ನನ್ನ ಮಕ್ಕಳು ಈ ಫಿಲಂ ನೋಡ್ತಾರೆ ಅಂದಿದ್ರು: Puneeth Rajkumar

By Kannadaprabha News  |  First Published Oct 30, 2021, 10:50 AM IST

ಅಮೋಘವರ್ಷ ಜತೆ ನಾಡಿದ್ದು ‘ಗಂಧದ ಗುಡಿ’ ಸಿನಿಮಾ ಘೋಷಿಸಲಿದ್ದ ಅಪ್ಪು  ಕರ್ನಾಟಕದ ಕಾಡು, ವನ್ಯಜೀವಿ, ಪರಿಸರ ಕುರಿತ ವಿಭಿನ್ನ ಸಿನಿಮಾ  ಪಿಆರ್‌ಕೆ ಪ್ರೊಡಕ್ಷನ್‌ಸ್ ಮೂಲಕ ಚಿತ್ರ ನಿರ್ಮಾಣಕ್ಕೆ ಆಹ್ವಾ
 


ನ.1ರ ಕನ್ನಡ ರಾಜ್ಯೋತ್ಸವದಂದು ಪುನೀತ್ ಹಾಗೂ ವೈಲ್‌ಡ್ಲೈಫ್ ಚಿತ್ರ ನಿರ್ದೇಶಕ ಅಮೋಘವರ್ಷ ಅವರ ‘ಗಂಧದ ಗುಡಿ’ ಸಿನಿಮಾದ ಘೋಷಣೆ ಆಗಬೇಕಿತ್ತು. ಈ ಹಿನ್ನೆಲೆಯಲ್ಲಿ ಪುನೀತ್ ಸಾವಿಗೂ ಹಿಂದಿನ ದಿನವಷ್ಟೇ ಬೆಂಗಳೂರಿನ ಗಾಂಧಿನಗರದ ವಜ್ರೇಶ್ವರಿ ಕಂಬೈನ್‌ಸ್ನ ಆಫೀಸ್‌ನಲ್ಲಿ ಅಮೋಘವರ್ಷ, ಪುನೀತ್ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಭೇಟಿಯಾಗಿದ್ದರು. ಸಿನಿಮಾ ಬಗೆಗೆ ಡಿಸ್ಕಶನ್ ಮಾಡಿ ಅಲ್ಲೇ ಮೂವರೂ ಊಟ ಮಾಡಿದ್ದರು. ಸಿನಿಮಾ ಘೋಷಣೆ ಹೇಗಿರಬೇಕು, ಬಿಡುಗಡೆ ಯಾವಾಗ ಮಾಡಬೇಕು ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು.

ಕನ್ನಡ ಸಿನಿಮಾ ರಂಗದ ಫ್ಯಾಮಿಲಿ ಸ್ಟಾರ್‌ ಪುನೀತ್‌

‘ಗಂಧದ ಗುಡಿ’ ಸಿನಿಮಾದ ನೆವದಲ್ಲಿ ಕರ್ನಾಟಕದ ಕಾಡುಗಳಿಗೆ ಪುನೀತ್ ಅವರನ್ನು ಕರೆದುಕೊಂಡು ಹೋಗಿ ಸುತ್ತಿಸಿದ್ದರು ಅಮೋಘವರ್ಷ. ‘ಅವರು ಯಾವಾಗಲೂ ಕರ್ನಾಟಕವನ್ನು ಬೇರೆ ಥರ ನೋಡಬೇಕು ಎಂದೇ ಹೇಳುತ್ತಿದ್ದರು. ಅಂಥವರಿಗೆ ಕರ್ನಾಟಕದ ಕಾಡುಗಳನ್ನು ಪರಿಚಯಿಸುವ ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ’ ಎಂಬುದು ಅಮೋಘವರ್ಷ ಆಪ್ತರ ಬಳಿ ಹೇಳಿದ್ದ ಮಾತು. ‘ನನ್ನ ಮಕ್ಕಳು ನನ್ನ ಸಿನಿಮಾವನ್ನು ಅಷ್ಟಾಗಿ ನೋಡಲ್ಲ. ಆದರೆ ಈ ಸಿನಿಮಾ ವೈಲ್‌ಡ್ಲೈಫ್‌ಗೆ ಸಂಬಂಧಿಸಿದ್ದು. ವನ್ಯಜೀವಿ, ಪರಿಸರ ಸಂರಕ್ಷಣೆಯ ಆ್ಯಂಗಲ್ ನಲ್ಲಿರುವಂಥಾದ್ದು. ಹೀಗಾಗಿ ಫೈನಲಿ ನನ್ನ ಮಕ್ಕಳು ನನ್ನ ಈ ಸಿನಿಮಾ ನೋಡ್ತಾರೆ ಸಾರ್’ ಅಂತ ಪುನೀತ್ ಅವರು ಅಮೋಘವರ್ಷ ಅವರ ಬಳಿ ಮನದಿಂಗಿತ ಹಂಚಿಕೊಂಡಿದ್ದರು. ಕಮರ್ಶಿಯಲ್ ಆ್ಯಂಗಲ್‌ಗಿಂತ ಭಿನ್ನವಾದ ಚಿತ್ರವಾಗಿರುವುದು, ಅಮೋಘವರ್ಷ ಅವರಂಥ ಅಂತಾರಾಷ್ಟ್ರೀಯ ಮಟ್ಟದ ವೈಲ್‌ಡ್ಲೈಫ್ ಫೊಟೋಗ್ರಾಫರ್ ಕಂ ನಿರ್ದೇಶಕ ಈ ಸಿನಿಮಾ ನಿರ್ದೇಶಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿತ್ತು.

