Arjun Gowda: ಡೈನಾಮಿಕ್ ಪ್ರಿನ್ಸ್ ಚಿತ್ರದ ಮಾಸ್ ಹಾಡನ್ನು ರಿಲೀಸ್ ಮಾಡಿದ ದುನಿಯಾ ವಿಜಯ್

By Suvarna News  |  First Published Dec 21, 2021, 9:46 PM IST

ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಅಭಿನಯದ 'ಅರ್ಜುನ್ ಗೌಡ' ಚಿತ್ರದ 'ಮಾರ್ ಮಾರ್ ಮಾರ್' ಸಾಂಗ್ ರಿಲೀಸ್ ಆಗಿದೆ. ವಿಶೇಷವಾಗಿ ಈ ಹಾಡನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿದ್ದಾರೆ.


ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ಅಭಿನಯದ 'ಅರ್ಜುನ್ ಗೌಡ' ಚಿತ್ರ ಈ ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಟಿಯನ್ನು ನಡೆಸಿ ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಚಿತ್ರತಂಡ ಚಿತ್ರದ ಲಿರಿಕಲ್ ಹಾಡೊಂದನ್ನು ಬಿಡುಗಡೆ ಮಾಡಿದೆ. ಹೌದು! 'ಅರ್ಜುನ್ ಗೌಡ' ಚಿತ್ರದ 'ಮಾರ್ ಮಾರ್ ಮಾರ್' ಸಾಂಗ್ ರಿಲೀಸ್ ಆಗಿದೆ. ವಿಶೇಷವಾಗಿ ಈ ಹಾಡನ್ನು ಕನ್ನಡ ಚಿತ್ರರಂಗದ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ದುನಿಯಾ ವಿಜಯ್, ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ 'ಅರ್ಜುನ್ ಗೌಡ' ಚಿತ್ರದ ಮಾಸ್ ಸಾಂಗ್ ಬಿಡುಗಡೆಯಾಗಿದೆ. 'ಮಾರ್ ಮಾರ್ ಮಾರ್' ಸಾಂಗ್ ಎಂಬ ಹಾಡನ್ನು ನಾನು ನೋಡಿದೆ ಖುಷಿಯಾಯ್ತು. ಹಾಗೆ  ಜೋಶ್ ಕೂಡಾ ಬಂತು. ಹಾಗೂ ಈ ಚಿತ್ರವನ್ನು ನಮಗಿಂತ ಸೀನಿಯರ್ ನಿರ್ದೇಶಕರು ಕಷ್ಟಪಟ್ಟು ಮಾಡಿದ್ದಾರೆ. ಮುಖ್ಯವಾಗಿ ರಾಮು ಫಿಲಂಸ್ ಬ್ಯಾನರ್‌ನಲ್ಲಿ ಲಕ್ಕಿ ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿದ್ದು, ಈ ಚಿತ್ರದ ಸಾಂಗ್ ಕೇಳುತ್ತಿದ್ದರೆ ತುಂಬಾ ಜೋಶ್ ಬರುತ್ತೆ. ಯಂಗ್ ಬಾಯ್ಸ್ ಈ ಸಾಂಗನ್ನು ಎಂಜಾಯ್ ಮಾಡಬಹುದು ಎಂದು ಹೇಳಿದ್ದಾರೆ.

