ಕಾಟೇರ ಚಿತ್ರದ ಬಗ್ಗೆ ಮಾತನಾಡಿದ ಉಮಾಪತಿ ಶ್ರೀನಿವಾಸ್. ಕಲೆಕ್ಷನ್ ಬಗ್ಗೆ ರಾಕ್‌ಲೈನ್ ಸರ್ ಹೇಳಬೇಕು ಅಂದಿದ್ದು ಯಾಕೆ?
ತರುಣ್ ಸುಧೀರ್ ನಿರ್ದೇಶನಕ ಕಾಟೇರ ಸಿನಿಮಾ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿದೆ. ಕಥೆ, ಚಿತ್ರಕಥೆ ಮತ್ತು ನಟನೆ ಸೂಪರ್ ಎಂದು ನಟ ದರ್ಶನ್ ಮತ್ತು ನಟಿ ಆರಾಧನಾ ರಾಮ್‌ನ ಮೆಚ್ಚಿ ಕೊಂಡಾಡುತ್ತಿದ್ದಾರೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿರುವ ಕಾಟೇರ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ. ಕೆಲವು ದಿನಗಳಲ್ಲಿ ಪರಭಾಷೆಗಳಲ್ಲೂ ಡಬ್ ಆಗುವ ಸಾಧ್ಯತೆಗಳು ಹೆಚ್ಚಿದೆ ಏಕೆಂದರೆ ವಿದೇಶದಲ್ಲೂ ಕಾಟೇರ ಹಾವಳಿ ಜೋರಾಗಿದೆ.
ತರುಣ್ ಸುಧೀರ್ ಈ ಹಿಂದೆ ರಾಬರ್ಟ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದರು, ದರ್ಶನ್ ನಟಿಸಿದ್ದರು. ಈಗ ತರುಣ್ ಬರೆದಿರುವ ಕಾಟೇರ ಚಿತ್ರದಲ್ಲಿ ದರ್ಶನ್ ಇದ್ದಾರೆ, ಉಮಾಪತಿ ಜಾಗದಲ್ಲಿ ರಾಕ್‌ಲೈನ್ ಇದ್ದಾರೆ. ಇಲ್ಲಿ ಟ್ವಿಸ್ಟ್ ಏನೆಂದರೆ ಕಾಟೇರ ಚಿತ್ರವನ್ನು ನಾನೇ ಬರೆಸಿದ್ದು ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ.
200 ಕೋಟಿ ರೂ. ಗಳಿಕೆಯತ್ತ ಕಾಟೇರ; ದಚ್ಚು ಅಭಿಮಾನಿಗಳು ಫುಲ್ ಖುಷ್
'ಕಾಟೇರ ಸಿನಿಮಾ ಕಥೆಯನ್ನು ಬರೆಸಿದವನು ನಾನು. ತೆರೆ ಮೇಲೆ ಸಿನಿಮಾ ಚೆನ್ನಾಗಿ ಬಂದಿದೆ. ನನಗೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ ಏಕೆಂದರೆ ಮಕ್ಕಳಿಗೆ ಪರೀಕ್ಷೆ ಇತ್ತು. ಹೋಗಲಿಲ್ಲ. ಕಾಟೇರ ಅನ್ನೊ ಟೈಟಲ್ ಇಟ್ಟವನು ನಾನು ಅಲ್ಲದೆ ಕಥೆ ಬರೆಸಿದವನು ನಾನೇ. ಯಾರಿಗೆ ಏನು ಧಕ್ಕಬೇಕು ಎಂದು ಇರುತ್ತದೆ ಅದು ಧಕ್ಕುತ್ತದೆ. ನನ್ನ ಖುಷಿ ಏನೆಂದರೆ ನನ್ನ ಜಡ್ಜ್‌ಮೆಂಟ್ ಎಲ್ಲೂ ತಪ್ಪಾಗಿಲ್ಲ. ಸಿನಿಮಾ ನಿರ್ಮಾಪಕನಾಗಿ ಒಳ್ಳೆ ಕಥೆಯನ್ನು ಆಯ್ಕೆ ಮಾಡಿದ ಖುಷಿ ನನಗಿದೆ. ರಾಬರ್ಟ್ ರಿಲೀಸ್‌ಗೂ ಮುನ್ನವೇ ಕಾಟೇರ ಸಿನಿಮಾ ಬರೆಸಿದ್ದೆ. ರಾಕ್‌ಲೈನ್ ಸರ್ ಅಂದ್ರೆ ಪ್ರೀತಿ ಇದೆ. ಅವರ ಬ್ಯಾನರ್ ಸಿನಿಮಾ ಅಂದ್ರೆ ನನ್ನ ಬ್ಯಾನರ್ ಸಿನಿಮಾನೇ' ಎಂದು ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯುಟ್ಯೂಬ್ ಚಾನೆಲ್‌ನಲ್ಲಿ ಉಮಾಪತಿ ಮಾತನಾಡಿದ್ದಾರೆ.
ನಾನು ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವೇ!; 'ಕಾಟೇರ' ಚಿತ್ರದ ಬಗ್ಗೆ ಸುದೀಪ್ ಗೊಂದಲದ ಹೇಳಿಕೆ!
'ಕಾಟೇರ ಕಲೆಕ್ಷನ್ ಬಗ್ಗೆ ಮಾತನಾಡುವಾಗ ನಾನು ನಿರ್ಮಾಪಕರ ದೃಷ್ಟಿಕೋನದಲ್ಲಿ ನೋಡುತ್ತೀನಿ. ಏಕೆಂದರೆ ಈಗಲೂ ನನ್ನ ಇನ್‌ಕಮ್ ಟ್ಯಾನ್ಸ್ ಕೇಸ್ ನಡೆಯುತ್ತಿದೆ. ಯಾರು 200, 300 ಕೋಟಿ ಅಂತೆಲ್ಲಾ ಹಾಕ್ತಾರಲ್ಲ ನನ್ನ ಅಕೌಂಟ್ ಸಹ ಫ್ರೀಜ್ ಆಗಿದೆ. ಈ ವಿಚಾರವಾಗಿ ಕೊರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಹಾಗಾಗಿ ಕಲೆಕ್ಷನ್ ಬಗ್ಗೆ ರಾಕ್‌ಲೈನ್ ಸರ್ ಹೇಳಬೇಕು. 200 ಅಲ್ಲ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿ ಎಂದು ನಾನು ಬಯಸುತ್ತೇನೆ. ಯಾಕೆಂದರೆ ಆ ತಾಖತ್ತು ಆ ಚಿತ್ರಕ್ಕೆ ಇದೆ. ಕೋಟಿಗಳ ಬಗ್ಗೆ ನಾನು ಮಾತನಾಡುವುದಿಲ್ಲ.