Garuda Gamana Vrishabha Vahana: ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ ರಕ್ಷಿತ್‌ ಶೆಟ್ಟಿ

By Suvarna News  |  First Published Nov 27, 2021, 4:49 PM IST

ಚಿತ್ರ ನಿರ್ಮಾಪಕರಾದ ರವಿ ರೈ ಕಳಸ ಹಾಗೂ ವಚನ್‌ ಶೆಟ್ಟಿ, ಕಾಫಿ ಗ್ಯಾಂಗ್‌ ಸ್ಟುಡಿಯೋದ ವಿಕಾಸ್‌ ಮತ್ತು ಶ್ರೀಕಾಂತ್‌, ಚಿತ್ರದ ನಾಯಕ ರಾಜ್‌ ಬಿ ಶೆಟ್ಟಿ ಮತ್ತು ತಂಡಕ್ಕೆ, ಈ ಚಿತ್ರವನ್ನು ತಯಾರಿಸಿದ ಲೈಟರ್‌ ಬುದ್ಧ ಫಿಲ್ಮ್ಸ್‌ಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ. 


ರಿಷಬ್‌ ಶೆಟ್ಟಿ (Rishab Shetty) ಹಾಗೂ ರಾಜ್‌ ಬಿ. ಶೆಟ್ಟಿ (Raj B Shetty) ಕಾಂಬಿನೇಷನ್‌ನ 'ಗರುಡಗಮನ ವೃಷಭವಾಹನ' (Garuda Gamana Vrishabha Vahana) ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈಗಾಗಲೇ ಬಹಳಷ್ಟು ಜನ ಗಣ್ಯರು ಸಿನಿಮಾ ನೋಡಿ ಮೆಚ್ಚಿಕೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೀಗ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ (Rakshit Shetty) 'ಗರುಡ ಗಮನ ವೃಷಭ ವಾಹನ' ಚಿತ್ರ ತಂಡವನ್ನು ಮತ್ತು ನಿರ್ಮಾಪಕರನ್ನು ಹೃದಯಸ್ಪರ್ಶಿಯಾಗಿ ಶ್ಲಾಘಿಸಿದ್ದು, ಈ ಬಗ್ಗೆ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದಾರೆ.

'ಚಿತ್ರ ನಿರ್ಮಾಪಕರಾದ ರವಿ ರೈ ಕಳಸ ಹಾಗೂ ವಚನ್‌ ಶೆಟ್ಟಿ, ಕಾಫಿ ಗ್ಯಾಂಗ್‌ ಸ್ಟುಡಿಯೋದ ವಿಕಾಸ್‌ ಮತ್ತು ಶ್ರೀಕಾಂತ್‌, ಚಿತ್ರದ ನಾಯಕ ರಾಜ್‌ ಬಿ ಶೆಟ್ಟಿ ಮತ್ತು ತಂಡಕ್ಕೆ, ಈ ಚಿತ್ರವನ್ನು ತಯಾರಿಸಿದ ಲೈಟರ್‌ ಬುದ್ಧ ಫಿಲ್ಮ್ಸ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಇಂತಹ ಸುಂದರ ಕಲೆಯನ್ನು ಪರಂವಃ ಸ್ಟುಡಿಯೋಸ್‌ ಮೂಲಕ ಪರಿಚಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು' ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ (Tweet) ಮಾಡಿದ್ದಾರೆ. ಜೊತೆಗೆ ಅತ್ಯುತ್ತಮ ಚಿತ್ರದ ಭಾಗವಾಗಿರುವುದಕ್ಕೆ ರಿಷಬ್ ಶೆಟ್ಟಿ ಅವರಿಗೆ, ತಮ್ಮ ಜೊತೆ ಸಿನಿ ಪಯಾಣ ಬೆಳೆಸಿದ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಅವರಿಗೆ, ಚಿತ್ರವನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ, ವೀಕ್ಷಕರಿಗೆ ರಕ್ಷಿತ್‌ ಶೆಟ್ಟಿ ಧನ್ಯವಾದಗಳನ್ನು ತಿಳಿಸಿದ್ದಾರೆ.