Latest Videos

undefined

ಅಮೋಘವರ್ಷ ಅವರ ‘ವೈಲ್‌ಡ್ ಕರ್ನಾಟಕ’ ಸಿನಿಮಾ ನೋಡಿ ಮೆಚ್ಚಿ ತನ್ನ ಪಿಆರ್‌ಕೆ ಪ್ರೊಡಕ್ಷನ್‌ಸ್ ಮೂಲಕವೇ ಹೊಸ ಸಿನಿಮಾ ಮಾಡಲು ಪುನೀತ್ ಅವರನ್ನು ಆಹ್ವಾನಿಸಿದ್ದರು. ಈ ಸಿನಿಮಾ ಘೋಷಣೆಯ ಬಗ್ಗೆ ‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದರು. ಇದೀಗ ಸಿನಿಮಾ ಘೋಷಣೆಗೂ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದಾರೆ. 

ನಾನು ಎತ್ತಿ ಆಡಿಸಿದ ಮಗು ಪುನೀತ್‌: ಜಯಮಾಲಾ, ಹಿರಿಯ ನಟಿ

ನಾನು ‘ಪ್ರೇಮದ ಕಾಣಿಕೆ’ ಸಿನಿಮಾ ಒಪ್ಪಿಕೊಂಡಾಗ ಪಾರ್ವತಮ್ಮ ಅವರು ಗರ್ಭಿಣಿಯಾಗಿದ್ದರು. ಈ ಸಮಯದಲ್ಲಿ ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣವನ್ನು ಮದ್ರಾಸ್‌ನಲ್ಲಿ ಮಾಡಿದ್ದೆವು. ಮುಂದಿನ ಚಿತ್ರೀಕರಣಕ್ಕೆ ಶಿಮ್ಲಾಗೆ ಹೋದಾಗ ಪಾರ್ವತಮ್ಮ ನಮ್ಮೊಂದಿಗೆ ಬರಲಿಲ್ಲ. ಸಿನಿಮಾ ಚಿತ್ರೀಕರಣ ನಡೆಯುವಾಗ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿತ್ರೀಕರಣ ಮುಗಿಸಿಕೊಂಡು ಹಿಂದಿರುಗಿದ ಇಡೀ ಚಿತ್ರತಂಡ ಅಮ್ಮನನ್ನು ನೋಡಲು ಆಸ್ಪತ್ರೆಗೆ ಹೋದೆವು. ಆಗ ಹುಟ್ಟಿದ ಮಗು ಪುನೀತ್‌.

ಮಿಸ್ ಮಾಡದೆ ನೋಡಲೇ ಬೇಕು Puneeth Rajkumar ನಟನೆಯ ಈ ಟಾಪ್‌ 13 ಸಿನಿಮಾ

ಅವನು ಎಲ್ಲರಿಗೂ ಬೇಕಾಗುವ ಮಗುವಾಗಿದ್ದ. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಮಗುವಿಗೆ ಹಾಲು ಕುಡಿಸಿದ ನಂತರ ಪಾರ್ವತಮ್ಮ ಅವರು, ರಾಜ್‌ಕುಮಾರ್‌ ಅವರ ಕೊಠಡಿಯ ಪಕ್ಕದಲ್ಲೇ ಇದ್ದ ನನ್ನ ಬಳಿ ಮಗುವನ್ನು ಬಿಟ್ಟು ಹೋಗುತ್ತಿದ್ದರು. ಅವನು ಮುದ್ದಾದ ಮಗು, ಅವನಿಗೆ ನಾನು ಸ್ನಾನ ಮಾಡಿಸಿದ್ದೆ. ಎಲ್ಲರೊಂದಿಗೂ ವಿನಯದಿಂದ ನಡೆದುಕೊಳ್ಳುತ್ತಿದ್ದ. ಕೊನೆಯವರೆಗೂ ಹಾಗೇ ಇದ್ದ. ದೊಡ್ಡ ನಟನಾಗಿ ಇಷ್ಟುಎತ್ತರಕ್ಕೆ ಏರಿದರೂ ಒಂಚೂರು ಅಹಂ ಬರಲಿಲ್ಲ. ಇವತ್ತು ವಿಷಯ ತಿಳಿದ ಕೂಡಲೇ ತುಂಬಾ ಆಘಾತವಾಯಿತು. ದೇವರ ಮೇಲೆ ತುಂಬಾ ಕೋಪಾ ಬಂತು. ದೇವರು ಎಷ್ಟುಕ್ರೂರಿ ಎನ್ನಿಸಿದೆ. ಕೊನೆಯದಾಗಿ ನಾನು ಅಪ್ಪುವನ್ನು ಮಾತಾಡಿಸಿದ್ದು ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಸರೋಜಾದೇವಿ ಅವರ ಮೊಮ್ಮಗನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ. ಯಾವಾಗ ಸಿಕ್ಕಿದರೂ ಆಂಟಿ ಮನೆಗೆ ಬನ್ನಿ ಎಂದು ಪ್ರೀತಿಯಿಂದ ಕರೆಯುತ್ತಿದ್ದ. ಬಾಲ್ಯದಲ್ಲಿ ಅವನನ್ನು ಎತ್ತಿಕೊಂಡಾಗ ಇದ್ದ ದೃಷ್ಟಿಯೇ ಕೊನೆವರೆಗೂ ಅವನಲ್ಲಿ ಇತ್ತು.

click me!