ಪತಿ ಎದುರೇ ಪತ್ನಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಸ್ನೇಹಿತ್ ಜಗದೀಶ್; ಏನಿದು ಜಾಗ್ವರ್ ಜಗಳ?

Published : Sep 30, 2022, 11:21 AM ISTUpdated : Sep 30, 2022, 05:29 PM IST
ಪತಿ ಎದುರೇ ಪತ್ನಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಸ್ನೇಹಿತ್ ಜಗದೀಶ್; ಏನಿದು ಜಾಗ್ವರ್ ಜಗಳ?

ಸಾರಾಂಶ

ಖ್ಯಾತ ನಿರ್ಮಾಪಕನ ಪುತ್ರನಿಂದ ಬಿಗ್ ಕಿರಿಕ್. ಮಗ ತಪ್ಪು ಮಾಡಿದ್ರೂ ಕ್ಯಾರೆ ಅನ್ನದ ತಂದೆ...ಏನಿದು ಹೈ ಡ್ರಾಮಾ....

ಕನ್ನಡ ಚಿತ್ರರಂಗ ಖ್ಯಾತ ನಿರ್ಮಾಪಕ ಕಮ್ ಉದ್ಯಮಿ ಆಗಿರುವ ಜಗದೀಶ್ ಪುತ್ರ ಸ್ನೇಹಿತ್ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಗ ಏನೇ ತಪ್ಪು ಮಾಡಿದ್ದರೂ ತಂದೆ ಕ್ಯಾರೆ ಅನ್ನುವುದಿಲ್ಲ ತಿದ್ದುವುದಿಲ್ಲ. ಸಹಚರರೊಂದಿಗೆ ಮನೆವರೆಗೂ ದಂಪತಿಗಳನ್ನು ಫಾಲೋ ಮಾಡಿ ಧಮಕಿ ಹಾಕಿದ್ದಾರೆ ಎನ್ನಲಾಗಿದೆ. 

ಭಾರತಕ್ಕೆ ಯಾವುದೇ ಐಷಾರಾಮಿ ಕಾರು ಬಂದರೂ ಮೊದಲು ಖರೀದಿಸುವ ಜಗದೀಶ್ ಕುಟುಂಬಕ್ಕೆ ಶ್ರೀಮಂತಿಕೆ ಅಮಲು ಹೆಚ್ಚಾಗಿದೆ. ಜಗದೀಶ್ ಪುತ್ರ ಸ್ನೇಹಿತ್ ಅಪ್ಪು ಪಪ್ಪು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸ್ನೇಹಿತ್ ಎಲ್ಲೇ ಹೋದರೂ ಮೂರ್ನಾಲ್ಕು ಸಹಚರರು ಜೊತೆಗಿರುತ್ತಾರೆ, ಸ್ನೇಹಿತ್‌ಗಿಂದ ಅವರ ದರ್ಪವೇ ಹಚ್ಚು ಎನ್ನುವ ಮಾತುಗಳು ಕೇಳಿ ಬಂದಿದೆ. 

