
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 'ಓಂ' ಸಿನಿಮಾ ಮೊದಲ ಬಾರಿಗೆ ತೆರೆಕಂಡು 29 ವರ್ಷಗಳಾದವು. ಆದರೆ, ಈ ಚಿತ್ರದ ಕ್ರೇಜ್ ಮಾತ್ರ ಸ್ವಲ್ಪವೂ ಕಮ್ಮಿ ಆಗಿಲ್ಲ. ಉಪೇಂದ್ರ ಹಾಗೂ ಮುರಳಿ ಮೋಹನ್ ಎನ್ನುವವರು ಒಂದೇ ಕಾಲೇಜಿನಲ್ಲಿ ಓದ್ತಾ ಇದ್ರು. ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಗೆಳೆಯರೊಬ್ಬರು ಪುರುಷೋತ್ತಮ ಅಂತ ಇದ್ರಂತೆ. ಆ ಪುರುಷೋತ್ತಮ ಎನ್ನುವವರು ಸುಧೀಂದ್ರ-ಉಪೇಂದ್ರರ ಮನೆಗೆ ಆಗಾಗ ಬರುತ್ತಾ ಇದ್ರಂತೆ.
ಈ ಪುರುಷೋತ್ತಮ ಅವರು ಒಂದು ಹುಡುಗಿ ಹಿಂದೆ ಬಿದ್ದು, ಬಳಿಕ ಅಂಡರ್‌ವರ್ಲ್ಡ್ ಗೆ ಎಂಟ್ರಿ ಕೊಡುವ ತಮ್ಮ ನಿಜಜೀವನದ ಕಥೆಯನ್ನು ಉಪೇಂದ್ರ ಅವರ ಬಳಿ ಹಂಚಿಕೊಳ್ತಾ ಇರ್ತಾರೆ. ಪುರುಷೋತ್ತಮನ ಲವ್ ಸ್ಟೋರಿ ವಿಚಿತ್ರವಾಗಿದೆ. ಒಬ್ಬಳು ಹುಡುಗಿ ತನ್ನ ಜೊತೆ ರೌಡಿಯೊಬ್ಬ ಇದ್ದರೆ ಬೇರೆಯವರ ಕಾಟದಿಂದ ಸುಲಭವಾಗಿ ಬಚಾವ್ ಆಗಬಹುದು ಎಂದು ಅವನನ್ನು ಬಳಸಿಕೊಳ್ಳುತ್ತಾ ಇರುತ್ತಾಳೆ. ಅವನು ಅವಳನ್ನು ರಿಯಲ್ ಆಗಿ ಲವ್ ಮಾಡುತ್ತ ಎಂಗೇಜ್‌ಮೆಂಟ್ ವೇಳೆ ಅವರ ಮನೆಯಲ್ಲಿ ಗಲಾಟೆ ಮಾಡುತ್ತಾನೆ.
ನಟ ದರ್ಶನ್ ಪ್ಯಾಲೆಸ್ ಗ್ರೌಂಡ್‌ನಿಂದ ಅಳುತ್ತಾ ಬಂದಿದ್ದೇಕೆ? ಜಿರಾಫೆ ತರ ಇದೀಯ ಅಂದಿದ್ಯಾರು?
ಈ ಎಲ್ಲ ಸಂಗತಿಗಳನ್ನು ಉಪೇಂದ್ರರ ಬಳಿ ಪುರುಷೋತ್ತಮ ಹೇಳಿಕೊಂಡಿದ್ರಂತೆ. ಎಲ್ಲಾ ಸನ್ನಿವೇಶಗಳನ್ನು ಉಪೇಂದ್ರ ಬರೆದು ಇಟ್ಟುಕೊಂಡಿದ್ದರಂತೆ. ಹೀಗೆ ಪುರುಷೋತ್ತಮ ಕಥೆಯನ್ನೇ ಉಪೇಂದ್ರ ಅವರು 'ಓಂ' ಎನ್ನುವ ಹೆಸರಿನಲ್ಲಿ ಸಿನಿಮಾ ಮಾಡಿ ಇತಿಹಾಸ ಸೃಷ್ಟಿಸಿದರು. ಕನ್ನಡ ಸಿನಿರಂಗದಲ್ಲಿ ಓಂ ಸಿನಿಮಾ ಒಂದು ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿಬಿಟ್ಟಿತು. ಅಂದಹಾಗೆ, ಸದ್ಯ ನಟ-ನಿರ್ದೇಶಕ ಉಪೇಂದ್ರ ಅವರು 'ಯು/ಐ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ನಟಿ ಆ ನಟನ ಜೊತೆ ಏನ್ನು ಮಾಡ್ತಿದಾರೆ? ಯಾಕೆ ಅವರಿಬ್ರೂ ಒಟ್ಟಿಗಿದಾರೆ?
ಒಟ್ಟಿನಲ್ಲಿ, ಕನ್ನಡ ಸಿನಿಮರಂಗದಲ್ಲಿ ಉಪೇಂದ್ರ ನಿರ್ದೇಶನದ ಹಲವಾರು ಸಿನಿಮಾಗಳು ಹೊಸ ದಾಖಲೆ ಬರೆದು ನ್ಯೂ ಟ್ರೆಂಡ್ ಸೃಷ್ಟಿಸಿರುವುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಜಗ್ಗೇಶ್ ನಟನೆಯ 'ತರ್ಲೆ ನನ್ಮಗ' ಸಿನಿಮಾ ಮೂಲಕ ಸಿನಿಮಾ ನಿರ್ದೇಶನ ಪ್ರಾರಂಭಿಸಿದ ಉಪೇಂದ್ರ ಅವರು ಓಂ, ಶ್, ಚಿತ್ರಗಳ ಮೂಲಕ ಹೊಸ ದಾಖಲೆ ಬರೆದರು. ಅದಾದ ಬಳಿಕ, ನಿರ್ದೇಶನದ ಜತೆ ನಟನೆಯನ್ನೂ ಮಾಡಿ A, ಉಪೇಂದ್ರ ಮುಂತಾದ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ರೀತಿಯ ಸಿನಿಮಾ ಕೊಟ್ಟರು. ಇದೀಗ ಮುಂಬರುವ 'ಯು/ಐ' ಮೂಲಕ ಇತಿಹಾಸವನ್ನು ಮರುಸೃಷ್ಟಿ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕು.
ಎತ್ತಿನಬಂಡಿಯಿಂದ ಬಿದ್ದು ಸಾಯುತ್ತಿದ್ದರು ಡಾ ರಾಜ್‌ಕುಮಾರ್; ಬದುಕಿಸಿದ ಪುಣ್ಯಾತ್ಮ ಯಾರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.