Rider Trailer Viral: ರೈಡರ್‌ ಟ್ರೇಲರ್‌ 63 ಲಕ್ಷ ವೀಕ್ಷಣೆ, ನಿಖಿಲ್ ಹವಾ ಜೋರು

Published : Dec 22, 2021, 10:26 AM ISTUpdated : Dec 22, 2021, 10:29 AM IST
Rider Trailer Viral: ರೈಡರ್‌ ಟ್ರೇಲರ್‌ 63 ಲಕ್ಷ ವೀಕ್ಷಣೆ, ನಿಖಿಲ್ ಹವಾ ಜೋರು

ಸಾರಾಂಶ

ರೈಡರ್‌ ಟ್ರೇಲರ್‌ 63 ಲಕ್ಷ ವೀಕ್ಷಣೆ ಡಿ.24ರಂದು ತೆರೆ ಕಾಣುತ್ತಿರುವ ನಿಖಿಲ್‌ ಕುಮಾರ್‌ ಸಿನಿಮಾ

ನಿಖಿಲ್‌ ಕುಮಾರ್‌ ನಟನೆಯ ‘ರೈಡರ್‌’(Rider) ಸಿನಿಮಾ ಇದೇ ಡಿ.24ರಂದು ತೆರೆಗೆ ಬರುತ್ತಿದೆ. ಪ್ರಸ್ತುತ ಚಿತ್ರದ ಟ್ರೈಲರ್‌ 63 ಲಕ್ಷ ವೀಕ್ಷಣೆ ದಾಖಲಿಸಿದೆ. ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರೇಕ್ಷಕರ ಈ ಮಟ್ಟದ ಮೆಚ್ಚುಗೆ ನೋಡಿ ಚಿತ್ರತಂಡ ಖುಷಿಯಾಗಿದೆ. ‘ನಮ್ಮ ಚಿತ್ರದ ಟ್ರೇಲರ್‌ (Trailer)ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇದೇ ಗೆಲುವು ಚಿತ್ರಕ್ಕೂ ದಕ್ಕುತ್ತದೆ ಎನ್ನುವ ಭರವಸೆ ಇದೆ. ಒಂದು ಆ್ಯಕ್ಷನ್‌ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಚಿತ್ರದಲ್ಲಿವೆ.

ನನಗೆ ಈ ಚಿತ್ರದಲ್ಲಿ ಡವ ಡವ ಹಾಗೂ ಎಮೋಷನ್‌ ಹಾಡು ತುಂಬಾ ಇಷ್ಟ. ಮೆಲೋಡಿ ಹಾಡು ಕೇಳಿ ಭಾವುಕನಾಗಿದ್ದೆ. ಮನರಂಜನೆ, ಭಾವುಕತೆ, ಪ್ರೀತಿ-ಪ್ರೇಮ, ಫೈಟ್‌ ಎಲ್ಲವೂ ಇಲ್ಲಿದೆ. ಈ ಕಾರಣಕ್ಕೆ ಈ ಚಿತ್ರವನ್ನು ಎಲ್ಲರೂ ನೋಡುತ್ತಾರೆ. ಸುಪ್ರಿತ್‌ ಅವರು ನಮ್ಮ ಚಿತ್ರದ ಟ್ರೇಲರ್‌ ನೋಡಿಯೇ ಚಿತ್ರದ ಬಿಡುಗಡೆಯ ಸಾರಥ್ಯ ವಹಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರುತ್ತದೆ ಎನ್ನುವ ಖುಷಿ. ನಮ್ಮ ನಿರ್ಮಾಪಕರಾದ ಸುನೀಲ್‌ ಅವರು ಯಾವುದಕ್ಕೂ ಕೊರತೆ ಮಾಡದೆ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಪ್ರತಿಯೊಬ್ಬ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಚಿತ್ರದ ಎಲ್ಲಾ ಹಾಡುಗಳು ಯೂಟ್ಯೂಬ್‌ನಲ್ಲಿ ನಾಲ್ಕು ಮಿಲಿಯನ್‌ ಹಿಟ್ಸ್‌ ದಾಟಿವೆ. ಇದು ಚಿತ್ರತಂಡಕ್ಕೆ ಸಿಕ್ಕಿರುವ ಉತ್ಸಾಹ. ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನೇ ಹೆಚ್ಚಾಗಿ ನೋಡಿ’ ಎಂದರು ನಿಖಿಲ್‌ ಕುಮಾರ್‌.