Tap to resize

Latest Videos

undefined

Arjun Gowda: ಬೆಳ್ಳಿಪರದೆ ಮೇಲೆ ಎಂಟ್ರಿ ಕೊಡಲು ಸಜ್ಜಾದ ಪ್ರಜ್ವಲ್ ದೇವರಾಜ್

ಈ ಹಾಡಿನ ಬಗ್ಗೆ ಮಾಲಾಶ್ರೀ ರಾಮು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ದುನಿಯಾ ವಿಜಯ್ ಅವರಿಂದ ಪಕ್ಕಾ ಮಾಸ್ ಹಾಡಿನ ಲಿರಿಕಲ್ ವಿಡಿಯೋ ಇಂದು ಲಾಂಚ್ ಆಗಲಿದೆ ಎಂದು ಪೋಸ್ಟ್‌ ಮಾಡಿದ್ದರು. 'ಅರ್ಜುನ್ ಗೌಡ' ಚಿತ್ರದ 'ಮಾರ್ ಮಾರ್ ಮಾರ್' ಹಾಡಿಗೆ ಧರ್ಮ ವಿಶ್ ಸಂಗೀತ ಸಂಯೋಜಿಸಿದ್ದು, ಲಕ್ಕಿ ಶಂಕರ್-ಚಿರಾಯು ಸಾಹಿತ್ಯ ರಚಿಸಿದ್ದಾರೆ. 'ಟಗರು' ಖ್ಯಾತಿಯ ಅಂಥೋನಿ ದಾಸನ್ ಹಾಗೂ ಚಿರಾಯು ದನಿಯಲ್ಲಿ ಈ ಮಾಸ್ ಸಾಂಗ್ ಮೂಡಿಬಂದಿದ್ದು, ಸಿನಿರಸಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ ಚಿತ್ರದ 'ಕನವರಿಕೆ ನಿನ್ನದೇ ಚಡಪಡಿಕೆ ನಿನ್ನದೇ' ಎಂಬ ಹಾಡು ರಿಲೀಸ್ ಆಗಿತ್ತು. ಪ್ರಜ್ವಲ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಕಾಂಬಿನೇಷನ್ ಕೆಮಿಸ್ಟ್ರಿ ಈ ಹಾಡಿನಲ್ಲಿ ಅದ್ಭುತವಾಗಿ ಮೂಡಿಬಂದಿತ್ತು.
 


ಆ್ಯಕ್ಷನ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ಧೂರಿ ಚಿತ್ರಗಳನ್ನು ನಿರ್ಮಿಸಿ ಹೆಸರಾದ ರಾಮು ಫಿಲಂಸ್ ಸಂಸ್ಥೆಯ ಕೋಟಿ ನಿರ್ಮಾಪಕ ಎಂದೇ ಹೆಸರುವಾಸಿಯಾದ ರಾಮು (Ramu) ಅವರು ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಶಂಕರ್ (Shankar) ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಲಾಕ್​ಡೌನ್​ ಆಗದೆ ಹೋಗಿದ್ದರೆ ಈ ಚಿತ್ರ ಏಪ್ರಿಲ್​​ನಲ್ಲಿ ಬಿಡುಗಡೆಯಾಗಬೇಕಿತ್ತು. ಅಲ್ಲದೇ ಚಿತ್ರದ ನಿರ್ಮಾಪಕರಾದ ರಾಮು ಅವರು ಕೊರೊನಾಗೆ ಬಲಿಯಾಗಿದ್ದರಿಂದ ಸಿನಿಮಾದ ಬಿಡುಗಡೆಗೆ ತಡವಾಯಿತು. ಹಾಗಾಗಿ ರಾಮು ಪತ್ನಿ ಮಾಲಾಶ್ರೀ (Malashree) ಇದೀಗ ಪತಿಯ ಕನಸನ್ನು ನನಸು ಮಾಡುತ್ತಿದ್ದಾರೆ. ರಾಮು ನಿರ್ಮಾಣ ಮಾಡಿದ ಕೊನೇ ಸಿನಿಮಾ ತೆರೆ ಕಾಣಿಸಲು ಮಾಲಾಶ್ರೀ ನಿರ್ಧರಿಸಿದ್ದಾರೆ.

Arjun Gowda: ಪ್ರಿಯಾಂಕ ತಿಮ್ಮೇಶ್ 'ಕನವರಿಕೆ'ಯಲ್ಲಿ ಏಕಾಂಗಿಯಾದ ಪ್ರಜ್ವಲ್ ದೇವರಾಜ್

ಇನ್ನು ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿ‌ರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ. ಅಲ್ಲದೇ ಸಾಹಸ ನಿರ್ದೇಶಕ ಮಾಸ್ ಮಾದ ಈ ಚಿತ್ರದಲ್ಲಿ ಏಳು ಸಾಹಸ ಸನ್ನಿವೇಶಗಳನ್ನ ಕಂಪೋಸ್ ಮಾಡಿದ್ದಾರೆ. ಬಾಲಿವುಡ್​​ನ ರಾಹುಲ್ ದೇವ್, ಸ್ಪರ್ಶ ರೇಖಾ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭಿತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 

click me!