಾಗಿದೆ ಅಂದ್ಮೇಲೆ ಸಿನಿಮಾ ತೆಗಿಬೇಡಿ ಚೇಂಬರ್ ಅಧ್ಯಕ್ಷರು ಜೊತೆ ನಾನು ಮಾತನಾಡಿದ್ದೀನಿ. ಎಲ್ಲೆಲ್ಲಿ ಸಿನಿಮಾ ತೆಗೆಯಲು ಮುಂದಾಗಿದ್ದಾರೆ ಅವರಿಗೆ ನಾನು ಮನವಿ ಮಾಡಿಕೊಳ್ಳುತ್ತೀನಿ. ಥಿಯೇಟರ್‌ ಸಮಸ್ಯೆ ಯಾವಾಗಲೂ ಬರ್ತಾನೆ ಇರುತ್ತೆ. ಇದರಲ್ಲಿ ತಪ್ಪು ಹುಡುಕುವುದಕ್ಕೆ ಆಗೋಲ್ಲ. ಇಂಡಸ್ಟ್ರಿಯಲ್ಲಿ ಎಲ್ಲರೂ ಒಂದೇ. ಅಪ್ಪು ಸಿನಿಮಾ ಅಂದ್ರೆ ಜನರಿಗೆ ಒಂದು ಎಮೋಷನ್ ಇದೆ. ಇದನ್ನು ಬಿಟ್ಟುಕೊಡುವುದಕ್ಕೆ ಆಗುವುದಿಲ್ಲ. ಸಿಎಂ ಮೂರು ಭಾರಿ ಕಾಲ್ ಮಾಡಿ ಮಾತನಾಡಿದರು . ಇವತ್ತು ಭೇಟಿ ಮಾಡಿ ಮಾತನಾಡಿದೆ. ಎಲ್ಲರೂ ಸೇರಿ ಮಾತನಾಡಿ ಸಮಸ್ಯೆ ಬಗೆ ಹರಿದಿದೆ ತಪ್ಪು ಹುಡುಕೋದು ಬೇಡ ಚೆನ್ನಾಗಿ ಹೋಗುತ್ತಿದ್ದಾಗ ಸಿನಿಮಾ ತೆಗೆಯೋದು ಸರಿ ಅಲ್ಲ. ನನ್ನ ನೇತೃತ್ವದಲ್ಲಿ ಅಂತ ಹೇಳೋದು ಬೇಡ ಯಾರ ಸಿನಿಮಾ ಆದ್ರೂ ನಾನು ಬರ್ತೀನಿ ಎಲ್ಲಾ ಸಮಸ್ಯೆ ಇಂದು ಬಗೆ ಹರಿದಿದೆ' ಎಂದು ಶಿವಣ್ಣ ಮಾತನಾಡಿದ್ದಾರೆ.

'ಆರ್‌ಆರ್‌ಆರ್‌ ಸಿನಿಮಾದಿಂದ ನಮಗೆ ಒಂಭತ್ತು ಚಿತ್ರಮಂದಿಗರಳಲ್ಲಿ ಸಮಸ್ಯೆ ಇತ್ತು. ಶಿವಣ್ಣ ಹಾಗೂ ವಾಣಿಜ್ಯ ಮಂಡಳಿ ಸೇರಿ ಸಮಸ್ಯೆ ಬಗೆ ಹರಿಸಿದ್ದಾರೆ. ಅಭಿಮಾನಿಗಳಲ್ಲಿ ತುಂಬಾನೇ ಕನ್ಫ್ಯೂಷನ್‌ ಇತ್ತು ಮೊದಲ ವಾರ 386 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು ಎರಡನೇ ವಾರ 270 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.  ನಮಗೆ ದಿ ಕಾಶ್ಮೀರ್ ಫೈಲ್ಸ್‌ ಸಿನಿಮಾದಿಂದ ಜೇಮ್ಸ್‌ ಸಿನಿಮಾಗೆ ತೊಂದರೆ ಆಗಿಲ್ಲ. ಈ ವಿಚಾರವಾಗಿ ಮಾಜಿ ಸಿಎಂ ಸಿದ್ಧರಾಮಯ್ಯರನ್ನು ಭೇಟಿ ಮಾಡಿಲ್ಲ ನಾನು ಭೇಟಿ ಮಾಡಿದ್ದು ಜೇಮ್ಸ್ ಸಿನಿಮಾ ನೋಡೋಕೆ ಬನ್ನಿ ಅಂತ ಕರೆಲು' ಎಂದು ನಿರ್ಮಾಪಕ ಕಿಶೋರ್ ಮಾತನಾಡಿದ್ದಾರೆ.

Theatre Fight: ಜೇಮ್ಸ್ ತೆರವಿಗೆ ಆಕ್ರೋಶ, ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ

'ಸಿಎಂ ನಿನ್ನೆ ಕಾಲ್ ಮಾಡಿದ್ರು ಸಮಸ್ಯೆಯನ್ನು ನಿಭಾಯಿಸಿ ಅಂದಿದ್ದಾರೆ. ಸಮಸ್ಯೆ ತಿಳಿದುಕೊಂಡು ನಿರ್ಮಾಪಕರು ಹಾಗೂ ಥಿಯೇಟರ್‌ ಮಾಲೀಕರ ಜೊತೆ ಮಾತನಾಡಿದ್ದೇನೆ. ಎಲ್ಲಾ ಸಮಸ್ಯೆಗಳು ಬಗೆ ಹರಿದಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್‌ ಹಾಕ್ತಿದ್ರು ಈಗ ಅವರ ಜೊತೆ ಮಾತನಾಡಿ ಸಮಸ್ಯೆ ಬಗೆ ಹರಿಸಿದ್ದೀವಿ. ಟಿಪಟೂರು, ಕೊಳ್ಳೆಗಾಲ, ಸೇರಿದಂತೆ ಎಲ್ಲಾ ಭಾಗದ ಚಿತ್ರಮಂದಿರಗಳ ಸಮಸ್ಯೆ ಸರಿಹೋಗಿದೆ. ಎಲ್ಲರೂ ಇದಕ್ಕೆ ಸಹಕಾರ ಕೊಡಬೇಕು.ಶಿವಣ್ಣ ಕೂಡ ಸಿಎಂ ಜೊತೆ ಮಾತನಾಡಿದ್ದಾರೆ.ಇನ್ನು ಮುಂದೆ ಶಿವಣ್ಣ ಯಾವುದೇ ಸಮಸ್ಯೆ ಬಂದ್ರು ಬಗೆ ಹರಿಸುತ್ತಾರೆ.' ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ  ಜಯರಾಜ್‌ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?