* ‘ಅಪ್ಪು’ ಮೂಲಕ ಹೀರೋ ಆಗಿ ಚಿತ್ರರಂಗ ಪ್ರವೇಶಿಸಿದ ಪುನೀತ್
* ಮಕ್ಕಳ ಪಾಲಿನ ನೆಚ್ಚಿನ ಸ್ಟಾರ್
* ‘ಯುವರತ್ನ’ ಕೊನೆಯ ಸಿನಿಮಾ
ಬೆಂಗಳೂರು(ಅ.30): ಬಾಲನಟರಾಗಿ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಪುನೀತ್(Puneeth Rajkumar) ಪೂರ್ಣಪ್ರಮಾಣದ ನಾಯಕರಾದದ್ದು ತಮ್ಮ 27ನೇ ವಯಸ್ಸಿಗೆ. ಮೊದಲ ಚಿತ್ರ ಅಪ್ಪು. ಅದರ ನಿರ್ದೇಶನಕ್ಕೆ ಅಪ್ಪು ಸ್ವತಃ ಆರಿಸಿಕೊಂಡದ್ದು ತೆಲುಗು ನಿರ್ದೇಶಕ ಪೂರಿ ಜಗನ್ನಾಥ್‌ಅವರನ್ನು. ಈ ಚಿತ್ರ ಹಲವು ಚಿತ್ರಮಂದಿರಗಳಲ್ಲಿ ಸತತವಾಗಿ 200 ದಿನ ಪ್ರದರ್ಶನ ಕಂಡಿದ್ದಷ್ಟೇ ಅಲ್ಲ, ತೆಲುಗು, ತಮಿಳು, ಬೆಂಗಾಲಿ ಭಾಷೆಗಳಲ್ಲಿ ಮರುನಿರ್ಮಾಣಗೊಂಡಿತು. ಒಂದೇ ಚಿತ್ರದಲ್ಲಿ ಪುನೀತ್‘ಸ್ಟಾರ್’ ಆಗಿಬಿಟ್ಟರು. ಈ ಚಿತ್ರದ ಮೂಲಕ ರಕ್ಷಿತಾ ಕೂಡ ಚಿತ್ರರಂಗಕ್ಕೆ ಕಾಲಿಟ್ಟರು.
ಪುನೀತ್‌ಎರಡನೆಯ ಚಿತ್ರವನ್ನು ನಿರ್ದೇಶಿಸಿದ್ದು ನಿರ್ದೇಶಕ ದಿನೇಶ್‌ಬಾಬು(Dinesh Babu). ಆ ಚಿತ್ರವೂ ಭರ್ಜರಿ ಯಶಸ್ಸು ಕಂಡಿತು. ತಮ್ಮ ನಟನೆ ಮತ್ತು ಹೊಡೆದಾಟದ ದೃಶ್ಯಗಳಿಂದಾಗಿ ಪುನೀತ್‌ಆ ಚಿತ್ರದಲ್ಲೂ ಪ್ರೇಕ್ಷಕರಿಗೆ ಆಪ್ತರಾದರು. ನಂತರದ ದಿನಗಳಲ್ಲಿ ಅವರು ಹೊಡೆದಾಟಗಳೇ ಪ್ರಧಾನವಾದ ಅನೇಕ ಚಿತ್ರಗಳಲ್ಲಿ ನಟಿಸಿದರು. ತೆಲುಗಿನ ರೀಮೇಕ್‌ಸಿನಿಮಾಗಳಲ್ಲೂ(Remake Movie) ಕಾಣಿಸಿಕೊಂಡರು.
‘ಮಿಲನ’ ಚಿತ್ರದಿಂದ ಪುನೀತ್‌ಅವರ ಇಮೇಜ್‌ಬದಲಾಯಿತು. ಹೊಡೆದಾಟದ ಚಿತ್ರಗಳಿಂದ ಭಾವಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡು ಹೊಸ ಬಗೆಯ ಪ್ರೇಕ್ಷಕರನ್ನು ಗಳಿಸಿಕೊಳ್ಳಲು ‘ಮಿಲನ’ ಚಿತ್ರ ಕಾರಣವಾಯಿತು. ನಂತರದ ದಿನಗಳಲ್ಲಿ ವಂಶಿ, ನಿನ್ನಿಂದಲೇ, ಮೈತ್ರಿ, ರಾಜಕುಮಾರ- ಮುಂತಾದ ಚಿತ್ರಗಳಲ್ಲಿ ಪುನೀತ್‌ಕಾಣಿಸಿಕೊಂಡು ಮಾಗಿದ ಪ್ರೇಕ್ಷಕರ(Audience) ಮೆಚ್ಚುಗೆಗೂ ಪಾತ್ರರಾದರು.