Tap to resize

Latest Videos

ಗರುಡ ಗಮನ ವೃಷಭ ವಾಹನ ಚಿತ್ರದ 'ಎಂದೋ ಬರೆದ ಕವಿತೆ' ಹಾಡು ರಿಲೀಸ್

ಇನ್ನು, 'ಗರುಡಗಮನ ವೃಷಭವಾಹನ' ಚಿತ್ರದ 'ಸೋಜುಗಾದ ಸೂಜು ಮಲ್ಲಿಗೆ' (Sojugada Soojumallige) ಲಿರಿಕಲ್ ವಿಡಿಯೋ  ಸಾಂಗ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಮಿದುನ್ ಮುಕುಂದನ್ (Midhun Mukundan) ಸಂಗೀತ ಸಂಯೋಜಿಸುವ ಜೊತೆಗೆ ಚೈತ್ರಾ ಜೆ ಆಚಾರ್ (Chaithra J Achar) ಜೊತೆ ಹಾಡಿಗೆ ದನಿಯಾಗಿದ್ದಾರೆ. ಕೊಲೆ ಮಾಡಿ ವಿಕೃತವಾಗಿ ಕುಣಿವ ಕೊಲೆಗಾರನಿಗೆ ಮಾದೇವಾ ಹಾಡು ಯಾಕೆ? ಕೊಲೆಗಡುಕನೊಬ್ಬ ಸ್ವಾಮೀಜಿಯ ಪಾದರಕ್ಷೆ ಧರಿಸುವುದೇಕೆ? ಸೈಕೋಪಾತ್ ಒಬ್ಬನನ್ನು ವೈಭವೀಕರಿಸಲು ಈ ಹಾಡನ್ನು ಬಳಸಿಕೊಂಡಿದ್ದೇಕೆ? ಎಂದು ಇತ್ತೀಚೆಗೆ ಆನ್‍ಲೈನ್‍ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

A hearfelt appreciation to the producers of GGVV, Ravi Rai Kalasa & Vachan Shetty, to Vikas & Srikanth of and & his team's for producing this film. Thanks to you guys Paramvah got the opportunity to present this beautiful art😊

— Rakshit Shetty (@rakshitshetty)


'ಗರುಡಗಮನ ವೃಷಭವಾಹನ' ಚಿತ್ರಕ್ಕೆ ರಾಜ್‌ ಬಿ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ಮಂಗಳೂರಿನ ಭೂಗತ ಜಗತ್ತಿನ ಸುತ್ತ ಕಥಾಹಂದರವಿದೆ. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ವಿಪರೀತ ಸ್ವಭಾವ. ಇಂಥ ಸ್ವಭಾವದ ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್‌ ಮಾಡ್ತಾರೆ ಅನ್ನುವ ಕಥೆ. ಲೈಟರ್‌ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್‌ ಶೆಟ್ಟಿ ಚಿತ್ರ ನಿರ್ಮಿಸಿದ್ದಾರೆ. ಹಾಗೂ ಪರಂವಃ ಸ್ಟುಡಿಯೋ ಮೂಲಕ ರಕ್ಷಿತ್‌ ಶೆಟ್ಟಿ ಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ.

Garuda Gamana Vrishabha Vahana: ಕೊಲೆಯ ವೇಳೆ ಶ್ಲೋಕಗಳೇಕೆ? ಸಿನಿಮಾಗೆ ವಿರೋಧ

ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿರುವ ಈ ಚಿತ್ರವು ರಾಜ್ಯಾದ್ಯಂತ ಭಾರೀ ಮೆಚ್ಚುಗೆಯನ್ನು ಪಡೆಯುತ್ತಿದ್ದು, ಇತ್ತೀಚೆಗಷ್ಟೇ ನಗರದ ಊರ್ವಶಿ ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸಿದ ಸಿನಿಪ್ರೇಕ್ಷಕರು ಸಿನಿಮಾವನ್ನು ಕೊಂಡಾಡಿದ್ದಾರೆ. ಜೊತೆಗೆ ರಿಷಬ್‌ ಶೆಟ್ಟಿ ಹಾಗೂ ರಾಜ್‌ ಬಿ. ಶೆಟ್ಟಿ ಅಭಿಮಾನಿಗಳಿಗೆ ಸಾಥ್ ಕೊಟ್ಟಿದ್ದು, ಒಂದು ಹೊಸ ಪ್ರಯತ್ನವನ್ನು ಮಾಡಿದ್ದೇವೆ. ಒಳ್ಳೆಯ ಪ್ರಯತ್ನ, ಮನಸುಗಳು, ಯೋಚನೆಗಳೆಲ್ಲಾ ಒಟ್ಟಾಗಿ ಸೇರಿದರೆ ಒಂದು ಒಳ್ಳೆಯ ಸಿನಿಮಾವಾಗುತ್ತದೆ. ಆ ಸಿನಿಮಾದಿಂದನೇ ನಾವೆಲ್ಲಾ. ಸಿನಿಮಾ ವೀಕ್ಷಿಸಿದ ಎಲ್ಲರಿಗೂ ಥ್ಯಾಂಕ್ಸ್ ಎಂದು ಹೇಳಿದ್ದರು.

click me!