ಮಕ್ಕಳಿಗೆ ಎದೆ ಹಾಲು ತುಂಬಾನೇ ಮುಖ್ಯ, ಮಿಲ್ಕ್‌ ಬ್ಯಾಂಕ್‌ ಬಗ್ಗೆ ಸಂದೇಶ ಸಾರಿದ ನಟಿ ರಾಧಿಕಾ ಪಂಡಿತ್!

By Suvarna NewsFirst Published Mar 24, 2022, 1:54 PM IST
Highlights

ಪುಟ್ಟ ಕಂದಮ್ಮಗಳಿಗೆ ಎದೆ ಹಾಲು ಎಷ್ಟು ಮುಖ್ಯವೆಂದು ನಟಿ ರಾಧಿಕಾ ಪಂಡಿತ್ ಮಾತನಾಡಿದ್ದಾರೆ. ಒಳ್ಳೆ ಸಂದೇಶ ಸಾರಲು ವೈದ್ಯರ ಜೊತೆ ಕೈ ಜೋಡಿಸಿದ್ದಾರೆ. 

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ಮದರ್‌ವುಡ್‌ನ ತುಂಬಾನೇ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರು ಮುದ್ದಾದ ಮಕ್ಕಳು, ಐರಾ ಮತ್ತು ಯಥರ್ವ್‌ ಜೊತೆ ದಿನ ಕಳೆಯುತ್ತಾ ಅವರೊಟ್ಟಿಗೆ ಕ್ಲಿಕ್ ಮಾಡಿಕೊಂಡಿರುವ ಮೆಮೊರಬಲ್ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಮಕ್ಕಳ ಆರೋಗ್ಯಕ್ಕೆ ಎದೆಹಾಲು ಎಷ್ಟು ಮುಖ್ಯ, ತಾಯಂದಿರು ಕೈ ಜೋಡಿಸಿದರೆ ಪುಟ್ಟ ಕಂದಮ್ಮಗಳಿಗೆ ಹೇಗೆ ಸಹಾಯವಾಗುತ್ತದೆ ಎಂದು ರಾಧಿಕಾ ವಿಡಿಯೋ ಮಾಡಿದ್ದಾರೆ.

ರಾಧಿಕಾ ಮಾತು:
'ನಮ್ಮ ಜೀವನದಲ್ಲಿ ತುಂಬಾ precious ಗಿಫ್ಟ್‌ಗಳಲ್ಲಿ ಮುಖ್ಯವಾದದ್ದು ಎದೆಹಾಲು. ಎದೆಹಾಲಿನಲ್ಲಿರುವ ಅಂಶಗಳುನ್ನು ಯಾವುದಕ್ಕೂ ಹೋಲಿಸಲಾಗದಯ. ಎಳೆ ಮಕ್ಕಳಿಗೆ ಎದೆ ಹಾಲು ತುಂಬಾನೇ ಮುಖ್ಯವಾಗುತ್ತದೆ ಅದರಲ್ಲಿ ಸಿಗುವಂತೆ ಪೌಷ್ಟಿಕಾಂಶ ಅಥವಾ infection ತಡೆಯುವಂತ ಅಂಶಗಳು it cannot beat anything. ಕೆಲವು ಮಕ್ಕಳಿಗೆ ಅದರಲ್ಲೂ ಪ್ರೀ ಟರ್ಮ್‌ ಮಕ್ಕಳಿಗೆ ಅಥವಾ ಕೆಲವೊಂದು ಸಂದರ್ಭಗಳಲ್ಲಿ ಅಮ್ಮಂದಿರಿಗೆ ಅಷ್ಟು ಹಾಲು ಬರದೆ ಇರಬಹುದು. ಅಂತ ಮಕ್ಕಳಿಗೆ ಸಹಾಯ ಆಗಬೇಕು ಅಂತ ಮಿಲ್ಕ್‌ ಬ್ಯಾಂಕ್ ಶುರು ಮಾಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಇರುವ ತಾಯಂದಿರು ಎದೆಹಾಲನ್ನು ದಾನ ಮಾಡಬಹುದು. ನಿಮ್ಮ ಜಿಲ್ಲೆಗಳಲ್ಲಿ ಈ ಮಿಲ್ಕ್‌ ಬ್ಯಾಂಕ್‌ ಇರುತ್ತದೆ. ಹೊಸ ತಾಯಂದಿರಿಗೆ ಈ ವಿಡಿಯೋ. ಇದೊಂದು ವರ್ಡರ್‌ಫುಲ್‌ ನೊಬೆಲ್ ಉದ್ದೇಶ ಆಗಿರುವ ಕಾರಣ ವೈದ್ಯರು ಮಾರ್ಚ್‌ 27ರಂದು Walkathon ಆಯೋಜಿಸಿದ್ದಾರೆ. ಒಳ್ಳೆ ಉದ್ದೇಶಕ್ಕೆ ಕೈ ಜೋಡಿಸೋಣ' ಎಂದು ರಾಧಿಕಾ ಪಂಡಿತ್ ಮಾತನಾಡಿದ್ದಾರೆ.

ಯಶೋಮಾರ್ಗ ಮೂಲಕ ಯಶ್ ಮತ್ತು ರಾಧಿಕಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ರಾಧಿಕಾ ವೈದ್ಯರ ಜೊತೆ ಕೈ ಜೋಡಿಸಿ ಮಕ್ಕಳ ಆರೋಗ್ಯದ ಬಗ್ಗೆ ನೊಬೆಲ್ ಸಂದೇಶ ಸಾರಲು ಮುಂದಾಗಿದ್ದಾರೆ. 