ಬಾನದಾರಿಯಲ್ಲಿ ಜಾರಿ ಹೋದ ಕರುನಾಡ ಯುವರಾಜಕುಮಾರ
ಈ ಅವಧಿಯಲ್ಲೇ ಪುನೀತ್‌ತಮ್ಮ ತಂದೆ ರಾಜ್‌ಕುಮಾರ್‌ಶೈಲಿಯಲ್ಲಿ ರೂಪುಗೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವೂ ಪ್ರೇಕ್ಷಕರಿಂದ ಬಂತು. ಇಂಥ ಚಿತ್ರಗಳ ನಡುವೆಯೇ ಪುನೀತ್‌ಅಂಜನೀಪುತ್ರ, ಜಾಕಿ, ಅಣ್ಣಾ ಬಾಂಡ್, ದೊಡ್ಮನೆ ಹುಡ್ಗ, ರಣವಿಕ್ರಮ, ನಟಸಾರ್ವಭೌಮ, ಚಕ್ರವ್ಯೂಹ, ಪವರ್‌ಮುಂತಾದ ಸಾಹಸಮಯ ಚಿತ್ರಗಳಲ್ಲೂ ನಟಿಸಿದರು,
ಪುನೀತ್‌ಮಕ್ಕಳ ಪಾಲಿನ ಪರಮಾತ್ಮ ಎಂದೇ ಕರೆಸಿಕೊಂಡವರು. ಅವರ ತಮಾಷೆ, ರಂಜನೆ, ಕಥೆಯ ಆಯ್ಕೆ, ಅಭಿನಯ ಎಲ್ಲವೂ ಸೇರಿ ಅವರನ್ನು ಫ್ಯಾಮಿಲಿ ಸ್ಟಾರ್‌ಎಂಬ ವಿಭಾಗಕ್ಕೆ ಸೇರಿಸಿತ್ತು. ಮಕ್ಕಳು ಪುನೀತ್‌ಸಿನಿಮಾಗಳನ್ನು ನೋಡಲು ಹಾತೊರೆಯುತ್ತಿದ್ದರು. ಹೊಡೆದಾಟ ಮತ್ತು ರಕ್ತಪಾತದ ಸಿನಿಮಾಗಳ ನಡುವೆ ಕುಟುಂಬ ಸಮೇತ ನೋಡುವಂಥ ಚಿತ್ರಗಳೆಂದು ಪುನೀತ್‌ಸಿನಿಮಾಗಳು ಮನೆಮಾತಾಗಿದ್ದವು. ನಾಯಕ ನಟರಾಗಿ ಒಟ್ಟು 30 ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ಪುನೀತ್ ಕ್ರಮೇಣ ಪಾತ್ರಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸತೊಡಗಿದ್ದರು. ತಮ್ಮ ಎಂದಿನ ಶೈಲಿಯ ಚಿತ್ರಗಳಿಂದ ಅವರು ಬೇರೆ ರೀತಿಯ ಸಿನಿಮಾಗಳತ್ತ ಹೊರಳಿಕೊಳ್ಳುವ ಪ್ರಯತ್ನವಾಗಿ ಪವನ್‌ಕುಮಾರ್‌ನಿರ್ದೇಶನದ ದ್ವಿತ್ವ, ರಿಷಭ್‌ಶೆಟ್ಟಿ ನಿರ್ದೇಶನದ ಚಿತ್ರ, ದಿನಕರ್‌ತೂಗುದೀಪ ನಿರ್ದೇಶನದ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು.
ಪುನೀತ್‌ಅವರು ನಟಿಸಿದ ಸಿನಿಮಾಗಳ ಪೈಕಿ ಬಿಡುಗಡೆಯಾದ ಕೊನೆಯ ಸಿನಿಮಾ ಯುವರತ್ನ. ಈ ಚಿತ್ರ ಕೊರೋನಾ ನಂತರದ ದಿನಗಳಲ್ಲಿ ಚಿತ್ರಮಂದಿರಕ್ಕೆ ಬಂದಿತ್ತು. ಚಿತ್ರ ಬಿಡುಗಡೆಯಾದ ನಂತರ ವೀಕೆಂಡ್‌ಲಾಕ್‌ಡೌನ್‌ಹೊಡೆತ ತಾಳಲಾರದೆ, ಓಟಿಟಿ(OTT) ಫ್ಲಾಟ್‌ಫಾಮ್‌ರ್‍ನಲ್ಲಿ ಬಿಡುಗಡೆಯಾಗಿತ್ತು. ಅವರು ನಟಿಸಿರುವ, ಆದರೆ ಬಿಡುಗಡೆಗೆ(Release) ಕಾದಿರುವ ಚಿತ್ರ ಜೇಮ್ಸ್. ಪುನೀತ್‌ಅತೀವ ನಿರೀಕ್ಷೆ ಇಟ್ಟುಕೊಂಡ ಸಿನಿಮಾ ಅದು.