ಬಂಧನ ಭೀತಿ: ನಿರೀಕ್ಷಣಾ ಜಾಮೀನು ಮೊರೆ ಹೋದ ಸ್ನೇಹಿತ್ ಜಗದೀಶ್

ಸ್ನೇಹಿತ್‌ ಮತ್ತು ಸಹಚರು ಜಾಗ್ವಾರ್ ಕಾರಿನಲ್ಲಿ ಚಲಿಸುವಾಗ ಮತ್ತೊಂದು ಕಾರು ಎದುರಿಗೆ ಬಂದಿದೆ. ದಂಪತಿ ಅನ್ನಪೂರ್ಣ ಮತ್ತು ರಜತ್ ಗೌಡ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ. ಈ ರೀತಿ ಮಾತನಾಡುವುದು ತಪ್ಪು ಎಂದು ಪ್ರಶ್ನೆ ಮಾಡಿದಕ್ಕೆ ಈ ದಂಪತಿಗಳನ್ನು ಕಾರಿನಲ್ಲಿ ಹಿಂಬಾಲಿಸಿ ಮನೆ ಮುಂದೆ ಹೈ ಡ್ರಾಮಾ ಮಾಡಿದ್ದಾರೆ. ಪತಿ ಎದುರೇ ಅನ್ನಪೂರ್ಣ ಅವರಿಗೆ ಸೀರೆ ಬಿಚ್ಚಿ ಹೊಡಿತಿನಿ ,ರೇಪ್ ಮಾಡ್ತಿನಿ ಎಂದು ಅವಾಜ್ ಹಾಕಿದ್ದಾನೆ. ಸ್ನೇಹಿತ್ ಅಸಭ್ಯ ವರ್ತನೆಯಿಂದ ಗಾಬರಿಗೊಂಡು ದಂಪತಿಗಳು ಮಹಾಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕಂಡ ಕಂಡ ಮಹಿಳೆಯರ ಜೊತೆ ಸ್ನೇಹಿತ್ ಕಿರಕ್ ತೆಗೆದು ಅತ್ಯಾಚಾರ ಮಾಡ್ತೀನಿ ಎಂದು ಅವಾಜ್ ಹಾಕುತ್ತಿದ್ದಾನೆ. ಈ ಹಿಂದೆ ಅಕ್ಕ ಪಕ್ಕದ ಮನೆಯವರ ಜೊತೆ ದೊಡ್ಡ ಜಗಳವಾದರೂ ಸ್ನೇಹಿತೆಗೆ ಬುದ್ಧಿ ಬಂದಿಲ್ಲ. ಅಪ್ಪನ ಶ್ರೀಮಂತಿಕೆಯಲ್ಲಿ ಪೋಲಿ ಬಿದ್ದಿರುವ ಸ್ನೇಹಿತ್ ಶಿಕ್ಷೆ ಆಗಬೇಕು ಬುದ್ಧಿ ಕಲಿಯಬೇಕು ಎನ್ನುತ್ತಿದ್ದಾರೆ. ಈ ಹಿಂದೆ ಮಾಡಿಕೊಂಡಿದ್ದ ಕಿರಿಕ್‌ಗೆ ಖ್ಯಾತ ನಿರ್ಮಾಪಕನ ಮಧ್ಯಸ್ಥಿಕೆಯಲ್ಲಿ ಕೇಸ್ ಸಾಲ್ವ್ ಆಗಿತ್ತು ಆದರೀಗ ಈತನ ಮೇಲಿರೋದು ಅಸಭ್ಯ ವರ್ತನೆ , ಹಲ್ಲೆ  ಸೇರಿ ಹಲವು ಪ್ರಕರಣಗಳು.

ಸ್ನೇಹಿತ್ ಮಾಡುವ ಪುಂಡಾಟಗಳಿಗೆ ಸಹಚರರು ಸಾಥ್ ಕೊಡುತ್ತಿದ್ದಾರೆ. ಮಹಿಳೆ ಕಾರಿನಲ್ಲಿ ಕುಳಿತುಕೊಂಡು ಪ್ರಶ್ನೆ ಮಾಡಿದಕ್ಕೆ ಸಹಚರರ ಕಾರಿನಿಂದ ಅನ್ನಪೂರ್ಣರನ್ನು ಎಳೆದು ಹಲ್ಲೆ ಮಾಡಿದ್ದಾರೆ. ಜೀವ ಬೆದರಿಕೆ ಇದೆ ಎಂದು ದಂಪತಿಗಳು ದೂರು ನೀಡಿದ್ದಾರೆ.

ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಕೇಸ್: ಪೊಲೀಸರಿಗೆ ಕಮಿಷನರ್ ಖಡಕ್ ಸೂಚನೆ

ಹಿಂದಿನ ಕಿರಿಕ್:

ಸ್ನೇಹಿತ್ ಜಗದೀಶ್ ಅಕ್ಟೋಬರ್ 23ರಂದು ಇಬ್ಬರು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪಕ್ಕದ ಮನೆಯ ಕೆಲಸದವರು ಮೇಲೆ ಬಾಡಿಗಾರ್ಡ್‌ಗಳ ಜೊತೆ ಸೇರಿಕೊಂಡು ಸ್ನೇಹಿತ್ ಹಲ್ಲೆ ನಡೆದಿದ್ದಾನೆ ಎಂಬ ಆರೋಪವಿತ್ತು. ಐಪಿಸಿ ಸೆಕ್ಷನ್ 354 - ಮಹಿಳೆ ಗೌರವಕ್ಕೆ ಧಕ್ಕೆ ಸೆಕ್ಷನ್ 323- ಕೈಯಿಂದ ಹಲ್ಲೆ ಮನಡೆಸುವುದು, ಐಪಿಸಿ ಸೆಕ್ಷನ್ 448 ಅತಿಕ್ರಮಣ ಪ್ರವೇಶ, 506 ಜೀವ ಬೆದತಿಕೆ ಆರೋಪದಡಿ ಸ್ನೇಹಿತ್ ಮತ್ತು 7 ಮಂದಿ ಸಹಚರರ ವಿರುದ್ಧ ದೂರು ದಾಖಲಾಗಿದೆ. 

ಈ ವಿಚಾರದಲ್ಲಿ ಮೂರ್ನಾಲ್ಕು ಸಿಸಿಟಿ ದೃಶ್ಯಗಳು ವೈರಲ್ ಆಗಿತ್ತು. ಸ್ನೇಹಿತ್ ತಾಯಿ ರೇಖಾ ಜಗದೀಶ್, ದೊಡ್ಡಮ್ಮ ಲತಾ, ನಿಖಿಲ್ ಕುಮಾರ್, ಅಶೋಕ್ ಮತ್ತು ರಕ್ಷಿತ್ ಎಂಬುವವರ ವಿರುದ್ಧ ಅನುರಾಧ ಎಂಬಾಕೆ ದೂರು ಸಲ್ಲಿದಿದ್ದರು.

6 ಗಂಟೆ ಸುಮಾರಿಗೆ ಮಂಜುಳಾ ಮನೆಯಲ್ಲಿ ಇಬ್ಬರು ಮಹಿಳಯರು ಕಸ ಗುಡಿಸುತ್ತಿದ್ದರು ಆಗ ಪಕ್ಕಕ್ಕೆ ಸರಿಯುವಂತೆ ಸ್ನೇಹಿತ್ ಬಾಡಿ ಗಾರ್ಡ್‌ಗಳಿಗೆ ಹೇಳಿದ್ದಾರೆ. ಈ ವೇಳೆ ಸ್ನೇಹಿತ್ ಪ್ರವೇಶಿಸಿ ಕೆಲಸ ಮಹಿಳೆಯ ಬಟ್ಟೆ ಎಳೆದಾಡಿದ್ದಾನೆ ಎನ್ನಲಾಗಿತ್ತು.

ಹಲ್ಲೆ ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿ ಸ್ನೇಹಿತ್ ಕುಟುಂಬ ಸಲೆಮರೆಸಿಕೊಂಡಿದ್ದರು. ಆದರೆ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆಯಲ್ಲಿ ಬಹಿರಂಗವಾಗಿ ಪಾಲ್ಗೊಂಡಿದ್ದರು. ಇದಾದ ಮೇಲೆ ಸ್ನೇಹಿತ್ ವಿರುದ್ಧ ದೂರು ನೀಡಿದ್ದ ಅನುರಾಧ ಕೇಸ್ ಹಿಂಪಡೆದುಕೊಂಡಿದ್ದಾರೆ. ಓದುತ್ತಿರುವ ಹುಡುಗನ ಜೀವನ ಹಾಳಾಗಬಾರದು ತಂದೆ ತಾಯಿ ತಿದ್ದುತಾರೆ ಸ್ನೇಹಿತ್ ತಂದೆ ಕ್ಷಮೆ ಕೇಳಿದ್ದಾರೆ ಎಂದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