ಎದೆ ಹಾಲುಣಿಸುವವರು ಈ ಮಿಥ್‌ಗಳನ್ನು ನಂಬಬೇಡಿ

ವಿಶ್ವ ಆರೋಗ್ಯ ಸಂಸ್ಥೆ (WHO - World Health Organisation) ಪ್ರಕಾರ, ಮಗುವು ಕೇವಲ ಆರು ತಿಂಗಳವರೆಗೆ ಮಾತ್ರ ಹಾಲುಣಿಸಬೇಕು. ಇದನ್ನು ಅನುಸರಿಸಿ ಎರಡು ವರ್ಷದ ಹೊತ್ತಿಗೆ ಇತರ ಆಹಾರಗಳೊಂದಿಗೆ ಸ್ತನ್ಯಪಾನ ಮಾಡಬೇಕು. ಮೊದಲ ಆರು ತಿಂಗಳವರೆಗೆ ಮಗುವಿಗೆ ಸ್ತನ್ಯಪಾನ ಅಗತ್ಯ. ಎದೆ ಹಾಲಿನಲ್ಲಿ ಪೋಷಕಾಂಶಗಳು (Nutrients) ಸಮೃದ್ಧವಾಗಿದ್ದು ನವಜಾತ ಶಿಶುವಿನ ಬೆಳವಣಿಗೆ (Growth of Kids) ಮತ್ತು ಪೌಷ್ಠಿಕಾಂಶದ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ತಾಯಿಗೆ ಹೇಗೆ ಲಾಭ ಸಿಗುತ್ತದೆ ಎನ್ನುವ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ. 

ಸೋಂಕನ್ನು ತಡೆಯುತ್ತದೆ (Prevents infection )
ಎದೆ ಹಾಲು ಮಗುವನ್ನು ಸಡಿಲ ಚಲನೆ ಮತ್ತು ಇತರ ಅನೇಕ ರೀತಿಯ ಸೋಂಕುಗಳಿಂದ (Infection) ರಕ್ಷಿಸಲು ಸಹಾಯ ಮಾಡುತ್ತದೆ. ಸ್ತನ್ಯಪಾನವು ಮಗುವಿನ ರೋಗನಿರೋಧಕತೆಯನ್ನು ಬಲಪಡಿಸುತ್ತದೆ, ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಸಂಬಂಧವನ್ನು ಬಲಪಡಿಸುತ್ತದೆ (Build Relationship)
ಸ್ತನ್ಯಪಾನವು ತಾಯಿ (mother) ಮತ್ತು ಅವಳ ಮಗುವಿನ ನಡುವಿನ ಸಂಬಂಧವನ್ನು (Bonding) ಬಲಪಡಿಸುತ್ತದೆ. ಇದರಿಂದ ಭಾವನಾತ್ಮಕವಾಗಿ ಮಗುವಿನ ತಾಯಿಯ ಮೇಲಿನ ವ್ಯಾಮೋಹ ಹೆಚ್ಚುತ್ತದೆ. ಇಬ್ಬರ ನಡುವೆ ಉತ್ತಮ ಭಾಂದವ್ಯ ಬೆಳೆಯುತ್ತದೆ. ಇದರಿಂದ ಪ್ರೀತಿಯೂ (Love) ಹೆಚ್ಚುತ್ತದೆ. 

ಸ್ತನ್ಯಪಾನದಲ್ಲಿ ನೋವು ಸಾಮಾನ್ಯವೇ ? ಎದೆಹಾಲುಣಿಸುವ ತಾಯಂದಿರು ಈ ತಪ್ಪು ಕಲ್ಪನೆ ನಂಬಬೇಡಿ

ತೂಕ ಇಳಿಸಲು ಸಹಾಯಕ (weight lose)
ಗರ್ಭಧಾರಣೆಯ ನಂತರ ತೂಕ ಕಳೆದುಕೊಳ್ಳಲು ಸ್ತನ್ಯಪಾನ ಸಹಾಯಕವಾಗಿದೆ. ಮಾನಸಿಕ ಒತ್ತಡದ (Mentral Stress) ಸಮಸ್ಯೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಆದುದರಿಂದ ಯಾವತ್ತೂ ಮಗುವಿಗೆ ಎದೆ ಹಾಲು ನೀಡುವುದರಿಂದ ದೇಹದ ಆಕಾರ ಕುಗ್ಗುತ್ತದೆ ಎನ್ನುವ ಬಗ್ಗೆ ಯೋಚನೆ ಮಾಡಬೇಡಿ. 

ಒತ್ತಡ ನಿವಾರಣೆಗೆ ಸಹಕಾರಿ (stress relief)
ಸ್ತನ್ಯಪಾನವು ನೈಸರ್ಗಿಕವಾಗಿ ಹಿತವಾದ ಹಾರ್ಮೋನುಗಳಾದ ಆಕ್ಸಿಟೋಸಿನ್ ಮತ್ತು ಪ್ರೊಲ್ಯಾಕ್ಟಿನ್ ಅನ್ನು ಉತ್ಪಾದಿಸುತ್ತದೆ, ಅದು ನರ್ಸಿಂಗ್ ತಾಯಿಯಲ್ಲಿ (Nursing Mother) ಒತ್ತಡ ಕಡಿಮೆ ಮತ್ತು ಧನಾತ್ಮಕ ಭಾವನೆಗಳನ್ನು ಉತ್ತೇಜಿಸುತ್ತದೆ. ಮಾನಸಿಕ ನೆಮ್ಮದಿ ಸಿಗಲು ಇದು ಸಹಾಯ ಮಾಡುತ್ತದೆ. 

click me!