
'ನಟ ಸಾರ್ವಭೌಮ' ಚಿತ್ರದ ಬಳಿಕ ಪವನ್ ಒಡೆಯರ್ (Pavan Wadeyar) ನಿರ್ದೇಶನದ ಬಹುನಿರೀಕ್ಷಿತ 'ರೇಮೊ' (Raymo) ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. 'ರೋಗ್' ಸಿನಿಮಾ ಖ್ಯಾತಿಯ ಇಶಾನ್ (Ishan) ಸ್ಟೈಲಿಷ್ ಅವತಾರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆಶಿಕಾ ರಂಗನಾಥ್ (Ashika Ranganath) ಶಾಸ್ತ್ರೀಯ ಸಂಗೀತಗಾರ್ತಿಯಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಇದೊಂದು ಮ್ಯೂಸಿಕಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ಅತೀ ಶೀಘ್ರದಲ್ಲೇ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸಿ ಶುಭ ಕೋರಿದ್ದಾರೆ.
ನಾನು ದುಬೈನಲ್ಲಿ ಪವನ್ ಒಡೆಯರ್ ಅವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಮಾತನಾಡಿಕೊಂಡೆವು. ನಂತರ ಈ ಚಿತ್ರದ ಜರ್ನಿ ಆರಂಭವಾಯಿತು. ನನ್ನ ಅಣ್ಣ ಮನೋಹರ್ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಅವರ ಹಾಗೂ ನನ್ನ ಮತ್ತೊಬ್ಬ ಅಣ್ಣ ಸಿ.ಆರ್ ಗೋಪಿ ಅವರ ಪ್ರೀತಿಗೆ ನಾನು ಚಿರ ಋಣಿ. ಪವನ್ ಒಡೆಯರ್ ನಿರ್ದೇಶನದಲ್ಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಆಶಿಕಾ ರಂಗನಾಥ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ, ಅರ್ಜುನ್ ಜನ್ಯ (Arjun Janya) ಅವರ ಸಂಗೀತ ಸಂಯೋಜನೆ, ವೈದಿ ಅವರ ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ. ಚಿತ್ರ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಚಿತ್ರದ ನಾಯಕ ಇಶಾನ್ ಹೇಳಿದರು.
ಬದಲಾದುವು ರೆಮೋ ಹಾಡುಗಳು;ಪವನ್ ಒಡೆಯರ್ ಕೊಟ್ಟ 5 ಕಾರಣಗಳು!
ನಾನು ಬರೆದಂತ ಪಾತ್ರಗಳನ್ನು ಪ್ರೀತಿಯಿಂದ ಅಪ್ಪಿಕೊಂಡು ಅಭಿನಯಿಸಿದ ಕಲಾವಿದರಿಗೆ, ನಾನು ಕಂಪೋಸ್ ಮಾಡಿದ ಬ್ಯುಟಿಫುಲ್ ವಿಸ್ಯುಲೈಸೇಶನಿಗೆ ಕೊಡುಗೆ ನೀಡಿರುವ ತಂತ್ರಜ್ಞರಿಗೆ ಇದೆಲ್ಲಕ್ಕೂ ಸಾಥ್ ನೀಡಿದ ನಿರ್ಮಾಪಕ ಮನೋಹರ್ ಅವರಿಗೆ ತುಂಬು ಹೃದಯದ ಧನ್ಯವಾದವನ್ನು ಚಿತ್ರದ ನಿರ್ದೇಶಕ ಪವನ್ ಒಡೆಯರ್ ತಿಳಿಸಿದರು. ಹಾಗೂ ಚಿತ್ರದ ಟೀಸರ್ ನೋಡಿದವರು ನಿಮ್ಮ ಹಾಗೂ ಇಶಾನ್ ಅವರ ಜೋಡಿ ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಮೋಹನ ಎಂಬ ಪಾತ್ರದಲ್ಲಿ ನಾನು ನಟಿಸಿದ್ದೀನಿ. ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ. ಹೀಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಆಶಿಕಾ ರಂಗನಾಥ್ ಹೇಳಿದರು.
ನಮ್ಮದು ತುಂಬು ಕುಟುಂಬ. ಇಶಾನ್ ನನ್ನ ತಮ್ಮ(ಚಿಕ್ಕಪ್ಪನ ಮಗ). ನಮ್ಮ ಮನೆಗೆ ಬಂದವರೆಲ್ಲ ಇಶಾನನ್ನು ಹೀರೋ ಮಾಡಿ ಎನ್ನುತ್ತಿದ್ದರು. 'ರೋಗ್' ಚಿತ್ರದ ಮೂಲಕ ಅವನು ಹಿರೋ ಆದ. ನಂತರ ಪವನ್ ಒಡೆಯರ್ ಈ ಚಿತ್ರದ ಕಥೆ ಹೇಳಿದರು. ಇಷ್ಟವಾಯಿತು. ನಾನು ಸಿನಿಮಾ ನೋಡಿದ್ದೀನಿ. ಚೆನ್ನಾಗಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಈ ಸಮಾರಂಭಕ್ಕೆ ಪ್ರೀತಿಯಿಂದ ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದಗಳು. ನನ್ನ ಚಿತ್ರ ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡಲ್ಲ ಎಂದು ಸಿ.ಆರ್.ಮನೋಹರ್ (C.R.Manohar) ಈ ಸಂದರ್ಭದಲ್ಲಿ ತಿಳಿಸಿದರು.
ಸೌತ್ ಆಫ್ರಿಕಾದಲ್ಲಿ ಆಶಿಕಾ ಮೇಲೆ ಕಣ್ಣು ಹಾಕಿದವನಿಗೆ ಬಿತ್ತು ಗೂಸಾ!
ಇನ್ನು ಬಿಡುಗಡೆಯಾದ 'ರೇಮೊ' ಟೀಸರ್‌ನಲ್ಲಿ, ರೇವಂತ್ ಪಾತ್ರದಲ್ಲಿ ಇಶಾನ್ ರಾಕ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದು, ಆಕ್ಟಿಂಗ್ ಜೊತೆಗೆ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ಮುಖ್ಯವಾಗಿ ಇಶಾನ್, ಡಬಲ್ ಡೆಕ್ಕರ್ ಗಿಟಾರ್ ಕಲಿತುಕೊಂಡು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಶಿಕಾ ರಂಗನಾಥ್ ಮೋಹನ ಪಾತ್ರದಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಶಾಸ್ತ್ರೀಯ ಸಂಗೀತಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇಶಾನ್ ಹಾಗು ಆಶಿಕಾ ರಂಗನಾಥ್ ಜೊತೆಗೆ ಶರತ್ ಕುಮಾರ್, ಮಧುಬಾಲ, ರಾಜೇಶ್ ನಟರಂಗ, ಶರಣ್ಯ ಶರಣ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಹಾಗೂ ವೈದಿ ಕ್ಯಾಮರಾ ಕೈ ಚಳಕವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.