Rider Ready To Hit Screens: ಫುಟ್ಬಾಲ್ ಪ್ಲೇಯರ್ ಆಗಿ ನಿಖಿಲ್ ಅಬ್ಬರ

ವಿತರಕ ಸುಪ್ರೀತ್‌ ಮಾತನಾಡಿ, ‘ಚಿತ್ರದ ಟ್ರೇಲರ್‌ ನೋಡಿದಾಗ ಖಂಡಿತಾ ಇದೊಂದು ಒಳ್ಳೆಯ ಸಿನಿಮಾ ಅನಿಸಿತು. ಆ ನಂತರ ಸುನೀಲ್‌ ಹೇಳುತ್ತಿದ್ದ ಕತೆ ಕೂಡ ಕೇಳಿದೆ. ಒಳ್ಳೆಯ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಚಿತ್ರದ ಬಿಡುಗಡೆಗೆ ಮುಂದಾಗಿದ್ದೇವೆ’ ಎಂದರು. ನಿರ್ಮಾಪಕ ಸುನೀಲ್‌ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ಖುಷಿಯಲ್ಲಿದ್ದರು. ಇದೇ ರೀತಿ ಮುಂದೆ ಒಳ್ಳೆಯ ಚಿತ್ರಗಳನ್ನು ನಿರ್ಮಿಸಬೇಕು ಎನ್ನುವ ಗುರಿ ವ್ಯಕ್ತಪಡಿಸಿದರು ಸುನೀಲ್‌.

ನಿರ್ಮಾಪಕ ಸುನೀಲ್‌, ಚಿತ್ರದ ವಿತರಕ ಸುಪ್ರೀತ್‌, ಚಿತ್ರದಲ್ಲಿ ನಟಿಸಿರುವ ಅನುಷಾ ರೈ, ಅರ್ಜುನ್‌ ಗೌಡ, ಶಿವರಾಜ್‌ ಕೆ ಆರ್‌ ಪೇಟೆ, ಸಂತೋಷ್‌, ಗಿರಿ ಸೇರಿದಂತೆ ಹಲವರು ಹಾಜರಿದ್ದರು.

ಹಾಡುಗಳೂ ಹಿಟ್

ಸ್ಯಾಂಡಲ್‌ವುಡ್‌ನ(Sandalwood) ಯುವರಾಜ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ಬಹು ನಿರೀಕ್ಷಿತ 'ರೈಡರ್' (Rider) ಚಿತ್ರದ ಮೊದಲ ಹಾಡು ಯೂಟ್ಯೂಬ್‌ನಲ್ಲಿ (Youtube) ಬಿಡುಡೆಯಾಗಿದೆ. ಈ ಹಾಡಿಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿದೆ (Trending). ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಯೋಜಿಸಿರುವ ಈ ಹಾಡಿನಲ್ಲಿ ನಿಖಿಲ್ ಸ್ಟೈಲಿಶ್​ ಲುಕ್​ನಲ್ಲಿ ನಟಿ ಕಾಶ್ಮೀರಿ ಪರ್ದೇಸಿ ಜೊತೆ ಬೊಂಬಾಟ್ ಸ್ಟೆಪ್ಸ್‌ ಹಾಕಿದ್ದು, 20 ಲಕ್ಷಕ್ಕೂ ಹೆಚ್ಚು ಸಿನಿರಸಿಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

'ಸೀತಾರಾಮ ಕಲ್ಯಾಣ' (Seetharama Kalyana) ಚಿತ್ರದ ಮೂಲಕ ಲವರ್ ಬಾಯ್​ ಆಗಿ ಸ್ಯಾಂಡಲ್​ವುಡ್​ ಪ್ರೇಕ್ಷಕರನ್ನು ರಂಜಿಸಿದ್ದ ನಿಖಿಲ್ ಕುಮಾರಸ್ವಾಮಿ  'ರೈಡರ್' ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ (Basketball Player) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕುಮಾರ್ ಕೊಂಡ (Vijay Kumar Konda) ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿಖಿಲ್‌ಗೆ ನಾಯಕಿಯಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ (Kashmira Pardeshi) ನಟಿಸಿದ್ದು, ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ (Anusha Rai) ಅಭಿನಯಿಸಿದ್ದಾರೆ. ರಿಲೀಸ್ ಆಗಿರುವ 'ಡವ್ವ ಡವ್ವ' ರೊಮ್ಯಾಂಟಿಕ್ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯವಿದ್ದು, ಅರ್ಮಾನ್ ಮಲಿಕ್ (Armaan Malik) ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ.  ಚಿತ್ರಕ್ಕೆ ಲಹರಿ ಮ್ಯೂಸಿಕ್ ಹಾಗೂ ಟಿ-ಸಿರೀಸ್ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್
ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