ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್‌ಗೆ ಅರ್ಜಿ ಹಾಕಿದ ಸೆಲೆಬ್ರೆಟಿ!

By Chethan Kumar  |  First Published Jun 7, 2024, 3:55 PM IST

ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ.  ಸೆಲೆಬ್ರೆಟಿ ಜೋಡಿ ಶಾಂತಿನಗರ ಕೋರ್ಟ್‌ನಲ್ಲಿ  ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. 


ಬೆಂಗಳೂರು(ಜೂ.07) ಸೆಲೆಬ್ರೆಟಿಗಳ ಬಾಳಲಿ ಬಿರುಗಾಳಿ ಏಳುತ್ತಿರುವುದು ಹೊಸದೇನಲ್ಲ. ಆದರೆ ಇತ್ತೀಚೆಗೆ ಸೆಲಬ್ರೆಟಿಗಳ ಡಿವೋರ್ಸ್ ಪ್ರಕರಣ ಗಲು ಹೆಚ್ಚಾಗುತ್ತಿದೆ. ಈ ಸಾಲಿಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿ ಎಂದೇ ಖ್ಯಾತಿಗೊಂಡಿರುವ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ ಸೇರಿಕೊಳ್ಳುತ್ತಿದೆ.  ಹೌದು, ಚಂದನ್ ಶೆಟ್ಟಿ ಹಾಗೂ  ಕಿರುತೆರೆ ಸ್ಟಾರ್ ನಿವೇದಿತಾ ಗೌಡಾ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದೀಗ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಾರಾ ಜೋಡಿಯಾಗಿ ಮಿಂಚಿದ್ದ ನಿವೇದಿತಾ ಹಾಗೂ ಚಂದನ್ ವಿಚ್ಚೇದನ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. 

ತಮ್ಮ ಕನ್ನಡ ರ್ಯಾಪ್ ಹಾಡುಗಳು ಮೂಲಕ ಮನೆ ಮಾತಾದ ಚಂದನ್ ಶೆಟ್ಟಿಗೆ ನಿವೇದಿತಾ ಜೊತೆಯಾಗಿದ್ದು ಬಿಗ್ ಬಾಸ್ -5ರಲ್ಲಿ. ಬೊಂಬೆ ಬೊಂಬೆ ಅಂತ ಹಾಡುತ್ತಲ್ಲೇ ಕಿಡ್ಡಿಶ್ ಎನಿಸಿದರೂ, ಪ್ರಬುದ್ಧತೆ ತೋರಿದ ನಿವೇದಿತಾ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಳು. ಇಬ್ಬರೂ ಕೆಲವು ವರ್ಷಗಳ ಕಾದು ಮದುವೆಯಾಗಿದ್ದರೂ. ಮೈಸೂರು ಯುವ ದಸರಾದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು ದೊಡ್ಡ ವಿವಾದವಾಗಿತ್ತು. ನಂತರ ಎಲ್ಲರೂ ಇವರ ಬೆಂಬಲಕ್ಕೆ ನಿಂತು ವಿಷಯವನ್ನು ತಣ್ಣಗಾಗಿಸಿದ್ದರು. ನಂತರ ಮೈಸೂರಲ್ಲಿ ಈ ಜೋಡಿ ಅದ್ಧೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟಿತ್ತು.

Tap to resize

Latest Videos

ಬಿಗ್‌ಬಾಸ್ ಸೀಸನ್ 5ರಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕಾಣಿಸಿಕೊಂಡು ಎಲ್ಲರ ಮನೆ ಮಾತಾಗಿದ್ದರು. ಈ ರಿಯಾಲಿಟಿ ಶೋನಿಂದಲೇ ಇವರ ಪ್ರೀತಿ ಶುರುವಾಗಿತ್ತು. 2019ರ ಮೈಸೂರು ಯುವ ದಸರಾ ವೇದಿಕೆಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪ್ರಪೋಸ್ ಮಾಡಲು ದಸರಾ ವೇದಿಕೆ ಬಳಸಿಕೊಂಡಿರುವುದಕ್ಕೆ ಭಾರಿ ವಿವಾದವಾಗಿತ್ತು.  

ಇನ್ನು ಬಿಡುಗಡೆಯಾಗದ ಕ್ಯಾಂಡಿ ಕ್ರಶ್ ಚಿತ್ರದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡಾ ಒಟ್ಟಿಗೆ ನಟಿಸಿದ್ದಾರೆ. ಹಲವು ಸೂಪರ್ ಹಿಟ್ ಹಾಡು ನೀಡಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡಾ ದಾಂಪತ್ಯ ಜೀವನದ ಶಾಕಿಂಗ್ ನ್ಯೂಸ್ ಅಭಿಮಾನಿಗಳನ್ನೂ ಬೆಚ್ಚಿ ಬೀಳಿಸಿದೆ.

ಇತ್ತೀಚೆಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ವಿಚ್ಚೇದನ ಪಡೆದುಕೊಂಡಿದ್ದಾರೆ ಅನ್ನೋ ಸುದ್ದಿ ಭಾರಿ ಹರಿದಾಡಿತ್ತು. ಆದರೆ ಈ ಕುರಿತು ಸ್ಪಷ್ಟತೆ ಇರಲಿಲ್ಲ. ಇತ್ತೀಚೆಗೆ ಬೆಳವಣಿಗೆಪ್ರಕಾರ ಈ ಜೋಡಿ ವಿಚ್ಚೇದನ ಪಡೆದುಕೊಂಡಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಚಂದನ್ ಶೆಟ್ಟಿ ನಿವೇದಿತಾ ಡಿವೋರ್ಸ್ ಭಾರಿ ಕೋಲಾಹಲ ಸೃಷ್ಟಿಸಿದೆ.

ಹುಟ್ಟುಹಬ್ಬ ಸಂಭ್ರಮದಲ್ಲಿ ನಿವೇದಿತಾ ಗೌಡ: ಗಂಡ ಸರಿ ಇದ್ರೆ ಹೀಗಾಗ್ತಿರಲಿಲ್ಲಾ ಅನ್ನೋದಾ ಫ್ಯಾನ್ಸ್​?

ಸಾಂಸ್ಕೃತಿಕ ನಗರಿ ಮೈಸೂರಿನವರಾದರೂ ನಿವೇದಿತಾ ಗೌಡ ಅವರ ಕನ್ನಡ ಸ್ವಲ್ಪ ವಿಭಿನ್ನವಾಗಿತ್ತು. ಉದ್ದ ಜಡೆ, ಮುದ್ದು ಮುಖ ನೋಡಲು ಥೇಟ್ ಬಾರ್ಬಿ ಗರ್ಲ್‌ನಂತೆ ನಿವೇದಿತಾ ಗೌಡ ಅವರ ನಡೆಯಿಂದ ಬಿಗ್‌ಬಾಸ್‌ನಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಅತ್ತ ತಮ್ಮ ಮಧುರ ಕಂಠ ಹಾಗೂ ಕ್ಷಣ ಮಾತ್ರದಲ್ಲಿ ಹಾಡು ರಚಿಸಿ, ಸಂಗೀತ ಸಂಯೋಜನೆ ಮಾಡೋ ಚಂದನ್‌ಗೆ ಕೈಗೆ ಏನೇ ಸಿಕ್ಕಿದರೂ ತಬಲಾವಾಗುತ್ತಿತ್ತು. ಇಬ್ಬರ ಜೋಡಿ ಪ್ರೇಕ್ಷಕರಿಗೆ ಭರಪೂರ ಮನೋರಂಜನೆ ನೀಡುತ್ತಿತ್ತು. ಇವರಿಬ್ಬರ ಬಗ್ಗೆ ಕುಚ್ ಕುಚ್ ನಡೀತಾ ಇದೆ ಅದೆ ಅಂತ ಹಲವು ಗಾಸಿಪ್ ಇದ್ದರೂ ಈ ಜೋಡಿ ಸಾರ್ವಜನಿಕವಾಗಿ ತಮ್ಮ ಸಂಬಂಧವನ್ನು ಒಪ್ಪಿಕೊಂಡಿರಲಿಲ್ಲ. 

ಆದರೆ, ಮೊನ್ನೆ ಮೊನ್ನೆಯವರೆಗೂ ಒಟ್ಟಿಗೇ ರೀಲ್ ಮಾಡಿ ಪೋಸ್ಟ್ ಮಾಡುತ್ತಿದ್ದ ಈ ಜೋಡಿಗೆ ಇದ್ದಕ್ಕಿದ್ದಂತೆ ಏನಾಯ್ತು ಎನ್ನೋದು ಎಲ್ಲರ ಪ್ರಶ್ನೆ. 

click me!